Advertisment

45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದ್ರೂ ಬದುಕಿದ ಯುವಕ.. ಶಾಕ್​ ಆದ ವೈದ್ಯರು!

author-image
Veena Gangani
Updated On
45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದ್ರೂ ಬದುಕಿದ ಯುವಕ.. ಶಾಕ್​ ಆದ ವೈದ್ಯರು!
Advertisment
  • ಫತೇಪುರ್‌ನ ವಿಕಾಸ್ ಎಂಬಾತನಿಗೆ ಎರಡು ತಿಂಗಳಲ್ಲಿ 5 ಬಾರಿ ಕಚ್ಚಿದ ಹಾವು
  • ಒಂದಲ್ಲಾ ಎರಡಲ್ಲಾ ಬರೋಬ್ಬರಿ 5 ಬಾರಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ
  • ಜೂನ್​ 2ರಂದು ಬೆಳಗ್ಗೆ ಹಾಸಿಗೆಯಿಂದ ಏಳುವ ವೇಳೆ ವಿಕಾಸ್​ಗೆ ಕಚ್ಚಿದ್ದ ಹಾವು

ಲಕ್ನೋ: ಸಾಮಾನ್ಯವಾಗಿ ಒಂದು ಹಾವು ಕಚ್ಚಿದರೇ ಮನುಷ್ಯ ಬದುಕೋದೆ ಕಮ್ಮಿ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ 5 ಬಾರಿ ಹಾವು ಕಚ್ಚಿದೆ. ಅದು ಕೂಡ ಕೇವಲ 45 ದಿನಗಳ ಅಂತರದಲ್ಲಿ. ಇದು ನಂಬಲು ಅಸಾಧ್ಯ ಎನಿಸಿದರೂ ಸತ್ಯ. ವ್ಯಕ್ತಿಗೆ ಒಂದು ಬಾರಿ ಹಾವು ಕಚ್ಚಿದರೇ ಸುಧಾರಿಸಿಕೊಳ್ಳಲು ತಿಂಗಳುಗಟ್ಟಲೇ ಬೇಕಾಗುತ್ತದೆ. ಆದರೆ ಇವರಿಗೆ ಬರೋಬ್ಬರಿ ಐದು ಬಾರಿ ಹಾವು ಕಚ್ಚಿದ್ದರೂ ಪವಾಡವೆಂಬಂತೆ ಬದುಕುಳಿದಿದ್ದಾರೆ.

Advertisment

publive-image

ಇದನ್ನೂ ಓದಿ: VIDEO: ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಆಡುವಾಗ ಉಸಿರು ಚೆಲ್ಲಿದ ಖ್ಯಾತ ಪ್ಲೇಯರ್; ಏನಾಯ್ತು?

ಹೌದು, ಉತ್ತರ ಪ್ರದೇಶದ ಫತೇಪುರ್‌ನ ವಿಕಾಸ್ ದುಬೆ ಎಂಬಾತನಿಗೆ ಎರಡು ತಿಂಗಳಲ್ಲಿ ಐದು ಬಾರಿ ಹಾವು ಕಚ್ಚಿದೆ. ಹಾವೊಂದು ಪದೇ ಪದೇ ವಿಕಾಸ್​ಗೆ ಕಚ್ಚುತ್ತಲೇ ಇತ್ತು. ಆದರೂ ಕೂಡ ಚಿಕಿತ್ಸೆಯ ನಂತರ ವ್ಯಕ್ತಿ ಪ್ರತಿ ಬಾರಿ ಪವಾಡ ರೀತಿಯಲ್ಲಿ ಪಾರಾಗುತ್ತಿರುವುದನ್ನು ಕಂಡ ವೈದ್ಯರೇ ಫುಲ್ ಶಾಕ್​ ಆಗಿದ್ದರು. ವಿಕಾಸ್​ ದುಬೆ ಎಂಬಾತ ಮನೆಯಲ್ಲಿದ್ದರೆ ಹಾವು ಕಚ್ಚುತ್ತೆ ಎಂದು ಚಿಕ್ಕಮ್ಮನ ಮನೆಗೆ ಹೋಗಿದ್ದರೂ ಕೂಡ ಅಲ್ಲಿಗೂ ಹೋಗಿ ಹಾವು ಕಚ್ಚಿತ್ತು. ಮೊದಲ ಬಾರಿಗೆ ಜೂನ್​ 2ರಂದು ಬೆಳಗ್ಗೆ ಹಾಸಿಗೆಯಿಂದ ಏಳುವ ವೇಳೆ ಹಾವು ಕಚ್ಚಿತ್ತು. ಆ ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎರಡು ದಿನಗಳವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಬಳಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಇದಾದ ಬಳಿಕ ಜೂನ್ 10ರಂದು ರಾತ್ರಿ ಮತ್ತೆ ಹಾವು ಕಚ್ಚಿದೆ. ಮತ್ತೆ ಆತನ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದರು. ಇದಾದ ನಂತರ ವಿಕಾಸ್​ ದುಬೆ ಹಾವಿನ ಭಯ ಮನಸ್ಸಿನಲ್ಲಿ ಬೇರೂರಿತ್ತು, ಹಾಗಾಗಿ ಜಾಗ್ರತೆವಹಿಸಿದರು. ಆದರೂ ಏಳು ದಿನಗಳ ಬಳಿಕ ಜೂನ್ 17ರಂದು ಮನೆಯೊಳಗೆ ಮತ್ತೆ ಹಾವು ಕಚ್ಚಿತ್ತು. ಇದರಿಂದಾಗಿ ಅವರು ಪ್ರಜ್ಞೆಯನ್ನು ಕಳೆದುಕೊಂಡಿದ್ದರು.

publive-image

ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ! ಅಪ್ಪ ಆಗ್ತಿದ್ದಾರೆ ಭುವನ್ ಪೊನ್ನಣ್ಣ

Advertisment

ಈ ಘಟನೆಯು ಅವರ ಕುಟುಂಬವನ್ನು ಆತಂಕಕ್ಕೆ ದೂಡಿತ್ತು. ಮತ್ತೊಮ್ಮೆ ದುಬೆಯನ್ನು ಅದೇ ಆಸ್ಪತ್ರೆಗೆ ಕರೆದೊಯ್ದರು ಅಂತಿಮವಾಗಿ ಅವರು ಚೇತರಿಸಿಕೊಂಡರು. ಮನೆಗೆ ಬಂದ ಬಳಿಕ ನಾಲ್ಕನೇ ಬಾರಿಗೆ ಮತ್ತೆ ಹಾವು ಕಚ್ಚಿತ್ತು, ಮತ್ತೆದೇ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಅಚ್ಚರಿಗೊಂಡರು. ಆದರೆ ನಾಲ್ಕನೇ ಬಾರಿ ಹಾವು ಕಚ್ಚಿದ ಬಳಿಕವೂ ಅವರು ಬದುಕುಳಿದಿದ್ದಾರೆ. ಕೆಲವು ದಿನಗಳ ಕಾಲ ಮನೆಯಲ್ಲಿ ಇರುವುದು ಬೇಡವೆಂದು ಅವರನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು ಆದರೆ ಅಲ್ಲಿಯೂ ಕೂಡ ಅವರಿಗೆ ಹಾವು ಕಚ್ಚಿದೆ. ಈ ಘಟನೆಯ ಬಗ್ಗೆ ವೈದ್ಯರು ಶಾಕ್​ ಆಗಿದ್ದರು. ಬಳಿಕ ವೈದ್ಯರು ವಿಕಾಸ್​ಗೆ ಆ ಹಳ್ಳಿಯನ್ನೇ ಬಿಟ್ಟು ಹೋಗುವಂತೆ ಸಲಹೆ ನೀಡಲಾಯಿತು. ಹೀಗೆ ವೈದ್ಯರ ಮಾತನ್ನು ಕೇಳಿ ಊರು ಬಿಟ್ಟು ಹೋಗಿದ್ದ ವಿಕಾಸ್​ ಆರಾಮಾಗಿ ಇದ್ದಾರೆ. ಅಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಅಂತ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment