ಬಾಗಲಕೋಟೆಯಲ್ಲಿ ದಾರುಣ ಘಟನೆ.. ಸ್ಥಳದಲ್ಲೇ ಜೀವ ಬಿಟ್ಟ ಅಮ್ಮ-ಮಗ, ಆಸ್ಪತ್ರೆಯಲ್ಲಿ ಅಪ್ಪ ನಿಧನ

author-image
Ganesh
ಬಾಗಲಕೋಟೆಯಲ್ಲಿ ದಾರುಣ ಘಟನೆ.. ಸ್ಥಳದಲ್ಲೇ ಜೀವ ಬಿಟ್ಟ ಅಮ್ಮ-ಮಗ, ಆಸ್ಪತ್ರೆಯಲ್ಲಿ ಅಪ್ಪ ನಿಧನ
Advertisment
  • ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ
  • ಮೃತರ ಸಂಖ್ಯೆ ಮೂರಕ್ಕೆ ಏರಿಕೆ, ಇನ್ನಿಬ್ಬರಿಗೆ ಗಾಯ
  • ಒಂದೇ ಕುಟುಂಬದ ಮೂವರು ನಿಧನ, ಓರ್ವ ಗಂಭೀರ

ಬಾಗಲಕೋಟೆ: ಹುನಗುಂದ ತಾಲೂಕಿನ ಅಮೀನಗಡ ಬಳಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪ್ರಕರಣದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ.

ಗಂಭೀರವಾಗಿ ಗಾಯಗೊಂಡು ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೀರೇಶ ಅಂಗಡಿ (54) ನಿಧನರಾಗಿದ್ದಾರೆ. ಸಂದೇಶ್ ವಿರೇಶ್ ಅಂಗಡಿ (18), ಗಂಗಮ್ಮ ವಿರೇಶ್ ಅಂಗಡಿ (50) ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇನ್ನು ಇವರ ಮತ್ತೋರ್ವ ಮಗ ಸತೀಶ (28) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಹೊಸ ಮನೆಗೆ ಕಾಲಿಟ್ಟ ಬಿಗ್​ಬಾಸ್​ ಖ್ಯಾತಿಯ ಧನರಾಜ್ ದಂಪತಿ; ಫೋಟೋಸ್ ನೋಡಿ!​

ಇಂದು ಬೆಳಗ್ಗೆ ದುರ್ಘಟನೆ ಸಂಭವಿಸಿತ್ತು. ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬ ನಾಲ್ವರ ಪೈಕಿ ತಾಯಿ ಮಗ ಇಬ್ಬರೂ ಸ್ಥಳದಲ್ಲೇ ಜೀವ ಬಿಟ್ಟಿದ್ದರು. ಇದೀಗ ವಿರೇಶ್ ಅಂಗಡಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನೊಂದು ಕಾರಿನಲ್ಲಿದ್ದ ಚಾಲಕನಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಬಾದಾಮಿ ತಾಲೂಕಿನ ನೆಲುಗಿ ಗ್ರಾಮದವರು. ಅಮೀನಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ತಂದೆ ಆರೋಪ ಆಸ್ತಿಗೋಸ್ಕರ; ಒಂದೊಂದು ಮಾತಿಗೂ ತಾಯಿ ರೋಹಿಣಿ ಕೌಂಟರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment