ಹೃದಯ ವಿದ್ರಾವಕ ಘಟನೆ.. ಅಪ್ಪ, ಮಗ ಕೈ ಕೈ ಹಿಡ್ಕೊಂಡು ರೈಲಿಗೆ ತಲೆಕೊಟ್ಟು ದಾರುಣ ಸಾವು -ವಿಡಿಯೋ

author-image
Ganesh
Updated On
ಹೃದಯ ವಿದ್ರಾವಕ ಘಟನೆ.. ಅಪ್ಪ, ಮಗ ಕೈ ಕೈ ಹಿಡ್ಕೊಂಡು ರೈಲಿಗೆ ತಲೆಕೊಟ್ಟು ದಾರುಣ ಸಾವು -ವಿಡಿಯೋ
Advertisment
  • ಸಾಯುವುದಕ್ಕೂ ಮೊದಲು ರೈಲ್ವೇ ನಿಲ್ದಾಣದಲ್ಲಿ ಅವರು ಮಾಡಿದ್ದೇನು?
  • ಇಬ್ಬರು ಒಟ್ಟಿಗೆ ಸಾವನ್ನಪ್ಪಿರುವ ವಿಡಿಯೋ ಭಯಾನಕವಾಗಿದೆ
  • ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ, ತನಿಖೆ ಆರಂಭಿಸಿದ್ದಾರೆ

ರೈಲು ಹಳಿಗಳ ಮೇಲೆ ಮಲಗಿ ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಭಯಾನಕ ದೃಶ್ಯ CCTVಯಲ್ಲಿ ಸೆರೆಯಾಗಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಭಯಂದರ್ ರೈಲ್ವೇ ನಿಲ್ದಾಣದ ಬಳಿ ಈ ಘೋರ ದುರಂತ ಸಂಭವಿಸಿದೆ. ರೈಲ್ವೇ ನಿಲ್ದಾಣಕ್ಕೆ ಬಂದ ಅಪ್ಪ-ಮಗ ರೈಲು ಚಲಿಸುತ್ತಿದ್ದ ಹಳಿಯ ಮೇಲೆ ಕೈ ಕೈ ಹಿಡಿದುಕೊಂಡು ಮಲಗಿದ್ದಾರೆ. ಪರಿಣಾಮ ಇಬ್ಬರು ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಜೈಲಿನಲ್ಲಿ ಮಕ್ಕಳನ್ನು ಕಂಡು ರೇವಣ್ಣ ದಂಪತಿ ಕಣ್ಣೀರು.. ಅಪ್ಪ-ಅಮ್ಮನ ಕಂಡು ಭಾವುಕರಾದ ಪ್ರಜ್ವಲ್, ಸೂರಜ್..!

ಹರೀಶ್ ಮೆಹ್ತಾ (60), ಜಯ್ (35) ಆತ್ಮಹತ್ಯೆ ಮಾಡಿಕೊಂಡ ತಂದೆ-ಮಗ. ಸೋಮವಾರ ಬೆಳಗ್ಗೆ 9.30ಕ್ಕೆ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ್ದಾರೆ. ಇವರು ವಸೈನ ನಿವಾಸಿಗಳು ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.

ವೈರಲ್ ಆಗಿರುವ ಸಿಸಿಟಿವಿ ದೃಶ್ಯದಲ್ಲಿ ಇಬ್ಬರು ಒಟ್ಟಿಗೆ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಾರೆ. ರೈಲ್ವೇ ನಿಲ್ದಾಣದ ಪ್ಲಾಟ್​​ ಫಾರ್ಮ್​​ನಲ್ಲಿ ನಡೆದುಕೊಂಡು ಹೋಗುವ ಅವರು, ಇದ್ದಕ್ಕಿಂದ್ದಂತೆ ಹಳಿಗೆ ಎರಡು ಬಾರಿ ಎಂಟ್ರಿ ನೀಡುತ್ತಾರೆ. ಕೊನೆಗೆ ಎದುರಿನಿಂದ ಬರುತ್ತಿದ್ದ ಟ್ರೈನ್​​ಗೆ ಅಡ್ಡ ಮಲಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಕಡಲತೀರ.. ಕೋಟಿಗಟ್ಟಲೇ ಖರ್ಚು.. ಕೊಹ್ಲಿ ಕಟ್ಟಿಸಿದ ಬಂಗಲೆ ವಾವ್ಹ್ .. ಅದ್ಭುತ..! ವಿಡಿಯೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment