ಪವಾಡ ಎಂಬಂತೆ ಕ್ಯಾನ್ಸರ್ ಗೆದ್ದ ಮಗಳು.. 1500 Km ದೂರದ ಅಯೋಧ್ಯೆಗೆ ಪಾದಯಾತ್ರೆ ಮಾಡಿದ ತಂದೆ

author-image
Bheemappa
Updated On
ಪವಾಡ ಎಂಬಂತೆ ಕ್ಯಾನ್ಸರ್ ಗೆದ್ದ ಮಗಳು.. 1500 Km ದೂರದ ಅಯೋಧ್ಯೆಗೆ ಪಾದಯಾತ್ರೆ ಮಾಡಿದ ತಂದೆ
Advertisment
  • ಪುತ್ರಿಗೆ ತಂದೆ ಹೇಳಿದ ಮಾತುಗಳು ಮತ್ತೊಂದು ಜೀವನ ಕೊಟ್ಟಿತಾ?
  • ಕಾಲೇಜಿಗೆ ಹೋಗಿದ್ದಾಗ ಮಗಳಿಗೆ ಕಾಣಿಸಿಕೊಂಡಿದ್ದ ಎದೆ ನೋವು
  • ಅಯೋಧ್ಯೆ ಶ್ರೀರಾಮನ ಆಶೀರ್ವಾದ ಮಗಳ ಮೇಲೆ ಬೆಳಕು ಚೆಲ್ಲಿತಾ?

ಕ್ಯಾನ್ಸರ್ ಅನ್ನು ಅರ್ಬುದ ರೋಗ ಎಂದು ಕೂಡ ಕರೆಯುತ್ತಾರೆ. ಇದು ಎಲ್ಲಾ ವಯೋಮಾನದವರಿಗೆ ಗಂಡಾಂತರವಾಗಿದೆ. ವಯಸ್ಸು ಹೆಚ್ಚಾದಂತೆ ಹೆಚ್ಚು ಕಾಡುವ ಕಾಯಿಲೆ ಇದು. ಈಗೀಗ ವಯಸ್ಕರಲ್ಲೂ ಕಂಡುಬರುತ್ತಿರುವುದು ಆತಂಕಕ್ಕೆ ಗುರಿ ಮಾಡಿದೆ. ಇಲ್ಲೊಬ್ಬ ತಂದೆ, ತನ್ನ ಮಗಳು ಕ್ಯಾನ್ಸರ್​ ಗೆದ್ದ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಪಾದಯಾತ್ರೆ ಮಾಡಿ ಶ್ರೀರಾಮನ ದರ್ಶನ ಪಡೆದು ಪುನೀತರಾಗಿದ್ದಾರೆ.

publive-image

ಇದನ್ನೂ ಓದಿ:Air pollution: ಬೆಂಗಳೂರಲ್ಲಿ ಹೆಚ್ಚಾದ ಕಲುಷಿತ ಗಾಳಿ.. ಸಿಟಿಯ ಈ ಏರಿಯಾಗಳಲ್ಲಿ ಮಾಸ್ಕ್​ ಧರಿಸಲೇಬೇಕು

ಗುಜರಾತ್​ನ ಬರೋಡಾ ನಗರದ ನಿವಾಸಿಯಾಗಿರುವ 20 ವರ್ಷದ ಯುವತಿ ಫ್ಯಾಷನ್​ ಡಿಸೈನ್​ ಕೋರ್ಸ್​ನಲ್ಲಿ ಓದುತ್ತಿರುತ್ತಾಳೆ. ಆದರೆ ಒಮ್ಮೆ ಅವರಿಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಆಕೆಯ ತಂದೆ ವೈದ್ಯರ ಬಳಿಗೆ ಹೋಗಿ ಪರಿಶೀಲನೆ ಮಾಡಿಸಿದಾಗ ಕ್ಯಾನ್ಸರ್ ಕಾಯಿಲೆ ಇದೆ ಎನ್ನುವುದು ಹೇಳುತ್ತಾರೆ. ಇದರಿಂದ ತಂದೆ, ಮಗಳು ಸೇರಿದಂತೆ ಇಡೀ ಕುಟುಂಬ ಭಾರೀ ಆತಂಕ ವ್ಯಕ್ತಪಡಿಸುತ್ತದೆ.

ಕ್ಯಾನ್ಸರ್​ ಕೊನೆ ಹಂತಕ್ಕೆ ಬಂದಿರುತ್ತದೆ. ಇದರಿಂದ ಯುವತಿ ಇನ್ನೇನು ನನ್ನ ಕೊನೆ ದಿನಗಳು ಇವು ಎಂದು ತಿಳಿದುಕೊಂಡಿರುತ್ತಾಳೆ. ಆದರೆ ತಂದೆ ಮಾತ್ರ ಮಗಳ ಬಗೆಗೆ ಯಾವುದೇ ಆಸೆ ಬಿಟ್ಟಿರಲ್ಲ. ಮಗಳಿಗೆ ನಿರಂತರ ಧೈರ್ಯ ತುಂಬುತ್ತಿರುತ್ತಾರೆ. ಮಗಳೇ.. ಕ್ಯಾನ್ಸರ್​ಗಿಂತಲೂ ಮೊದಲೇ ನಾನು ನಿನ್ನ ಹಿಂದೆ ಇದ್ದೇನೆ. ಯಾವುದು ಏನು ಮಾಡಲ್ಲ.​ ನೀನು ಕ್ಯಾನ್ಸರ್​ ಜೊತೆ ಹೋರಾಡು ಸಾಕು. ಉಳಿದಿರೋದೆಲ್ಲಾ ನಾನು ನೋಡಿಕೊಳ್ಳುತ್ತೇನೆ ಎಂದು ತಂದೆ ಹೇಳುತ್ತಾರೆ.

ನಮ್ಮ ಕೈಯಿಂದ ಏನೂ ಸಾಧ್ಯವಿಲ್ಲ

ಈ ಮಾತುಗಳು ಮಗಳಲ್ಲಿ ಬಲವಾದ ನಂಬಿಕೆಗಳನ್ನು ತಂದು ಕೊಡುತ್ತವೆ. ತನ್ನ ಜೀವನ 20ಕ್ಕೆ ಮುಗಿಯಿತು. ಇದಕ್ಕೆ ಯಾವುದೇ ಔಷಧಿ ಇಲ್ಲ. ನಮ್ಮ ಕೈಯಿಂದ ಏನೂ ಸಾಧ್ಯವಿಲ್ಲ ಎನ್ನುವಷ್ಟರಲ್ಲಿ ಮಗಳು ಕ್ಯಾನ್ಸರ್​ನಿಂದ ಗೆದ್ದು ಗುಣಮುಖರಾಗುತ್ತಾರೆ. 2 ವರ್ಷ ನಿರಂತರ ಚಿಕಿತ್ಸೆಯ ಫಲ ಹಾಗೂ ಅದರ ಜೊತೆ ಹೋರಾಡಿದ ಮಗಳು ಪವಾಡ ಎಂಬಂತೆ ಕ್ಯಾನ್ಸರ್​ನಿಂದ ಪೂರ್ಣ ವಾಸಿಯಾಗುತ್ತಾಳೆ. ಮತ್ತೆ ಓಡಾಡಲು ಪ್ರಾರಂಭಿಸಿ ನನಗೆ ಏನು ಆಗಿಲ್ಲ ಎಂಬಂತೆ ಮಗಳು ಚೇತರಿಸಿಕೊಳ್ಳುತ್ತಾಳೆ.

publive-image

ಇದರಿಂದ ಬೆಟ್ಟದಷ್ಟು ಖುಷಿ ಪಟ್ಟ ತಂದೆ ತಮ್ಮ ಮನಸಲ್ಲಿ ಅಂದುಕೊಂಡಂತೆ ಶ್ರೀರಾಮನ ದರ್ಶನಕ್ಕೆ ಸಿದ್ಧರಾಗಿದ್ದರು. ಬರೀ ಗಾಲಲ್ಲಿ, ಗುಜರಾತ್​ನ ಬರೋಡಾದಿಂದ ಶ್ರೀರಾಮನ ಊರು ಅಯೋಧ್ಯೆಗೆ ಹೋಗಿ ಬಾಲರಾಮನ ದರ್ಶನ ಪಡೆದುಕೊಂಡು ವಾಪಸ್ ಮನೆಗೆ ಸುರಕ್ಷಿರಾಗಿ ಬಂದಿದ್ದಾರೆ. ಸದ್ಯ ಈಗ ಮನೆಯಲ್ಲಿ ಕುಟುಂಬದ ಜೊತೆ ಹ್ಯಾಪಿ ಆಗಿ ಇದ್ದೇನೆ. 20 ವರ್ಷಕ್ಕೆ ನಾನು ಬದುಕುವುದಿಲ್ಲ ಎಂದುಕೊಂಡಿದ್ದೆ. ಆದರೆ ನನ್ನ ತಂದೆ, 22 ವರ್ಷಕ್ಕೆ ಮತ್ತೊಂದು ಜೀವನ ನನಗೆ ಕೊಟ್ಟಿದ್ದಾರೆ ಎಂದು ಕ್ಯಾನ್ಸರ್ ಗೆದ್ದ ಮಗಳು ಭಾವುಕವಾಗಿ ತಂದೆ ಬಗ್ಗೆ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಬದುಕುವುದಿಲ್ಲ ಎಂದು ಅನಿಸಿದಾಗ ಅದೃಷ್ಟ, ದೇವರ ದಯೇ, ದೇವರ ಪುಣ್ಯ, ಕೊನೆ ಸಮಯದಲ್ಲಿ ಅದೃಷ್ಟ ಕೈಹಿಡಿಯಿತು ಎನ್ನುತ್ತೇವೆಯಲ್ಲ, ಅದು ಇಲ್ಲಿ ಮಗಳಿಗೆ ಮತ್ತೊಂದು ಜೀವನ, ತಂದೆಯ ಆಸೆಯನ್ನು ಹಿಡಿದಿಟ್ಟಿದೆ ಎಂದು ಹೇಳಬಹುದು.

ವಿಶೇಷ ವರದಿ:ಭೀಮಪ್ಪ,ನ್ಯೂಸ್​​ಫಸ್ಟ್ ಡಿಜಿಟಲ್ ಡೆಸ್ಕ್ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment