Advertisment

ಐಷಾರಾಮಿ ಹೋಟೆಲ್‌ ವಾಚ್​ಮ್ಯಾನ್ ಆಗಿದ್ದ ತಂದೆ.. ಈಗ ಮಗ ಮಾಡಿದ ಅದೊಂದು ಕೆಲಸಕ್ಕೆ ಬಿಗ್ ಸೆಲ್ಯೂಟ್

author-image
Gopal Kulkarni
Updated On
ಐಷಾರಾಮಿ ಹೋಟೆಲ್‌ ವಾಚ್​ಮ್ಯಾನ್ ಆಗಿದ್ದ ತಂದೆ.. ಈಗ ಮಗ ಮಾಡಿದ ಅದೊಂದು ಕೆಲಸಕ್ಕೆ ಬಿಗ್ ಸೆಲ್ಯೂಟ್
Advertisment
  • ಒಂದು ಕಾಲದಲ್ಲಿ ಹೋಟೆಲ್​​ನಲ್ಲಿ ವಾಚ್​​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದ ತಂದೆ
  • 25 ವರ್ಷಗಳ ಬಳಿಕ ತಂದೆಯನ್ನು ಅದೇ ಹೋಟೆಲ್​ಗೆ ಊಟಕ್ಕೆ ಕರೆದೊಯ್ದ ಮಗ
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಂದೆ ಮಗ ಊಟ ಮಾಡುವ ಫೋಟೋ

ಮಕ್ಕಳಿಗಾಗಿ ತಂದೆ ತನ್ನ ಇಡೀ ಜೀವನವನ್ನೇ ಮುಡುಪಿಡುತ್ತಾನೆ. ಅವರ ವಿದ್ಯಾಭ್ಯಾಸ ಅವರ ಬೆಳವಣಿಗೆ, ಅವರ ಯಶಸ್ಸು ನೋಡಲು ಆತ ಯಾವ ಕೆಲಸವನ್ನೂ, ಎಂತಹ ಕೆಲಸವನ್ನೂ, ಎಷ್ಟು ಗಂಟೆಯ ಕೆಲಸವನ್ನೂ ಮಾಡಲು ಸಿದ್ಧನಿರುತ್ತಾನೆ. ಅದರ ಹಿಂದಿರುವ ಒಂದೇ ಒಂದು ಉದ್ದೇಶ ಮಕ್ಕಳ ಶ್ರೇಯೋಭಿವೃದ್ಧಿ. ಅವರ ಕಲ್ಯಾಣ, ಅವರ ಬದುಕು ಹಸನಾಗಬೇಕು ಎಂಬ ಕನಸು.

Advertisment

ಇಂತಹ ತಂದೆಯರಲ್ಲಿ ದೆಹಲಿ ಮೂಲದವರು ಒಬ್ಬರು ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಅರ್ಯನ್ ಮಿಶ್ರಾ ಎಂಬುವವರ ತಂದೆ ತನ್ನ ಮಗನ ಉನ್ನತಿಗಾಗಿ ದುಡಿಯುತ್ತಿದ್ದರು. ದೆಹಲಿಯ ಐಟಿಸಿ ಹೋಟೆಲ್​ನಲ್ಲಿ ವಾಚ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದರು. ತಂದೆಯ ಶ್ರಮ ವ್ಯರ್ಥಗೊಳಿಸದ ಆರ್ಯನ್ ಉತ್ತಮ ವಿದ್ಯಾಭ್ಯಾಸ ಪಡೆದು ಒಂದು ಒಳ್ಳೆಯ ಹಂತಕ್ಕೆ ಬಂದರು.

ಇದನ್ನೂ ಓದಿ:ಐತಿಹಾಸಿಕ ಸಾಧನೆ; ತಾಯಿ ಮತ್ತು ಮಗ ಒಂದೇ ದಿನ ಪಡೆಯಲಿದ್ದಾರೆ ರಾಷ್ಟ್ರಪತಿ ಪ್ರಶಸ್ತಿ

25 ವರ್ಷಗಳ ಹಿಂದೆ ಯಾವ ಹೋಟೆಲ್​ನಲ್ಲಿ ತಂದೆ ವಾಚ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದರೋ ಅದೇ ಹೋಟೆಲ್​ಗೆ ತಂದೆಯನ್ನು ಮಗ ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆ ದೆಹಲಿಯಲ್ಲಿ ಕಂಡು ಬಂದಿದೆ. ದೆಹಲಿ ಮೂಲದ ವ್ಯಕ್ತಿಯೊಬ್ಬರೂ 1995 ರಿಂದ 2000 ರವರೆಗೆ ಐಷಾರಾಮಿ ಹೋಟೆಲ್‌ನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡಿದ್ದರು. ಆದರೆ ಇದೀಗ ತಂದೆ ವಾಚ್‌ಮನ್‌ ಆಗಿ ಕೆಲಸ ಮಾಡ್ತಿದ್ದ ಪಂಚತಾರಾ ಹೋಟೆಲ್‌ಗೆ ಮಗ ಆರ್ಯನ್​ ಮಿಶ್ರಾ  ಊಟಕ್ಕೆ ಕರೆದೊಯ್ದಿದ್ದು, ಈ ಪೋಸ್ಟ್ ನೆಟ್ಟಿಗರ ಮನಸ್ಸು ಗೆದ್ದಿದೆ.

Advertisment

ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಆರ್ಯನ್ ಮಿಶ್ರಾ ನನ್ನ ತಂದೆ 1995 ರಿಂದ 2000ದವರೆಗೂ ನವದೆಹಲಿಯ ಐಟಿಸಿ ಹೋಟೆಲ್​ನಲ್ಲಿ ವಾಚ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದರು ಈಗ ಅವರನ್ನು ಅದೇ ಹೋಟೆಲ್​ಗೆ ಊಟಕ್ಕೆ ಕರೆದುಕೊಂಡು ಹೋಗುವ ಅವಕಾಶ ನನಗೆ ದೊರಕಿದೆ ಎಂದು ಹೇಳಿ ತಂದೆಯೊಡನೆ ಊಟಕ್ಕೆ ಕುಳಿತ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ. ಇದು ಅನೇಕ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ತಂದೆಯ ತನ್ನ ಶ್ರಮಕ್ಕೆ ಇಷ್ಟನ್ನು ಹೊರತಾಗಿ ಮತ್ತೇನು ಬೇಡಬಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment