/newsfirstlive-kannada/media/post_attachments/wp-content/uploads/2024/06/twins.jpg)
ದೆಹಲಿ: ಪಾಪಿ ತಂದೆಯೊಬ್ಬ ತನ್ನ ಮುದ್ದಾದ ಅವಳಿ ಮಕ್ಕಳನ್ನೇ ಕೊಂದಿರೋ ಮನಕಲಕುವ ಘಟನೆ ದೆಹಲಿಯಲ್ಲಿ ನಡೆದಿದೆ. ಹೌದು, ಅವಳಿ ಹೆಣ್ಣು ಮಕ್ಕಳು ಹುಟ್ಟಿದೆ ಎಂಬ ಕಾರಣಕ್ಕೆ ಅಸಮಾಧಾನಗೊಂಡ ಮಗುವಿನ ತಂದೆ ಹಾಗೂ ಕುಟುಂಬಸ್ಥರು ಎರಡೂ ಶಿಶುಗಳನ್ನು ದಾರುಣವಾಗಿ ಕೊಂದಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.
ಇದನ್ನೂ ಓದಿ:BREAKING: ಕಬಾಬ್ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಸರ್ಕಾರದಿಂದ ಮಹತ್ವದ ಆದೇಶ
ಹೌದು, ಪೂಜಾ ಸೋಲಂಕಿ ಎಂಬ ಮಹಿಳೆ ಇತ್ತೀಚೆಗೆ ಎರಡು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಬಳಿಕ ಜೂನ್ 1ರಂದು ಪೂಜಾ ತನ್ನ ಶಿಶುಗಳೊಂದಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಅವಳಿ ಮಕ್ಕಳನ್ನು ಆರೈಕೆ ಮಾಡವ ಉದ್ದೇಶದಿಂದ ತಾಯಿ ಪೂಜಾ ರೋಹ್ಟಕ್‌ನಲ್ಲಿರುವ ತನ್ನ ತಾಯಿಯ ಮನೆಗೆ ಹೋಗಲು ಬಯಸಿದ್ದಳು. ಇದೇ ವಿಚಾರ ತಿಳಿಯುತ್ತಿದ್ದಂತೆ ಪತಿ ನೀರಜ್ ಸೋಲಂಕಿ ತನ್ನ ಕಾರಿನಲ್ಲಿ ಅವಳಿ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಕೊಂದಿದ್ದಾನಂತೆ. ನೀರಜ್ ಸೋಲಂಕಿ ಕುಟುಂಬಸ್ಥರಿಗೆ ಗಂಡು ಮಗು ಆಗಬೇಕು ಅಂತ ಆಸೆ ಇತ್ತಂತೆ. ಆದರೆ ಅವಳಿ ಹೆಣ್ಣು ಮಕ್ಕಳು ಜನಿಸಿದ್ದನ್ನು ಸಹಿಸಿಕೊಳ್ಳದ ನೀರಜ್ ಸೋಲಂಕಿ ತಾಯಿಗೂ ತಿಳಿಸದೆ ಶಿಶುಗಳನ್ನು ಕರೆದುಕೊಂಡು ಹೋಗಿ ಕೊಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ.
ಬಳಿಕ ಮಕ್ಕಳ ಬಗ್ಗೆ ತಾಯಿ ವಿಚಾರಿಸಿದಾಲಗ, ಶಿಶುಗಳು ಅನಾರೋಗ್ಯದಿಂದ ಸತ್ತಿವೆ ಎಂದು ಸುಳ್ಳು ಹೇಳಿದ್ದಾನಂತೆ. ಅನುಮಾನಗೊಂಡ ತಾಯಿ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ಮಗುವಿನ ಅಜ್ಜನನ್ನು ಬಂಧಿಸಿದ್ದಾರೆ. ಆದರೆ, ಪತಿ ತಲೆಮರೆಸಿಕೊಂಡಿದ್ದಾನೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಶವಪರೀಕ್ಷೆ ವರದಿ ಬಂದ ನಂತರ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ