/newsfirstlive-kannada/media/post_attachments/wp-content/uploads/2025/06/RCR_36.jpg)
ಸುಖಸಂಸಾರಕ್ಕೆ 12 ಸೂತ್ರಗಳು ಎಂಬ ಮಾತಿದೆ, ಆದ್ರೆ ರಾಯಚೂರಲ್ಲಿ ಹೆಣ್ಣು ಕೊಟ್ಟ ಮಾವನೊಬ್ಬ ಅಳಿಯನಿಗೆ ಬರೋಬ್ಬರಿ 36 ಷರತ್ತು ವಿಧಿಸಿದ್ದಾನೆ. ಈ ಎಲ್ಲಾ ಷರತ್ತು ಒಪ್ಪಿದರೆ ಮಾತ್ರ ಮಗಳನ್ನ ಅಳಿಯನ ಜೊತೆ ಕಳಿಸುವುದಾಗಿ ತಾಕೀತು ಮಾಡಿದ್ದಾನೆ.
ಯುವಕನ ಹೆಸರು ಬ್ರಹ್ಮಾನಂದ, ಇವನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನವನು. 2021ರಲ್ಲಿ 2 ಕುಟುಂಬಗಳು ಪರಸ್ಪರ ಒಪ್ಪಿ, ಬ್ರಹ್ಮಾನಂದನಿಗೂ ರಾಯಚೂರು ನಗರದ ಉದಯಕುಮಾರ್ ಎಂಬುವರ ಮಗಳಿಗೂ ಮದುವೆ ಮಾಡಿದ್ದರು. ಕೊರೊನಾ ಸಮಯದಲ್ಲಿ ಇಬ್ಬರ ವಿವಾಹ ಅದ್ಧೂರಿಯಾಗಿ ಆಗದಿದ್ದರೂ 2 ಕುಟುಂಬದ ಸದಸ್ಯರು ಸೇರಿ ಸಂಭ್ರಮದಿಂದ ಮದುವೆ ಕಾರ್ಯ ನೆರವೇರಿಸಿದರು. ಆದ್ರೆ ಮದುವೆ ಆದ್ರೂ ಗಂಡ ಹೆಂಡತಿ ಜೊತೆಯಾಗಿ ಬಾಳೋಕೆ ಮಾತ್ರ ಆಗ್ತಾ ಇಲ್ಲ. ಇದಕ್ಕೆ ಕಾರಣ ಮಾತ್ರ ಮಾವನ ಆ 36 ಷರತ್ತುಗಳು.
2021ರಲ್ಲಿ ಮದುವೆಯಾದ ಬಳಿಕ ಅದರ ಪ್ರತಿರೂಪವಾಗಿ ಒಂದು ಗಂಡು ಮಗು ಸಹ ಜನಿಸುತ್ತದೆ. ಇಲ್ಲಿಯವರೆಗೂ ಯಾವುದೇ ಸಮಸ್ಯೆ ಬಾರದೆ ಆನಂದದಿಂದ ಇದ್ದ ಕುಟುಂಬದಲ್ಲಿ ಬಿರುಗಾಳಿಯ ಸೃಷ್ಟಿಯಾಯಿತು ಅಂತಾರೆ ಬ್ರಹ್ಮಾನಂದ. ಒಂದಿನ ಮಾವ ವಿನೋದ್ ಕುಮಾರ್ ಹಾಗೂ ಕುಟುಂಬದವರು ರಾಯಚೂರಿನಿಂದ ರಾಯದುರ್ಗಕ್ಕೆ ಬಂದಿದ್ದರು. ನಂತರ ನನ್ನ ಹೆಂಡತಿ ಸ್ವಪ್ನಾರನ್ನು ಕರೆದೊಯ್ದಿದ್ದಾರೆ ಹಾಗೂ ನನ್ನ ಹೆಂಡತಿಯನ್ನು ಕರೆದೊಯ್ದು ಈವರೆಗೂ 3 ವರ್ಷಗಳಾದ್ರು ನನ್ನ ಹೆಂಡತಿ, ಮಗುವನ್ನು ನೋಡಲು ಬಿಡುತ್ತಿಲ್ಲ ಎಂಬುದು ಬ್ರಹ್ಮಾನಂದ ಆರೋಪ.
ಮಾವ ವಿನೋದ ಕುಮಾರ ಈ ನಡೆಗೆ ಮುಖ್ಯ ಕಾರಣ ಅಂದ್ರೆ ಆ ಮೂವತ್ತಾರು ಷರತ್ತುಗಳು. ಅಳಿಯ ಬ್ರಹ್ಮಾನಂದನಿಗೆ ಮೂವತ್ತಾರು ಷರತ್ತುಗಳನ್ನು ವಿಧಿಸಿದ್ದ ಮಾವ ವಿನೋದ್ ಕುಮಾರ್ ಈ ಷರತ್ತುಗಳನ್ನು ಪಾಲಿಸಿದರೆ ಮಾತ್ರ ಮಗಳನ್ನು ಅಳಿಯನ ಜೊತೆ ಕಳಿಸುವುದಾಗಿ ತಾಕೀತು ಮಾಡಿದ್ದನಂತೆ. ಮಾವ ವಿಧಿಸಿದ್ದ ಷರತ್ತು ಯಾವ್ಯಾವು ಅಂತಾ ನೋಡೋದಾದ್ರೆ.
- ಮನೆಯಿಂದ ಆಚೆ ಬಂದು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸಬೇಕು. ಸಂಸಾರಕ್ಕೆ ಬೇಕಾಗುವ ವಸ್ತುಗಳು ಖರೀದಿ ಮಾಡಬೇಕು, ಸ್ವಂತ ಬಾಳಿ ಬದುಕಿದ ನಂತರ ಮಗಳನ್ನು ಕಳಿಸುವೆ, ಅಲ್ಲಿವರೆಗೂ ಮಗಳನ್ನ ಕಳಿಸಲ್ಲ.
- ಪ್ರತಿ ತಿಂಗಳ ಆದಾಯ ಸಂಪಾದನೆ ಲೆಕ್ಕ ಪತ್ರ ತೋರಿಸಬೇಕು. ನನ್ನ ಮಗಳ ಭವಿಷ್ಯಕ್ಕಾಗಿ ನಾನು ಲೆಕ್ಕಪತ್ರ ಕೇಳುತ್ತೇನೆ.
- ಸಾಧಾರಣವಾಗಿ ಎಲ್ಲರಂತೆ ಬಾಳಬೇಕು, ಎಲ್ಲದರಲ್ಲಿ ಭಾಗವಹಿಸಬೇಕು. ಅವರು ಬೇಡ ಇವರು ಬೇಡ ಅನಬಾರದು.
- ಎಲ್ಲರಿಗೂ ಮರ್ಯಾದೆ ಕೊಟ್ಟು ಮರ್ಯಾದೆಯಿಂದ ಮಾತಾಡಬೇಕು. ಏಕವಚನದಲ್ಲಿ ಮಾತಾಡಬಾರದು.
- ನಿನ್ನ ಸಂಸಾರದಲ್ಲಿ ನಿನ್ನ ಅಕ್ಕತಂಗಿಯರು ಎಂಟ್ರಿ ಆಗಬಾರದು. ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಬಾರದು. ಸ್ವಪ್ನಾಗೆ ಸ್ವತಂತ್ರವಾಗಿ ಬಾಳಲು ಬಿಡಬೇಕು.
- ನೀನು ಭ್ರಮಿತನಾಗಿ ಬರಿ ದೇವರು ದೇವರು ಎನ್ನಬಾರದು. ಮೊದಲು ದುಡ್ಡು ಸಂಪಾದಿಸು, ಪ್ರೀತಿಯಿಂದ ಬಾಳು.
- ಸ್ವಪ್ನಾ ರಾಯದುರ್ಗ ಬಂದ ಮೇಲೆ ಹಿಂಸೆ ತೊಂದರೆ ಕೊಟ್ಟರೆ, ಅನಾಹುತವಾದ್ರೆ ಅದಕ್ಕೆ ನೀನು ನಿನ್ನ ಕುಟುಂಬಸ್ಥರು ಕಾರಣ.
- ಮದುವೆಗೂ ಮುಂಚೆ ನೀನು ದಿನಕ್ಕೆ 5000-8000 ದುಡಿಯುತ್ತೀನಿ ಅಂತಾ ಹೇಳಿದ್ದೆ. ಒಟ್ಟು ತಿಂಗಳಿಗೆ 1.50 ಆಗುತ್ತೆ, ಪ್ರತಿ ತಿಂಗಳು ನಿನ್ನ ಹೆಂಡತಿಯ ಅಕೌಂಟ್ನಲ್ಲಿ 50,000 ಹಣ ಜಮಾ ಮಾಡಬೇಕು.
- ಬೆಡ್ ಶೀಟ್, ಪಿಲೊ, ಡಿವಿ,ಕೂಲರ್ ಎಲ್ಲದಕ್ಕೂ ಜಗಳವಾಡುತ್ತೀರಿ, ಬ್ರಹ್ಮ ಯಾವುದಕ್ಕೂ ಓನರ್ ಇಲ್ಲ, ನೋ ಇಂಡಿಪೆಂಡೆಂಟ್ ಲೈಫ್.
- ಯಾವತ್ತು ಹಸಿವಿನಿಂದ ಬಾಳುತ್ತಿ ನಾನೇ ಎಂದು ಹೇಳುತ್ತೀಯಾ ಏಕವಚನದಲ್ಲಿ ಮಾತನಾಡುತ್ತೀಯ ಎಲ್ಲರಿಗೂ ಏಕವಚನದಿಂದ ಮಾತನಾಡುತ್ತೀಯ.
- ನೀನೊಬ್ಬನೇ ಬಲವಂತ ಎನ್ನುವಂತೆ ಮಾತನಾಡುತ್ತೀಯ
- ನಿಮ್ಮಪ್ಪ ಅಮ್ಮನಿಗೂ ಮರ್ಯಾದೆ ಕೊಡದೆ ಮಾತನಾಡುತ್ತೀಯ ಅವರಿಗೆ ಮಾತನಾಡಿದ ಹಾಗೆ ನಮಗೂ ಮರ್ಯಾದೆ ಕೊಡದೆ ಮಾತನಾಡುತ್ತೀಯ.
- ಹೊರಗಡೆ ಹೀಗೆ ಮಾತನಾಡಿದರೆ ನಿನಗೆ ಹೊಡೆದರೆ ಏನೇ ಅನಾಹುತವಾದರೆ ಯಾರು ಜವಾಬ್ದಾರಿ?.
- ಇಷ್ಟಿದ್ದ ಮೇಲೆ ನಮ್ಮ ಮಗಳಿಗೆ ಎಷ್ಟು ಮಾತು ನೀನು ಅದಕ್ಕಾಗಿ ನಿನ್ನ ಮೇಲೆ ವಿಶ್ವಾಸ ಭರವಸೆ ಹೋಗಿದೆ
- ನಿನಗಿಂತ ಹೆಚ್ಚು ದುಡಿತೀನಿ ನೀನ್ಯಾರು? ನಿನ್ನ ಮಿತಿಯಲ್ಲಿ ಇರು ಎಂದು ಹೇಳುತ್ತೀಯಾ?
- ನಮ್ಮ ಮಗಳ ಮದುವೆಗೆ ನಾವು ಬರದೇ ಅಕ್ಷತೆಯು ಹಾಕದೆ ಮದುವೆಗೆ ಒಪ್ಪಿಕೊಂಡೆವು
- ಅಮೃತಾಗೆ ಈ ಜವಾಬ್ದಾರಿ ಒಪ್ಪಿಸಿ ಕರೆದುಕೊಂಡು ಹೋಗಲು ಕೊಟ್ಟಿದ್ದೇವೆ
- ಮದುವೆಗೂ ಮುಂಚೆ ನಾವು ಕೆಲಸ ಮಾಡುವವರನ್ನು ಇಡುತ್ತೇವೆ ಮತ್ತು ಎಲ್ಲಾ ತರಹದ ಸ್ವಾತಂತ್ರವಾಗಿ ಆರೋಗ್ಯವಾಗಿ ಯಾವುದೇ ತೊಂದರೆ ಕೊಡಲಾರದೆ ಇಡುತ್ತೇವೆ ಎಂದು ಹೇಳಿದ್ದೀರಿ
- ಆದರೆ ನಮ್ಮ ಮಗಳು ಗರ್ಭವತಿ ಇದ್ದು ಏಳೆಂಟು ತಿಂಗಳು ಅವಳೊಬ್ಬಳೇ ಎಲ್ಲಾ ಕೆಲಸ ಮಾಡುತ್ತಾ ಬಂದಿದ್ದಾಳೆ
- ಮದುವೆ ಆದ ನಂತರ ಎರಡು ಮೂರು ತಿಂಗಳ ತನಕ ಮನೆಗೆ ಕಳಿಸ್ತೀನಿ ಅಂತ ಹೇಳಿದ್ದೀರಿ ಆದರೆ ನೀವು ಕಳಿಸಲೇ ಇಲ್ಲ
- ನೀವು ನನ್ನ ಮಗಳನ್ನು ಬಂದಿಖಾನೆಯಲ್ಲಿ ಇರಿಸಿದ್ದೀರಿ
- ತಂದೆ ತಾಯಿ ಇಲ್ಲದೆ ಕುಟುಂಬಸ್ಥರು ಬಂಧು-ಬಳಗ ಯಾರು ಇಲ್ಲದೆ ಮದುವೆ ಮಾಡಲು ಒಪ್ಪಿಕೊಂಡಿದ್ದೇವೆ
- ಅವಳು ಆರಾಮಾಗಿ ಇರದಿದ್ದರೂ ಚಿಂತಿಸದೇ ನಿಮ್ಮ ಆರೋಗ್ಯಕ್ಕಾಗಿ ಅವಳು ಎಲ್ಲಾ ತರ ಕೆಲಸ ಮಾಡಿದ್ದಾಳೆ
- ಅವಳನ್ನು ಎಲ್ಲಿಯೂ ಹೊರಗಡೆ ಕಳಿಸಿಲ್ಲ
- ಬಿ.ಕೆ ರಾಜಶೇಖರ ಕುಟುಂಬ ಹಾಗೂ ವಿನ್ನು ಉದಯಕುಮಾರ್ ಕುಟುಂಬ ಎಲ್ಲರೂ ಈ ಎಲ್ಲಾ ಷರತ್ತು ಒಪ್ಪಿದ್ದೇವೆ
- ಮುಂದಿನ ದಿನಗಳಲ್ಲಿ ಬ್ರಹ್ಮನ ನಡುವಳಿಕೆ ನೋಡಿ ಮಗಳನ್ನು ಕಳಿಸುತ್ತೇವೆ ಎಂದು ಷರತ್ತು ವಿಧಿಸಿದ್ದ ಮಾವ.
ಇದನ್ನೂ ಓದಿ:ಬೆಂಗಳೂರು; ಹೃದಯಾಘಾತದಿಂದ ಆಚಾರ್ಯ ಕಾಲೇಜಿನ ಉಪನ್ಯಾಸಕ ನಿಧನ
ಒಟ್ಟಾರೆ ಮಗಳನ್ನು ಮದುವೆ ಮಾಡಿಕೊಟ್ಟ ಮಾವ ಇಬ್ಬರನ್ನು ಸಂಸಾರ ಮಾಡಲು ಬಿಡದೆ ಅನಾವಶ್ಯಕ ವಿಧಿಸಿದ ಷರತ್ತಿನಿಂದಾಗಿ ಮಗಳು ಅಳಿಯ ಹಾಗೂ ಮೊಮ್ಮಗನಿಗೂ ನೆಮ್ಮದಿ ಇಲ್ಲದಂತಾಗಿದೆ. ಷರತ್ತುಗಳಿಗೆ ಒಪ್ಪಿದರೆ ಮಾತ್ರ ಮಗಳನ್ನು ಕಳಿಸುತ್ತೇವೆ ಎಂದಿರುವ ಮಾವನಿಂದಾಗಿ ಅಳಿಯ ಕಂಗಾಲಾಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ