newsfirstkannada.com

ಕೇಂದ್ರದ ವಿರುದ್ಧ ಮತ್ತೆ ಸಿಡಿದೆದ್ದ ಅನ್ನದಾತರು; ದಿಢೀರ್ ಹರಿಯಾಣಕ್ಕೆ ಮೂವರು ಸಚಿವರ ಕಳುಹಿಸಿದ ಪ್ರಧಾನಿ ಮೋದಿ..!

Share :

Published February 9, 2024 at 8:50am

Update February 9, 2024 at 8:52am

  ಅನ್ನದಾತರಿಂದ ದೆಹಲಿಗೆ ಬೃಹತ್ ಪಾದಯಾತ್ರೆ ಮಾಡಲು ನಿರ್ಧಾರ

  ರೈತ ಮುಖಂಡರ ಜೊತೆ ಸಚಿವರು ಮಾತುಕತೆ, ಏನಾಯ್ತು..?

  ಪಂಜಾಬ್ ಮುಖ್ಯಮಂತ್ರಿ ಜೊತೆಗೂ ಚರ್ಚೆ ನಡೆಸಿದ ಸಚಿವರು

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಗಾಗಿ ಪಂಜಾಬ್‌ನ ರೈತರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದಾರೆ. ಎಂಎಸ್​ಪಿ ಬೆಲೆಗಾಗಿ ದೆಹಲಿಗೆ ಬೃಹತ್ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ರಾಷ್ಟ್ರರಾಜಧಾನಿಯಲ್ಲಿ ಮತ್ತೊಮ್ಮೆ ಅನ್ನದಾತರ ಕಹಳೆ ಮೊಳಗುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ ಪಂಜಾಬ್‌ನ ಪ್ರತೀ ಹಳ್ಳಿಯಲ್ಲಿರುವ ರೈತರು ಒಗ್ಗಟ್ಟಾಗಿ ದೆಹಲಿಗೆ ಹೊರಡಲು ಸಿದ್ಧರಾಗಿದ್ದಾರೆ. 2020ರಲ್ಲಿ ದೆಹಲಿ ಸೇರಿದಂತೆ ದೇಶದಾದ್ಯಂತ ಅನ್ನದಾತರು ಪ್ರತಿಭಟನೆ ನಡೆಸಿದ್ದರು. ಅದು ಬರೋಬ್ಬರಿ 378 ದಿನಗಳ ಕಾಲ ನಡೆದಿತ್ತು. ದೆಹಲಿ ಮತ್ತು ಹರಿಯಾಣ ಗಡಿಗಳಲ್ಲಿ ರೈತರು ಪ್ರತಿಭಟನೆಗೆ ಕೂತಿದ್ದರು. ಕೊನೆಗೂ ರೈತರ ಪ್ರತಿಭಟನೆಗೆ ಮಣಿದಿದ್ದ ಕೇಂದ್ರ ಸರ್ಕಾರ, ಮೂರು ನೂತನ ಕೃಷಿ ಕಾಯ್ದೆಯನ್ನು ರದ್ದು ಮಾಡಿತ್ತು.

ಇದೀಗ ಮತ್ತೆ ರೈತರು ದೆಹಲಿಯತ್ತ ಹೊರಡಲು ಸೆಟೆದು ನಿಂತಿದ್ದಾರೆ. ರೈತರ ಪಾದಯಾತ್ರೆ ಹಿನ್ನೆಲೆಯಲ್ಲಿ ಅವರನ್ನು ಹರಿಯಾಣದಲ್ಲಿಯೇ ತಡೆದು ನಿಲ್ಲಿಸಲು ಹರಿಯಾಣ ಸರ್ಕಾರ ಪ್ಲಾನ್ ಮಾಡಿದೆ. ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಗೂ ಮೇಲ್ವಿಚಾರಣೆ ಕೇಂದ್ರವನ್ನು ಸ್ಥಾಪಿಸುತ್ತಿದೆ ಎಂದು ವರದಿಯಾಗಿದೆ.

ಮಾತುಕತೆಗೆ ಕಳುಹಿಸಿರುವ ಕೇಂದ್ರ
ರೈತರ ಜೊತೆಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಮೂವರು ಸಚಿವರನ್ನು ಕಳುಹಿಸಿದೆ. ಕೃಷಿ ಸಚಿವ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಚಂಡೀಗಢದಲ್ಲಿ ರೈತ ಮುಖಂಡರನ್ನು ಭೇಟಿ ಮಾಡಿದ್ದಾರೆ. ಅನ್ನದಾತರ ಕೋಪ ತಣಿಸುವ ಹೊಣೆಯನ್ನು ಮೂವರು ಹಿರಿಯ ಸಚಿವರಿಗೆ ನೀಡಲಾಗಿದೆ. ಜೊತೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್​ ಜೊತೆಗೂ ಮಾತುಕತೆ ನಡೆಸಿದ್ದಾರೆ.

ರೈತ ಮುಖಂಡರು ಹೇಳಿದ್ದೇನು?
ಕೇಂದ್ರ ಸಚಿವರು ಎಂಎಸ್‌ಪಿಯನ್ನು ಬೆಂಬಲಿಸಿದ್ದಾರೆ. ಜೊತೆಗೆ ನಮ್ಮ ಬೇಡಿಕೆ ಏನೇನು ಅನ್ನೋದನ್ನೂ ಆಲಿಸಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಮಾತನಾಡಬೇಕು ಎಂದು ಅವರುಗಳು ಹೇಳಿದ್ದಾರೆ. ಫೆಬ್ರವರಿ 13 ವರೆಗೆ ಕೇಂದ್ರ ಸರ್ಕಾರಕ್ಕೆ ನಿರ್ಧಾರ ತಿಳಿಸಲು ಕಾಲಾವಕಾಶ ನೀಡುತ್ತಿದ್ದೇವೆ. ಒಂದು ವೇಳೆ ಸಾಧ್ಯವಾಗದಿದ್ದರೆ ಫೆಬ್ರವರಿ 13ರಿಂದ ದೆಹಲಿ ಚಲೋ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಎಂ ಭಗವಂತ್ ಮಾನ್ ಹೇಳಿದ್ದೇನು?
ರೈತರ ಬೇಡಿಕೆಯ ಕೆಲವು ವಿಷಯಗಳಲ್ಲಿ ಒಮ್ಮತಕ್ಕೆ ಬರಲಾಗಿದೆ. ಇಂದಿಗೂ ಮಾತುಕತೆ ಮುಂದುವರಿಯಲಿದೆ. ಎಂಎಸ್‌ಪಿ ವಿಚಾರವಾಗಿ ಕೇಂದ್ರ ಸಚಿವರು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಎಂಎಸ್​ಪಿ ವಿಚಾರ ದೆಹಲಿಯಲ್ಲಿಯೇ ನಡೆಯಬೇಕಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರದ ವಿರುದ್ಧ ಮತ್ತೆ ಸಿಡಿದೆದ್ದ ಅನ್ನದಾತರು; ದಿಢೀರ್ ಹರಿಯಾಣಕ್ಕೆ ಮೂವರು ಸಚಿವರ ಕಳುಹಿಸಿದ ಪ್ರಧಾನಿ ಮೋದಿ..!

https://newsfirstlive.com/wp-content/uploads/2024/02/HARIYANA.jpg

Load More