/newsfirstlive-kannada/media/post_attachments/wp-content/uploads/2025/07/BIKE.jpg)
ಅಪ್ರಾಪ್ತನಿಗೆ ಬೈಕ್ ಕೊಟ್ಟ ತಂದೆಗೆ ಒಂದು ದಿನ ಜೈಲು ಶಿಕ್ಷೆ 30 ಸಾವಿರ ದಂಡ ವಿಧಿಸಿ ತುಮಕೂರು ಜಿಲ್ಲೆಯ ಗುಬ್ಬಿ ಜೆಎಂಎಫ್ ಸಿ ನ್ಯಾಯಾಲಯ ಆದೇಶ ನೀಡಿದೆ.
ತನ್ನ ಪುತ್ರನಿಗೆ ಬೈಕ್ ಕೊಟ್ಟು ಅಪಘಾತಕ್ಕೆ ಕಾರಣವಾಗಿದ್ದ ತಂದೆಗೆ ಆರು ತಿಂಗಳುಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ನೀಡಿದೆ. ಕೋರ್ಟ್ ಹಾಲ್​ನಲ್ಲಿರುವ ಸೆಲ್​ನಲ್ಲೇ ಒಂದು ದಿನದ ಜೈಲು ವಾಸ ಮತ್ತು ದಂಡ ವಿಧಿಸಲಾಗಿದೆ.
ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೆ ಜೈಲು ವಾಸ ಅನುಭಿವಿಸಿದ ವ್ಯಕ್ತಿ, ಸಂಜೆ 6 ಗಂಟೆ ಬಳಿಕ ರಿಲೀಸ್ ಆಗಿದ್ದಾನೆ. ಇತ್ತೀಚಿಗೆ ಅಪ್ರಾಪ್ತರಿಗೆ ವಾಹನಗಳನ್ನು ನೀಡುವ ಪ್ರಕರಣಗಳು ಹೆಚ್ಚಾಗ್ತಿರೋ ಹಿನ್ನೆಲೆ ನ್ಯಾಯಾಲಯ ಇದನ್ನ ಗಂಭಿರವಾಗಿ ಪರಿಗಣಿಸಿ ಈ ತೀರ್ಪು ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ