/newsfirstlive-kannada/media/post_attachments/wp-content/uploads/2025/07/CKD-TATA-1.jpg)
ಚಿಕ್ಕೋಡಿ: ಕೃಷ್ಣಾ ನದಿಗೆ ಹಾರಿ ಜೀವ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ವೃದ್ಧನನ್ನು ಸ್ಥಳೀಯರು ಕಾಪಾಡಿದ್ದಾರೆ. ನಂತರ ಕಷ್ಟ, ಸುಖ ವಿಚಾರಿಸಿದಾಗ ಮಗ, ಮಗಳಿಂದಲೇ ದೂರಾವಾದ ಕರುಣಾಜನಕ ಕತೆಯನ್ನು ಹೇಳಿದ್ದಾನೆ.
ಆಗಿದ್ದೇನು..?
ಅಂದ್ಹಾಗೆ ಈ ಘಟನೆಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ ಗೋಪಾಲಪ್ಪ ಹತ್ತಿಮರದ (77) ನದಿಗೆ ಹಾರಲು ಯತ್ನಿಸಿದ ವೃದ್ಧ. ಇವರು ಮೂಲತಃ ಯಮಕನಮರಡಿ ಗ್ರಾಮದವರು. ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬ್ರಿಡ್ಜ್ ಮೇಲಿಂದ ನದಿಗೆ ಹಾರಲು ಯತ್ನಿಸುತ್ತಿರೋದನ್ನು ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಅಲ್ಲಿಗೆ ಓಡಿದ ಸಾರ್ವಜನಿಕರು ಆತನ ರಕ್ಷಣೆ ಮಾಡಿದ್ದಾರೆ.
ನೀವು ನನಗೆ ಏನೂ ಕೇಳಬ್ಯಾಡ್ರಿ.. ನಾನು ಹೋಗ್ತೇನ್ರಿ.. ಜೀವ ಬ್ಯಾಡ ಆಗಿದೆ.. ನನ್ನ ಮುಟ್ಟಬ್ಯಾಡ್ರಿ.. ನಂಗ ನಡಿಯಾಕ ಬರಲ್ರಿ.. ನಂಗ ಬ್ಯಾಸರ ಆಗಿದೇರಿ.. ನೀವು ಹೋಗ್ರಿ.. ನನ್ನ ಇಲ್ಲೇ ಬಿಡ್ರಿ.. ಮಗ ಸೊಸೆ ಹಿಂಸೆ ನೀಡ್ತಾರ, ಮಗಳು ಮನೆಗೆ ಬರಬೇಡ ಅಂದಾಳ.. ಕೃಷ್ಣಪ್ಪ ಗೋಪಾಲಪ್ಪ ಹತ್ತಿಮರದ
ಇದನ್ನೂ ಓದಿ: ಶಾಲೆಯಲ್ಲಿ ಮಹಾ ಹಗರಣ! 24 ಲೀ. ಪೇಂಟ್ ಬಳಿಯಲು 443 ಕಾರ್ಮಿಕರು.. 3.38 ಲಕ್ಷ ರೂ ಖರ್ಚು..!
‘ಬಳಿಕ ಏನಾಯ್ತು..?’ ಎಂದು ವಿಚಾರಿಸಿದಾಗ ಮಗ ಮತ್ತು ಸೊಸೆಯಿಂದ ಚಿತ್ರಹಿಂಸೆ ಅನುಭವಿಸಿದ ಕತೆಯನ್ನು ಹೇಳಿದ್ದಾನೆ. ‘ಮಗ-ಸೊಸೆ ಮಾನಸಿಕ ಹಿಂಸೆ ನೀಡಿದರು. ಮಗಳು ಕೂಡ ಮನೆಗೆ ಬರಬೇಡ ಅಂದುಬಿಟ್ಟಳು. ಇನ್ನು, ನನಗೆ ಯಾರು ಗತಿ? ಹೀಗಾಗಿ ದುಡುಕಿನ ನಿರ್ಧಾರಕ್ಕೆ ಮುಂದಾಗಿದ್ದೆ’ ಎಂದು ಕಣ್ಣೀರು ಇಟ್ಟಿದ್ದಾನೆ.
ನಂತರ ಸ್ಥಳೀಯರಿಂದ ಅಂಕಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೃದ್ಧನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಧುನಿಕತೆಯಲ್ಲಿ ಹಿರಿಜೀವಗಳ ಪ್ರಾಮುಖ್ಯತೆ ಮರೆಯಾಗುತ್ತಿದೆ. ಹೊತ್ತು ಸಾಕಿದ್ದ ತಂದೆ-ತಾಯಿಗಳು ಮಕ್ಕಳಿಗೆ ಬೇಡವಾಗ್ತಿದ್ದಾರೆ. ಅದಕ್ಕೆ ವಯೋವೃದ್ಧರು ಇಂಥ ನಿರ್ಧಾರ ಕೈಗೆತ್ತಿಕೊಳ್ತಿದ್ದಾರೆ. ಇದಕ್ಕೆಲ್ಲ ಕೊನೆಯಾಗಬೇಕಿದೆ.
ಇದನ್ನೂ ಓದಿ: 336 ರನ್ಗಳ ಭರ್ಜರಿ ಗೆಲುವು.. ಬೆನ್ನಲ್ಲೇ ಮೂವರು ಆಟಗಾರರಿಗೆ ಗೆಲುವಿನ ಕ್ರೆಡಿಟ್ ಕೊಟ್ಟ ಕೊಹ್ಲಿ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ