newsfirstkannada.com

ನಮಾಜ್​​ ವೇಳೆ ಹನುಮಾನ್​​ ಹಾಡು ಹಾಕಿದ್ದಕ್ಕೆ ಮಾರಾಣಾಂತಿಕ ಹಲ್ಲೆ ಕೇಸ್​ಗೆ ಟ್ವಿಸ್ಟ್​​.. ಅಸಲಿಗೆ ಆಗಿದ್ದೇನು?

Share :

Published March 19, 2024 at 6:05am

  ಮಾತಿಗೆ ಮಾತು ಬೆಳೆದು ಶುರುವಾದ ಗಲಾಟೆ ಮಾರಾಮಾರಿಯಲ್ಲಿ ಅಂತ್ಯ

  ಮೂವರನ್ನು ಬಂಧಿಸಿದ ಪೊಲೀಸರು ಉಳಿದ ಮೂವರಿಗಾಗಿ ಹುಡುಕಾಟ

  ಗಾಯಾಳು ದೂರಿನ ಮೇರೆಗೆ ಆರು ಆರೋಪಿಗಳ ಮೇಲೆ ಕೇಸ್ ದಾಖಲು

ಬೆಂಗಳೂರು: ಅದೊಂದು ಮೊಬೈಲ್ ಅಂಗಡಿ. ಮೊಬೈಲ್‌ ಶಾಪ್‌ನಲ್ಲಿ ನೂರಾರು ಗ್ರಾಹಕರು ದಿನಕ್ಕೆ ಬರ್ತಾರೆ. ಕೆಲವರು ಅಂದುಕೊಂಡಂತೆ ಕೆಲಸವಾಗದ್ದಿದ್ರೆ ಗಲಾಟೆ ಮಾಡಿ ಹೋಗ್ತಾರೆ. ಅದು ಮಾತಿನ ವಾಕ್ಸಮರ ವಾಗಿರುತ್ತೆ ಅಷ್ಟೇ. ಆದ್ರೆ, ಆ ಮೊಬೈಲ್ ಶಾಪ್‌ಗೆ ಬಂದ ಕಿಡಿಗೇಡಿಗಳ ತಂಡ, ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದೆ. ಮೊದಲು ಮಾತು ಮಾತುನಿಂದಲೇ ಶುರುವಾದ ಈ ಜಗಳ ನಂತರ ವಿಕೋಪಕ್ಕೆ ತಿರುಗಿತು. ಯುವಕರ ತಂಡ, ಮಾಲೀಕನವೊಬ್ಬನ ಮೇಲೆ ಹಿಗ್ಗಾಮುಗ್ಗಾ ಥಳಿಸಿದೆ.

ಸ್ಪೀಕರ್‌ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಂಗಡಿ ಮಾಲೀಕ ಮುಖೇಶ್‌, ತಮ್ಮ ಅಂಗಡಿಯಲ್ಲಿ ಆಂಜನೇಯನ ಹಾಡು ಹಾಕಿದ್ದರಂತೆ. ಏಕಾಏಕಿ ಶಾಪ್‌ಗೆ ಬಂದ ಈ ಗ್ಯಾಂಗ್‌, ನಮಾಜ್ ಮಾಡೋಕೆ ತೊಂದರೆ ಆಗ್ತಿದೆ. ಸಾಂಗ್ ಸ್ಟಾಪ್ ಮಾಡುವಂತೆ ಧಮ್ಕಿ ಹಾಕಿದರಂತೆ. ನಾನೇಕೆ ಸ್ಟಾಪ್‌ ಮಾಡ್ಬೇಕು ಅಂತಾ ಹೇಳಿದ್ದಕ್ಕೆ, ಇವರೆಲ್ಲಾ ಸೇರಿಕೊಂಡು ಹಲ್ಲೆ ಮಾಡಿದರು ಅನ್ನೋದು ಮುಖೇಶ್‌ನ ಗಂಭೀರ ಆರೋಪ. ಭಾನುವಾರ ಸಂಜೆ 6.30ರ ಸಮಯದಲ್ಲಿ ಈ ನಡೆದಿದೆ. ಈ ಘಟನೆಯ ಬಳಿಕ ಹಲಸೂರು ಪೊಲೀಸ್‌ ಠಾಣಾಯ ಮುಂದೆ ನೂರಾರು ಜನರು ಜಮಾಯಿಸಿದ್ದರು. ಹಲ್ಲೆ ಮಾಡಿರೋರ ಮೇಲೆ ಕ್ರಮ ಜರುಗಿಸಬೇಕು, ಕೂಡಲೇ ಅರೆಸ್ಟ್ ಮಾಡ್ಬೇಕು ಅಂತಾ ಒತ್ತಾಯಿಸಿದರು. ಕೃಷ್ಣ ಟೆಲಿಕಾಂನ ಓನರ್ ಆಗಿರೋ ಮುಖೇಶ್‌ಗೆ ರಕ್ತಸ್ರಾವ ಕೂಡ ಆಗಿದೆ. 6 ಜನರ ಗುಂಪು ಇವರ ಮೇಲೆ ಹಿಗ್ಗಾಮುಗ್ಗಾ ಥಳಿಸಿರೋದರಿಂದ ಇವರು ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದಾಗ, ಎಫ್‌ಐಆರ್‌ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದರು ಅಂತಾ ಕೂಡ ಪ್ರತಿಭಟನಾನಿರತರು ಆರೋಪಿಸಿದರು.

ಕಳೆದ ಎರಡು ತಿಂಗಳ ಹಿಂದೆ ಈ ಅಂಗಡಿಯನ್ನ ಶುರು ಮಾಡಿದರಂತೆ. ಆದ್ರೆ, ಈ ಏರಿಯಾ ಸುತ್ತಮುತ್ತ, ಈ ಗ್ಯಾಂಗ್‌ನಿಂದ ಅನೇಕರ ಮೇಲೆ ದಬ್ಬಾಳಿಕೆ ನಡೆದಿದೆ ಅಂತಾ ಇವರೇ ಆರೋಪಿಸುತ್ತಾರೆ. ಅಲ್ಲದೇ, ಈ ಗ್ಯಾಂಗ್ ಮುಖೇಶ್‌ಗೆ ಮೂರು ವಾರಗಳ ಹಿಂದೆ ಧಮ್ಕಿ ಹಾಕಿದ್ದರು. ಆಗಲೂ ಪೊಲೀಸರು ಕ್ರಮಕೈಗೊಂಡಿಲ್ಲ ಅಂತಾ ಆರೋಪಿಸಲಾಗಿದೆ. ಆಕ್ರೋಶ ವ್ಯಕ್ತವಾದ ನಂತರ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ ಐ ಆರ್ ದಾಖಲಿಸಿದರು. ಐಪಿಸಿ ಸೆಕ್ಷನ್ 506, 504, 149, 307, 323 ಹಾಗೂ 324 ರ ಅಡಿ ಪ್ರಕರಣ ದಾಖಲಾಗಿದೆ. ಸುಲೇಮಾನ್, ಶನವಾಜ್, ರೋಹಿತ್, ದ್ಯಾನಿಶ್, ತರುಣ್ ಹಾಗೂ ಇತರರ ವಿರುದ್ದ ಎಫ್ಐಆರ್ ದಾಖಲಾಗಿದೆ. ನಿನ್ನೆಯೇ ಐವರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು. ಸದ್ಯ, ಹಲಸೂರು ಪೊಲೀಸರಿಂದ ಮೂರು ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಸುಲೇಮಾನ್, ಶನವಾಜ್, ರೋಹಿತ್ ಬಂಧಿತ ಆರೋಪಿಗಳು. ಮೊದಲಿನಿಂದಲೂ ರೋಲ್ ಕಾಲ್ ಮಾಡಲು ಗದರಿಸುವ ಪ್ರಯತ್ನ ಮಾಡ್ತಿದ್ದರು ಅಂತಾ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗ ಉದ್ದೇಶಪೂರ್ವಕವಾಗಿಯೇ ಬಂದು, ಗಲಾಟೆ ಮಾಡಲಾಗಿದೆ ಅಂತಾ ಹೇಳಲಾಗ್ತಿದೆ. ಪೊಲೀಸರು ಈ ಪ್ರಕರಣ ಕುರಿತು ವಿಸ್ತೃತವಾಗಿ ತನಿಖೆ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮಾಜ್​​ ವೇಳೆ ಹನುಮಾನ್​​ ಹಾಡು ಹಾಕಿದ್ದಕ್ಕೆ ಮಾರಾಣಾಂತಿಕ ಹಲ್ಲೆ ಕೇಸ್​ಗೆ ಟ್ವಿಸ್ಟ್​​.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/03/fight-9.jpg

Load More