newsfirstkannada.com

VIDEO: ಯುವ ರಾಜ್‌ಕುಮಾರ್ ವಿಚ್ಛೇದನಕ್ಕೆ ಕಾರಣವೇನು? ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮಾವ ಭೈರಪ್ಪ; ಏನಂದ್ರು?

Share :

Published June 10, 2024 at 6:22pm

Update June 10, 2024 at 6:42pm

    ಮದುವೆಯಾದ ಮೇಲೆ ನನ್ನ ಮಗಳು ಸಾಕಷ್ಟು‌ ಹಿಂಸೆ ಅನುಭವಿಸಿದ್ದಾಳೆ

    ಡಾ. ರಾಜ್‌ ಕುಮಾರ್ ಅಕಾಡೆಮಿ ಆರಂಭಿಸಿದ್ದೇ ನನ್ನ ಮಗಳು- ಭೈರಪ್ಪ

    ಶಿವರಾಜ್‌ ಕುಮಾರ್ ಬಳಿ ಮಾತನಾಡಬೇಕು ಅಂದುಕೊಂಡಿದ್ದೇ ಸಾಧ್ಯವಾಗಲಿಲ್ಲ

ಮೈಸೂರು: ದೊಡ್ಮನೆ ಮಗ, ಸ್ಯಾಂಡಲ್‌ವುಡ್‌ ನಟ ಯುವ ರಾಜ್‌ಕುಮಾರ್ ಅವರು ಡಿವೋರ್ಸ್‌ಗಾಗಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಯುವ ರಾಜ್‌ ಕುಮಾರ್ ಪತ್ನಿ ಶ್ರೀದೇವಿ ಅವರ ದಾಂಪತ್ಯ ಬದುಕಿನಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗಿದ್ದು, ಡಿವೋರ್ಸ್‌ ಕೇಸ್ ವಿಚಾರಣೆಯ ಹಂತದಲ್ಲಿದೆ.

ಇದನ್ನೂ ಓದಿ: ಯುವ ರಾಜ್‌ಕುಮಾರ್‌ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜನಾ? ಅಣಾವ್ರ ಕುಟುಂಬ ಹೇಳಿದ್ದೇನು? 

ಯುವ ರಾಜ್‌ಕುಮಾರ್ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಶ್ರೀದೇವಿ ಅವರ ತಂದೆ ಭೈರಪ್ಪನವರು ನ್ಯೂಸ್ ಫಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗಳ ಹಾಗು ಯುವ ನಡುವಿನ ವೈಮನಸ್ಸು ನಮಗೆ ಮೊದಲೇ ಗೊತ್ತಿತ್ತು. ಇಬ್ಬರು ಒಟ್ಟಿಗೆ ಇರಲಿ ಅನ್ನೋದು ನಮ್ಮ ಆಸೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಡಿವೋರ್ಸ್​ ಕೊಟ್ಟು ಮತ್ತೆ ಒಂದಾಯ್ತು ಜೋಡಿ.. ಪರಸ್ಪರ ತಬ್ಬಿ ಕಣ್ಣೀರು ಇಡುತ್ತ ಮತ್ತೆ ಸತಿ-ಪತಿ ಆಗಿಬಿಟ್ರು..! 

ಯುವ ರಾಜ್‌ಕುಮಾರ್ ಅವರು ಕೋರ್ಟ್ ಮೊರೆ ಹೋಗಿರೋದ್ರಿಂದ ನಾವು ಕಾನೂನು ಸಮರ ಎದುರಿಸುತ್ತೇವೆ. ನನ್ನ ಮಗಳು ಸಾಕಷ್ಟು‌ ಹಿಂಸೆ ಅನುಭವಿಸಿದ್ದಾಳೆ. ನಾನು ಶಿವರಾಜ್‌ ಕುಮಾರ್ ಬಳಿ ಮಾತನಾಡಬೇಕು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲೇ ಇಲ್ಲ. ಕಳೆದ ಡಿಸೆಂಬರ್ ತಿಂಗಳಲ್ಲೇ ನನಗೆ ನೋಟಿಸ್ ಕಳಿಸಿದ್ದರು. ಬಳಿಕ ಯುವ ಬಂದು ಮಾತನಾಡಿದರು. ನನ್ನ ಮಗಳು ವಿದೇಶದಿಂದ ಬರಬೇಕು. ಅದಾದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಯುವ ಮಾವ ಭೈರಪ್ಪ ಹೇಳಿದ್ದಾರೆ.

ಡಾ. ರಾಜ್‌ ಕುಮಾರ್ ಅಕಾಡೆಮಿ ಆರಂಭಿಸಿದ್ದೇ ನನ್ನ ಮಗಳು. ಅಂದಿನಿಂದ ಅವರಿಬ್ಬರ ನಡುವೆ ಸ್ನೇಹವಿತ್ತು. ಯುವ ರಾಜ್‌ಕುಮಾರ್, ಶ್ರೀದೇವಿ ಮದುವೆಯಾಗಿ ಐದು ವರ್ಷಗಳಾಗಿವೆ. ಒಂದು ವರ್ಷದ ಹಿಂದೆ ನನ್ನ ಮಗಳನ್ನು ಹೆಚ್ಚಿನ ವ್ಯಾಸಂಗಕ್ಕೆ ಯುವನೇ ವಿದೇಶಕ್ಕೆ ಕಳುಹಿಸಿದ್ದರು. ಮದುವೆಯಾದ ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ಆದರೆ ನನ್ನ ಮಗಳು ಸಾಕಷ್ಟು‌ ಹಿಂಸೆ ಅನುಭವಿಸಿದ್ದಾಳೆ. ನಮಗೆ ಅವರಿಬ್ಬರು ಚೆನ್ನಾಗಿರಬೇಕು ಅಂತ ಆಸೆ. ನಾವು ಯಾವುದೇ ಕಾರಣಕ್ಕೂ ಡಿವೋರ್ಸ್ ಕೊಡಲ್ಲ ಎಂದು ಭೈರಪ್ಪನವರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಯುವ ರಾಜ್‌ಕುಮಾರ್ ವಿಚ್ಛೇದನಕ್ಕೆ ಕಾರಣವೇನು? ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮಾವ ಭೈರಪ್ಪ; ಏನಂದ್ರು?

https://newsfirstlive.com/wp-content/uploads/2024/06/Yuva-Rajkumar-Divorce-11.jpg

Load More