newsfirstkannada.com

FASTag, EPS, NPS.. ಇಂದಿನಿಂದ ದೇಶದಲ್ಲಿ ಜಾರಿಗೆ ಬಂದಿರುವ 6 ಬದಲಾವಣೆಗಳ ಬಗ್ಗೆ ನಿಮಗೂ ಗೊತ್ತಿರಲಿ

Share :

Published April 1, 2024 at 10:03am

Update April 1, 2024 at 10:04am

    ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೊರಡಿಸಿರುವ ಹೊಸ ನಿಯಮದಲ್ಲೇನಿದೆ?

    ಕೆಲಸ ವರ್ಗಾಯಿಸುವ ಉದ್ಯೋಗಿಗಳೇ.. ಹೊಸ ಇಪಿಎಸ್ ನಿಯಮ ಬಗ್ಗೆ ಗೊತ್ತಾ?

    ಕ್ರೆಡಿಟ್​ ಕಾರ್ಡ್​ ಬಳಕೆದಾರರೇ.. ಹೊಸ ಹಣಕಾಸು ವರ್ಷಕ್ಕೆ ಈ ರೂಲ್ಸ್​ ಬದಲಾಗಿದೆ

ಇಂದಿನಿಂದ ಏಪ್ರಿಲ್​ ಮೊದಲ ವಾರದ ಆರಂಭದ ಜೊತೆಗೆ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಹೀಗಾಗಿ ದೇಶದಲ್ಲಿ ಕೆಲವು ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಎಲ್​ಪಿಜಿ ಸಿಲಿಂಡರ್​ ಬೆಲೆ, ಕ್ರೆಡಿಟ್​ ಕಾರ್ಡ್​, ಎನ್​ಪಿಎಸ್​ ಸೇರಿದಂತೆ ಆರು ಬದಲಾವಣೆಗಳು ಇಂದಿನಿಂದ ಜಾರಿಗೆ ಬರುತ್ತವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇಪಿಎಸ್​​ ಹೊಸ ನಿಯಮ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೊರಡಿಸಿರುವ ಹೊಸ ನಿಯಮದ ಪ್ರಕಾರ, ಇಪಿಎಫ್​ ಖಾತೆದಾರನು ತನ್ನ ಉದ್ಯೋಗವನ್ನು ಬೇರೆಡೆಗೆ ಬದಲಾಯಿಸಿದ ತಕ್ಷಣ ಆತನ ಹಳೆಯ ಪಿಎಫ್​ ಬ್ಯಾಲೆನ್ಸ್ ಅನ್ನು ಹೊಸ ಖಾತೆಗೆ ವರ್ಗಾಯಿಸಲಾಗುತ್ತದೆ. ಆದರೀಗ ಹಳೆಯ ಪಿಎಫ್​ ಬ್ಯಾಲೆನ್ಸ್​ ಅನ್ನು ವರ್ಗಾಯಿಸುವ ಅಗತ್ಯವಿಲ್ಲ. ಅದು ಸ್ವಯಂಚಾಲುತವಾಗಿ ವರ್ಗಾವಣೆ ಆಗುತ್ತದೆ.

ಫಾಸ್ಟ್​ಟ್ಯಾಗ್​ ಕೆವೈಸಿ

ಮಾರ್ಚ್ 31,2024ರೊಳಗೆ ಫಾಸ್ಟ್​ಟ್ಯಾಗ್​ ಕೆವೈಸಿಯನ್ನು ನವೀಕರಿಸಲು ಆದೇಶ ಹೊರಡಿಸಲಾಗಿತ್ತು. ಆದರೆ ನವೀಕರಿಸದವರು ಏಪ್ರಿಲ್​1 ರಿಂದ ಫಾಸ್ಟ್​ಟ್ಯಾಗ್​ ಸಮಸ್ಯೆ ಎದಿರಿಸಬಹುದು. ಹೀಗಾಗಿ ಇಂದೇ ನವೀಕರಿಸಿದರೆ ಸೂಕ್ತ.

ವಿಮಾ ಪಾಲಿಸಿ

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಮಾ ಪಾಲಿಸಿಗಳಿಗೆ ಡಿಜಿಟಲೀಕರಣ ಕಡ್ಡಾಯಗೊಳಿಸಿದೆ. ಅಂದಹಾಗೆಯೇ ಇಂದಿನಿಂದ ಈ ನಿಯಮ ಜಾರಿಗೆ ಬರಲಿದೆ. ಜೀವ ವಿಮೆ, ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ವಿಮೆಗಳು ಡಿಜಿಟಲೀಕರಣವಾಗುತ್ತದೆ. ಇದನ್ನು ಇ-ವಿಮಾ ಖಾತೆ ಎಂದು ಕರೆಯಲಾಗುತ್ತದೆ.

ಎನ್​ಪಿಎಸ್​ ನಿಯಮ

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತವಾಗಿರಿಸಲು ಆಧಾರ್​ ಆಧಾರಿತ ಎರಡು ಹಂತದ ದೃಢೀಕರಣ ವ್ಯವಸ್ಥೆಯನ್ನು ಪರಿಚಯಿಸಿದೆ. ಪಾಸ್​ವರ್ಡ್​ ರೂಪದ ಬಳಕೆಯಲ್ಲಿ ಸಿಗಲಿದೆ. ಇಂದಿನಿಂದ ಈ ನಿಯಮ ಜಾರಿಗೆ ಬರಲಿದೆ.

ಎಸ್​ಬಿಐ ಕ್ರೆಡಿಟ್​ ಕಾರ್ಡ್​

ಕೆಲವು ಕ್ರೆಡಿಟ್​ ಕಾರ್ಡ್​​ಗಳು ಹಣ ಪಾವತಿ ವಹಿವಾಟುಗಳ ರಿವಾರ್ಡ್​ ಪಾಯಿಂಟ್​ ಸಂಗ್ರಹವನ್ನು ನಿಲ್ಲಿಸುತ್ತಿದೆ. ಈಗಾಗಲೇ ಎಸ್​ಬಿಐ ಈ ವಿಚಾರವನ್ನು ಘೋಷಿಸಿದೆ. ಎಸ್​ಬಿಐ ಕಾರ್ಡ್​ ಎಲೈಟ್​ ಅಡ್ವಾಂಟೇಜ್​, ಎಸ್​ಬಿಐ ಕಾರ್ಡ್​​ ಪಲ್ಸ್​, ಸಿಂಪ್ಲಿಕ್ಲಿಕ್​ ಎಸ್​ಬಿಐ ಕಾರ್ಡ್​ ಇದನ್ನು ಒಳಗೊಂಡಿದೆ.

ಇದನ್ನೂ ಓದಿ: Gold Rate: ಸಂತಸದ ಸುದ್ದಿ! ಚಿನ್ನದ ದರ ಕೊಂಚ ಇಳಿಕೆ.. ಇಂದು ಗೋಲ್ಡ್​ ರೇಟ್​ ಎಷ್ಟಿದೆ?

ವಾಣಿಜ್ಯ ಎಲ್​ಪಿಜಿ ದರ

ಗ್ರಾಹಕರಿಗೆ ಹೊರೆಯಾಗಿದ್ದ ಅನಿಲ ಸಿಲಿಂಡರ್​ಗಳ ದರದಲ್ಲಿ ಕೊಂಚ ಇಳಿಕೆ ಮಾಡಿದೆ. ಇಂದಿನಿಂದ ವಾಣಿಜ್ಯ ಎಲ್​ಜಿಪಿ ಹೊಸ ದರಗಳು ಜಾರಿಗೆ ಬಂದಿದ್ದು, 19 ಕೆಜಿ LPG ಸಿಲಿಂಡರ್​​ ಬೆಲೆ 32 ರೂಪಾಯಿ ಇಳಿಕೆ ಕಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

FASTag, EPS, NPS.. ಇಂದಿನಿಂದ ದೇಶದಲ್ಲಿ ಜಾರಿಗೆ ಬಂದಿರುವ 6 ಬದಲಾವಣೆಗಳ ಬಗ್ಗೆ ನಿಮಗೂ ಗೊತ್ತಿರಲಿ

https://newsfirstlive.com/wp-content/uploads/2024/04/fastag.jpg

Load More