/newsfirstlive-kannada/media/post_attachments/wp-content/uploads/2024/11/EV-Show-Room-Fire.jpg)
ಬೆಂಗಳೂರು: ರಾಜಾಜಿನಗರದಲ್ಲಿರುವ EV ಎಲೆಕ್ಟ್ರಿಕ್ ಬೈಕ್ ಶೋ ರೂಂ ಧಗಧಗನೇ ಹೊತ್ತಿ ಉರಿದಿದ್ದು, ಭಾರೀ ಅಗ್ನಿ ಅವಘಡ ಸಂಭವಿಸಿದೆ. ಗ್ರೀನ್ ಸಿಟಿ ಮೋಟಾರ್ಸ್ ಈ ಶೋ ರೂಂನ ಹೆಸರು. ಬೆಂಕಿಯ ಜ್ವಾಲೆಗೆ ನೋಡ ನೋಡುತ್ತಿದ್ದಂತೆ ಶೂ ರೂಂನಲ್ಲಿದ್ದ ಎಲ್ಲಾ ಬೈಕ್‌ಗಳು ಸಂಪೂರ್ಣ ಸುಟ್ಟು ಹೋಗಿವೆ.
EV ಬೈಕ್ ಶೋ ರೂಂನ ಈ ಬೆಂಕಿ ಅವಘಡಕ್ಕೆ ಪ್ರಿಯಾ ಎಂಬ ಯುವತಿ ಸಾವನ್ನಪ್ಪಿದ್ದಾರೆ. ಪ್ರಿಯಾ ಅವರ ಮೃತದೇಹ ಗುರುತೇ ಸಿಗದಂತೆ ಸುಟ್ಟು ಕರುಕಲಾಗಿದ್ದು, ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಶೋ ರೂಂನಲ್ಲಿದ್ದ ಯುವರಾಜ್, ವೇದಾವತಿ ಹಾಗೂ ದಿಲೀಪ್ ಎಂಬುವವರಿಗೂ ಗಾಯಗಳಾಗಿದ್ದು, ರಾಜಾಜಿನಗರದ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/11/fire.jpg)
ಇದನ್ನೂ ಓದಿ: EV ಬೈಕ್​ ಶೋ ರೂಮ್​ನಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ಬೆಂಕಿಗೆ ಯುವತಿ ಆಹುತಿ
ನಾಳೆ ಮಗಳ ಬರ್ತ್‌ಡೇ!
ಎಲೆಕ್ಟ್ರಿಕ್ ಬೈಕ್ ಶೋ ರೂಂ ಬೆಂಕಿಯಲ್ಲಿ ಮೃತಪಟ್ಟ ಪ್ರಿಯಾ ಅವರ ದುರಂತ ಕರುಣಾಜನಕವಾಗಿದೆ. ರಾಜಾಜಿನಗರ ಪೊಲೀಸ್ ಠಾಣೆ ಬಳಿ ಓಡೋಡಿ ಬಂದಿರುವ ಪ್ರಿಯಾ ತಂದೆ ಆರ್ಮುಗಂ ಅವರು ಮಗಳನ್ನ ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/11/bangalore-show-room-fire.jpg)
ನವೆಂಬರ್ 20ರಂದು ಪ್ರಿಯಾ ಅವರ ಬರ್ತ್ ಡೇ ಇತ್ತು. ನಾಳೆ ನನ್ನ ಮಗಳ ಬರ್ತ್ ಡೇ ಸಾರ್ ಇವತ್ತು ಮಗಳನ್ನ ಕಳೆದುಕೊಂಡಿದ್ದೇವೆ. ನನಗೆ ಈ ವಿಚಾರ ಗೊತ್ತಿಲ್ಲ ಈಗ ತಾನೆ ಇಲ್ಲಿಗೆ ಬಂದೆ. ನಾವು ಓಕಳೀಪುರಂನಲ್ಲಿ ವಾಸ ಇರೋದು. ನನ್ನ ಮಗಳು ಇಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ಕಳೆದ ಮೂರು ವರ್ಷಗಳಿಂದ ಇದೇ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದಳು. ನನ್ನ ಮಗಳಿಗೆ ಏನಾಯಿತು ಅಂತ ಗೊತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.
ನಾಳೆ ಪ್ರಿಯಾಳ 21ನೇ ವರ್ಷದ ಹುಟ್ಟುಹಬ್ಬ ಇದ್ದು, ತಂದೆ ಆರ್ಮುಗಂ ಬರ್ತ್ ಡೇಗೆ ಹೊಸ ಬಟ್ಟೆ ಕೊಡಿಸಿದ್ದರಂತೆ. ಮೃತ ಪ್ರಿಯಾ ಇಂದು ಬೆಳಗ್ಗೆ 10 ಗಂಟೆಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು. ಸಂಜೆ 7:15 ರಷ್ಟೊತ್ತಿಗೆ ಮನೆಗೆ ಬರ್ತಿನೆಂದು ಹೇಳಿ ತೆರಳಿದ್ದರು. ನಾಳೆ ಮಗಳ ಹುಟ್ಟುಹಬ್ಬ ಇವತ್ತು ಹೀಗಾಗಿದೆ. ಶೋ ರೂಂ ಓನರ್ ಓಡಿ ಹೋಗಿದ್ದಾನೆ. ನಮಗೆ ಯಾರು ಪೋನ್ ಮಾಡಿ ತಿಳಿಸಿಲ್ಲ. ನಮ್ಮ ಮಗಳಿಗೆ ಹೀಗಾದ್ರು ಒಂದು ಫೋನ್ ಮಾಡಿ ನಮಗೆ ತಿಳಿಸಿಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us