ಅಕ್ಷಯ್​ ನಿಧನದ ಸುದ್ದಿ ವೀಲ್ ಚೇರ್​ನಲ್ಲಿರೋ ತಂದೆಗೆ ಇನ್ನೂ ಗೊತ್ತೇ ಇಲ್ಲ..!

author-image
Veena Gangani
Updated On
ಅಕ್ಷಯ್ ಕುಟುಂಬದಲ್ಲಿ ಮತ್ತೊಂದು ಆಘಾತ.. ಮಗನ ನೆನಪಲ್ಲೇ ಕೊನೆಯುಸಿರೆಳೆದ ತಂದೆ
Advertisment
  • ಮಗ ಅಕ್ಷಯ್ ಮೃತಪಟ್ಟಿರುವ ವಿಚಾರ ಇನ್ನೂ ಅಪ್ಪನಿಗೆ ಗೊತ್ತಿಲ್ಲ
  • ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಅಕ್ಷಯ್​ ನಿಧನ
  • ಮಗನ ನಿಧನ ಸುದ್ದಿಯನ್ನ ಅಪ್ಪನಿಗೆ ತಿಳಿಸದ ಕುಟುಂಬಸ್ಥರು

ಬೆಂಗಳೂರು: ಮರದ ಕೊಂಬೆ ಬಿದ್ದು ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಷಯ್ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಹೌದು, ಜೂನ್ 15 ಭಾನುವಾರ ಅಕ್ಷಯ್ ಅಪ್ಪನಿಗೆ ಮಟನ್ ಇಷ್ಟ ಅನ್ನೋ ಕಾರಣಕ್ಕೆ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮಟನ್ ತರಲು ಹೋಗಿ ವಾಪಸ್ ಬರುತ್ತಿದ್ದಾಗ ಬ್ರಹ್ಮ ಮಂದಿರದ ಬಳಿ ಮರದ ಕೊಂಬೆ ಮುರಿದು ಅಕ್ಷಯ್ ತಲೆ ಮೇಲೆ ಬಿದ್ದಿದೆ.

ಪರಿಣಾಮ ಪ್ರಜ್ಜೆ ತಪ್ಪಿ ರಸ್ತೆಯಲ್ಲಿ ಬಿದ್ದ ಅಕ್ಷಯ್​​ನನ್ನ ಕೂಡಲೇ ಸ್ಥಳೀಯ ಪ್ರಶಾಂತ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಲೆ ಭಾಗಕ್ಕೆ ಗಂಭೀರ ಗಾಯವಾದ ಕಾರಣ, ತಲೆಯಲ್ಲಿ ರಕ್ತ ಹರಿಯುತ್ತಿರೋದು ನಿಲ್ಲದ ಕಾರಣ ತ್ಯಾಗರಾಜನಗರದ ಪ್ರಶಾಂತ್ ಆಸ್ಪತ್ರೆಯಿಂದ ಜಯನಗರದ 3ನೇ ಬ್ಲಾಕ್​ನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಅಕ್ಷಯ್​ ಇಂದು ಮಧ್ಯಾಹ್ನ 1 ಗಂಟೆಗೆ ಉಸಿರು ನಿಲ್ಲಿಸಿದ್ದಾರೆ.

ಇದನ್ನೂ ಓದಿ: ಥಗ್ ಲೈಫ್ ಬಿಡುಗಡೆ ಮಾಡಿದರೆ ಸಂಪೂರ್ಣ ರಕ್ಷಣೆ ನೀಡುತ್ತೇವೆ -ಕರ್ನಾಟಕ ಸರ್ಕಾರ ಅಫಿಡವಿಟ್

ಇನ್ನೂ, ಅಕ್ಷಯ್ ಮೃತಪಟ್ಟ ಸುದ್ದಿಯನ್ನ ಖುದ್ದು ಅಪ್ಪನಿಗೆ ತಿಳಿಸಲು ಕುಟುಂಬಸ್ಥರು ಒದ್ದಾಟ ನಡೆಸುತ್ತಿದ್ದಾರೆ. ಮಗ ಅಕ್ಷಯ್ ಮೃತಪಟ್ಟಿರುವ ವಿಚಾರ ಇನ್ನೂ ಅಪ್ಪನಿಗೆ ಗೊತ್ತಿಲ್ಲವಂತೆ. ಅಕ್ಷಯ್​ ತಂದೆ ನಾಳೆ ಮಗ ಮನೆಗೆ ಬರ್ತಾನೆ ಅಂದುಕೊಂಡಿದ್ದಾರಂತೆ. ಅಷ್ಟೇ ಅಲ್ಲದೇ ಮಗ ಗಂಭೀರ ಗಾಯಗೊಂಡಿರುವ ವಿಚಾರವನ್ನೇ ಕುಟುಂಬಸ್ಥರು ತಂದೆಯಿಂದ ಮುಚ್ಚಿಟ್ಟಿದ್ದಾರಂತೆ. ಆದ್ರೆ ಮಗನನ್ನ ನೋಡಲೇಬೇಕೆಂದು ತಂದೆ ಇಂದು ಹಠ ಹಿಡಿದಿದ್ದಾರಂತೆ. ಇದೇ ಕಾರಣಕ್ಕೆ ವೀಲ್ ಚೇರ್​ನಲ್ಲಿ ಕುರಿಸಿಕೊಂಡು ಅಪೋಲೊ ಆಸ್ಪತ್ರೆಗೆ ತಂದೆಯನ್ನ ಕರ್ಕೊಂಡು ಬಂದಿದ್ದಾರೆ. ಇನ್ನೂ, ಈ ವೇಳೆ ಮಗನ ಸ್ಥಿತಿ ನೋಡಿ ಅಕ್ಷಯ್ ತಂದೆ ಗಾಬರಿಯಾಗಿದ್ದರಂತೆ. ಅಕ್ಷಯ್ ಪರಿಸ್ಥಿತಿಯ ಬಗ್ಗೆ ತನ್ನ ಇನ್ನೊಬ್ಬ ಪುತ್ರ ಬೆನಕರಾಜ್ ಹತ್ರ ತಂದೆ ಪ್ರಶ್ನೆ ಮಾಡಿದ್ದಾರಂತೆ. ಅನೆಸ್ತಿಯಾ ಕೊಡಲಾಗಿದೆ, ಅದಕ್ಕೆ ಅಕ್ಷಯ್ ಮಲಗಿದ್ದಾನೆ. ನಾಳೆ ಬೆಳಗ್ಗೆ ಮನೆಗೆ ಬರ್ತಾನೆ ಅಂತ ಹೇಳಿದ್ದಾರಂತೆ. ಆದ್ರೆ ಅಕ್ಷಯ್​ ತಂದೆ ಡಯಾಲಿಸಿಸ್ ಪೇಷಂಟ್ ಆಗಿದ್ದಾರೆ. ಪುತ್ರನ ಸಾವಿನ ಸುದ್ದಿಯನ್ನ ತಂದೆಗೆ ಹೇಳುವುದು ಹೇಗೆ ಅಂತ ಕುಟುಂಬಸ್ಥರು ಚಿಂತೆಯಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment