ಓಪನ್ ಪ್ಲೇಸ್‌ನಲ್ಲಿ ಮಾಡೆಲ್​ಗಳ ವಯ್ಯಾರಕ್ಕೆ ಬೆಚ್ಚಿ ಬಿದ್ದ ಕಾಶ್ಮೀರ! ಫ್ಯಾಷನ್ ಶೋಗೆ ವಿರೋಧ ಯಾಕೆ?

author-image
admin
Updated On
ಓಪನ್ ಪ್ಲೇಸ್‌ನಲ್ಲಿ ಮಾಡೆಲ್​ಗಳ ವಯ್ಯಾರಕ್ಕೆ ಬೆಚ್ಚಿ ಬಿದ್ದ ಕಾಶ್ಮೀರ! ಫ್ಯಾಷನ್ ಶೋಗೆ ವಿರೋಧ ಯಾಕೆ?
Advertisment
  • ಹಿಮಚ್ಛಾದಿತ ನೈಸರ್ಗಿಕ ಸೌಂದರ್ಯದ ಮಧ್ಯೆ ಮಾಡೆಲ್‌ಗಳು
  • ಗುಲ್ ಮಾರ್ಗ್​ನ ಫ್ಯಾಷನ್ ಶೋ ಸಂಭ್ರಮಕ್ಕೆ ವಿರೋಧ ಯಾಕೆ?
  • ಆಕ್ಷಪಣೆಗೆ ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಪ್ರತಿಕ್ರಿಯೆ

ಶ್ರೀನಗರ: ಉಗ್ರರ ದಾಳಿಗೆ ನಲುಗಿದ್ದ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಫ್ಯಾಷನ್ ಶೋ ಸಂಭ್ರಮ ಮೇಳೈಸಿದೆ. ಹಿಮಚ್ಛಾದಿತ ಗುಲ್ ಮಾರ್ಗ್​ನ ನೈಸರ್ಗಿಕ ಸೌಂದರ್ಯದ ಮಧ್ಯೆ ಮಾಡೆಲ್‌ಗಳು ಬೆಕ್ಕಿನ ನಡಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಮಂಜು ತುಂಬಿದ ಓಪನ್ ಪ್ಲೇಸ್​ನಲ್ಲಿ ಮಾಡೆಲ್​ಗಳ ವಯ್ಯಾರ, ಫ್ಯಾಷನ್ ಶೋ ಸಂಭ್ರಮಕ್ಕೆ ಕಳೆಕಟ್ಟಿದೆ. ಜಮ್ಮು-ಕಾಶ್ಮೀರ ಈಗ ಶಾಂತಿಯ ಬೀಡು ಅನ್ನೋ ಸಂದೇಶ ಸಾರೋದಕ್ಕೆ ಹಗಲು ಹೊತ್ತಿನಲ್ಲೇ ಫ್ಯಾಷನ್ ಶೋ ಪ್ರದರ್ಶಿಸಲಾಗುತ್ತಿದೆ.

publive-image

ಫ್ಯಾಷನ್ ಪ್ರಿಯರ ಕಣ್ಮನ ಸೆಳೆದಿರುವ ಕಾಶ್ಮೀರದ ಫ್ಯಾಷನ್ ಶೋ ಮೇಲೆ ಇದೀಗ ಕಾಶ್ಮೀರಿ ಮೂಲಭೂತವಾದಿಗಳ ವಕ್ರದೃಷ್ಟಿ ಬಿದ್ದಿದೆ. ಜಮ್ಮು ವಿಧಾನಸಭೆಯಲ್ಲಿ ಫ್ಯಾಷನ್ ಶೋ ಬಗ್ಗೆ ಚರ್ಚೆಯಾಗಿದ್ದು ಪರ-ವಿರೋಧ ಚರ್ಚೆಗಳು ಜೋರಾಗಿದೆ.

ಫ್ಯಾಷನ್ ಶೋಗೆ ಆಕ್ಷೇಪ ಯಾಕೆ?
ಇಡೀ ವಿಶ್ವದಲ್ಲಿ ಸದ್ಯ ರಂಜಾನ್ ಹಿನ್ನೆಲೆಯಲ್ಲಿ ಪವಿತ್ರ ವ್ರತ ಆಚರಿಸಲಾಗುತ್ತಿದೆ. ರಂಜಾನ್ ಸಂದರ್ಭದಲ್ಲಿ ಧಾರ್ಮಿಕ ಭಾವನೆಗೆ ಬೆಲೆ ಕೊಡದೇ ಫ್ಯಾಷನ್ ಶೋ ನಡೆಸಲಾಗುತ್ತಿದೆ ಅನ್ನೋದು ಮೂಲಭೂತವಾದಿಗಳ ಆಕ್ಷೇಪ. ಫ್ಯಾಷನ್ ಶೋ ಹೆಸರಲ್ಲಿ ಅಶ್ಲೀಲತೆ ಪ್ರದರ್ಶನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಧಾನಸಭಾ ಅಧಿವೇಶನದಲ್ಲೂ ಈ ಫ್ಯಾಷನ್ ಶೋ ಗದ್ದಲಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.


">March 10, 2025

ಇದನ್ನೂ ಓದಿ: ನಟಿ ರನ್ಯಾ ರಾವ್‌ ಸ್ಮಗ್ಲಿಂಗ್​ ಕೇಸ್‌ಗೆ ಬಿಗ್​ ಟ್ವಿಸ್ಟ್​​; ಸ್ಟಾರ್ ಹೋಟೆಲ್ ಮಾಲೀಕನ ಮೊಮ್ಮಗ ಅರೆಸ್ಟ್‌! 

ಸಿಎಂ ಒಮರ್ ಅಬ್ದುಲ್ಲಾ ಹೇಳೋದೇನು?
ಗುಲ್ ಮಾರ್ಗ್ ಫ್ಯಾಷನ್ ಶೋ ಬಗ್ಗೆ ಸಿಎಂ ಒಮರ್ ಅಬ್ದುಲ್ಲಾ ಅವರು ವಿಧಾನಸಭೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಕಳೆದ ಮಾರ್ಚ್ 7ರಂದು ಗುಲ್‌ಮಾರ್ಗ್‌ನಲ್ಲಿ ಆಯೋಜಿಸಲಾಗಿದೆ. ಈ ಫ್ಯಾಷನ್‌ ಶೋ ಅನ್ನು ಇದೇ ತಿಂಗಳಲ್ಲಿ ಮಾಡಲು ಸರ್ಕಾರ ಯಾವುದೇ ಅನುಮತಿ ನೀಡಿಲ್ಲ. ಇದರಲ್ಲಿ ಸರ್ಕಾರದ್ದು ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಧಾರ್ಮಿಕ ಭಾವನೆಗೆ ಧಕ್ಕೆಯಾದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶಿಸಿದೆ. ಫ್ಯಾಷನ್ ಶೋ ಮುಕ್ತಾಯಕ್ಕೆ ಇನ್ನು ಒಂದು ದಿನ ಬಾಕಿ ಇದೆ. ಇದೀಗ ವಿರೋಧ ವ್ಯಕ್ತವಾಗಿರೋದು ರಾಜಕೀಯ ನಾಯಕರ ಗುದ್ದಾಟಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment