BREAKING: ವಾಹನ ಸವಾರರಿಗೆ ಗುಡ್​ನ್ಯೂಸ್​.. ಹೆದ್ದಾರಿ ಟೋಲ್ ಕಟ್ಟಿ ಬೇಸತ್ತಿದ್ದವರಿಗೆ ಬಿಗ್ ರಿಲೀಫ್..!

author-image
Ganesh
Updated On
BREAKING: ವಾಹನ ಸವಾರರಿಗೆ ಗುಡ್​ನ್ಯೂಸ್​.. ಹೆದ್ದಾರಿ ಟೋಲ್ ಕಟ್ಟಿ ಬೇಸತ್ತಿದ್ದವರಿಗೆ ಬಿಗ್ ರಿಲೀಫ್..!
Advertisment
  • ಫಾಸ್ಟ್ ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಜಾರಿಗೆ ನಿರ್ಧಾರ
  • ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯಿಂದ ಘೋಷಣೆ
  • ಆಗಸ್ಟ್ 15, 2025 ರಿಂದ ವಾರ್ಷಿಕ ಟೋಲ್ ಪಾಸ್ ವಿತರಣೆ

ದೇಶದಲ್ಲಿ ಹೆದ್ದಾರಿ ಟೋಲ್ ಕಟ್ಟಿ ಬೇಸತ್ತಿದ್ದವರಿಗೆ ಕೇಂದ್ರ ಸರ್ಕಾರ ಬಿಗ್ ರೀಲೀಫ್ ನೀಡಿದೆ.

ಗಡ್ಕರಿ ಘೋಷಣೆ

ಫಾಸ್ಟ್ ಟ್ಯಾಗ್ ಆಧರಿತ ವಾರ್ಷಿಕ ಪಾಸ್ ಜಾರಿಗೆ ತರಲು ಕೇಂದ್ರ ಸರ್ಕಾರದ ನಿರ್ಧಾರ ಮಾಡಿದ್ದು, ಆಗಸ್ಟ್ 15, 2025 ರಿಂದ ವಾರ್ಷಿಕ ಟೋಲ್ ಪಾಸ್ ನೀಡಲಾಗುತ್ತದೆ. ವಾರ್ಷಿಕ 3 ಸಾವಿರ ರೂಪಾಯಿಗೆ ಟೋಲ್ ಪಾಸ್ ಪಡೆದು ಒಂದು ವರ್ಷಗಳ ಕಾಲ ರಾಷ್ಟ್ರ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಮಾಡಬಹುದಾಗಿದೆ ಎಂದು ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ.

ಯಾವಾಗಿಂದ ಪಾಸ್ ವಿತರಣೆ..?

  • ಆಗಸ್ಟ್ 15, 2025 ರಿಂದ ವಾರ್ಷಿಕ ಟೋಲ್ ಪಾಸ್ ವಿತರಣೆ
  •  3 ಸಾವಿರ ರೂ.ಗೆ ಟೋಲ್ ಪಾಸ್.. ಒಂದು ವರ್ಷ ಸಂಚಾರ
  •  ಒಂದು ವರ್ಷ ಅಥವಾ 200 ಟ್ರಿಪ್ ಸಂಚಾರಕ್ಕೆ ಅವಕಾಶ
  •  ಕಾರ್, ಜೀಪ್, ವ್ಯಾನ್ ಗಳಿಗೆ ವಾರ್ಷಿಕ ಟೋಲ್ ಪಾಸ್
  •  ನಾನ್ ಕಮರ್ಷಿಯಲ್ ವಾಹನಗಳಿಗೆ ಮಾತ್ರ ವಾರ್ಷಿಕ ಪಾಸ್

ಕೇಂದ್ರ ಸಾರಿಗೆ ಇಲಾಖೆಯು ನಾನ್ ಕಮರ್ಷಿಯಲ್ ವಾಹನಗಳಿಗೆ ಮಾತ್ರವೇ ವಾರ್ಷಿಕ ಟೋಲ್ ಪಾಸ್ ನೀಡಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕಾರು, ಜೀಪ್, ವ್ಯಾನ್​ಗಳಿಗೆ ಟೋಲ್ ಪಾಸ್ ನೀಡಲಿದೆ.

ಇದನ್ನೂ ಓದಿ: ADGP ಜಯರಾಂ ಬಂಧನಕ್ಕೆ ಟ್ವಿಸ್ಟ್​.. ಹೈಕೋರ್ಟ್​ ಆದೇಶವೇ ಶಾಕಿಂಗ್ ಎಂದ ಸುಪ್ರೀಂ ಕೋರ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment