ಮಗನ ಅಗಲಿಕೆ ಸುದ್ದಿ ತಿಳಿಯುತ್ತಿದ್ದಂತೆಯೇ ತಂದೆಗೆ ಹಾರ್ಟ್​ ಅಟ್ಯಾಕ್.. ಹೃದಯ ವಿದ್ರಾವಕ ಘಟನೆ

author-image
Ganesh
Updated On
ಮಗನ ಅಗಲಿಕೆ ಸುದ್ದಿ ತಿಳಿಯುತ್ತಿದ್ದಂತೆಯೇ ತಂದೆಗೆ ಹಾರ್ಟ್​ ಅಟ್ಯಾಕ್.. ಹೃದಯ ವಿದ್ರಾವಕ ಘಟನೆ
Advertisment
  • ಹೃದಯ ವಿದ್ರಾವಕ ಘಟನೆಗೆ ಬೆಚ್ಚಿಬಿದ್ದ ಗ್ರಾಮ
  • ಒಂದೇ ಜಾಗದಲ್ಲಿ ತಂದೆ-ಮಗನ ಅಂತ್ಯಕ್ರಿಯೆ
  • ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ

ಮಗನ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ತಂದೆ ಹೃದಯಾಘಾತದಿಂದ ಜೀವಕಳೆದುಕೊಂಡಿದ್ದಾರೆ. ಆಂಧ್ರ ಪ್ರದೇಶದ ಬಾಪಟ್ಲಾ (Bapatla) ಜಿಲ್ಲೆಯ ನಾಗುಲಪಾಲೆಂ ಗ್ರಾಮದಲ್ಲಿ ತಂದೆ-ಮಗ ಸಾವಿನಲ್ಲೂ ಒಂದಾಗಿದ್ದಾರೆ.

ಮಗ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ತಂದೆಗೆ ಹೃದಯಾಘಾತ ಸಂಭವಿಸಿದೆ. ಗ್ರಾಮದ ನಿವಾಸಿ ಪೊಟ್ರು ಮಣಿಕಂಠ (35) ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನರಾದರು. ಬೆನ್ನಲ್ಲೇ ಅವರ ತಂದೆ ಪೊಟ್ರು ಹರಿಬಾಬು (55)ಗೆ ಪುತ್ರನ ಅಗಲಿಕೆ ಬಗ್ಗೆ ಮಾಹಿತಿ ನೀಡಲಾಗಿತ್ತು. ಇದರಿಂದ ಅವರು ಆಘಾತಕ್ಕೆ ಒಳಗಾಗಿದ್ದರು.

ಮಗನ ಮರಣದ ಸುದ್ದಿಯನ್ನು ಸಹಿಸಲಾಗದ ತಂದೆ ಹರಿಬಾಬುಗೆ ತೀವ್ರ ಹೃದಯಾಘಾತವಾಗಿದೆ. ಇದರಿಂದ ಗ್ರಾಮದಲ್ಲಿ ದುಃಖ ಆವರಿಸಿದೆ. ಗ್ರಾಮಸ್ಥರು, ಸಂಬಂಧಿಕರು, ತಂದೆ-ಮಗನ ಅಂತ್ಯಕ್ರಿಯೆಯನ್ನು ಒಟ್ಟಿಗೆ ನೆರವೇರಿಸಿದ್ದಾರೆ. ಮೃತದೇಹವನ್ನು ಕೊಂಡೊಯ್ಯುವಾಗ ಗ್ರಾಮಸ್ಥರು ಕೂಡ ಕಣ್ಣೀರು ಇಟ್ಟರು.

ಇದನ್ನೂ ಓದಿ: ನೋಡಿ ಜನರೇ ಮೋಸ ಹೋಗದಿರಿ.. ನಕಲಿ ಟ್ರಂಪ್ ಆ್ಯಪ್​ನಿಂದ ಕೋಟ್ಯಾಂತರ ರೂ ಸ್ವಾಹಃ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment