ಮಂಗಳೂರಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನ ಕೊಚ್ಚಿ ಕೊಂದ 6 ದುಷ್ಕರ್ಮಿಗಳು

author-image
Ganesh
Updated On
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣದ ತನಿಖೆ NIA ಹೆಗಲಿಗೆ; ಕೇಂದ್ರ ಗೃಹ‌ ಇಲಾಖೆ ಮಹತ್ವದ ಆದೇಶ
Advertisment
  • ಮೀನಿನ ಗಾಡಿಯಲ್ಲಿ ಹಿಂಬಾಲಿಸಿಕೊಂಡು ಬಂದು ಕೊಚ್ಚಿ ಕೊಲೆ!
  • ಪ್ರವೀಣ್ ನೆಟ್ಟಾರು ಹತ್ಯೆಗೂ, ಸುಹಾಸ್ ಶೆಟ್ಟಿ ಕೊಲೆಗೂ ಸಂಬಂಧ?
  • ಫಾಜಿಲ್ ಮರ್ಡರ್​ ಕೇಸ್​ನಲ್ಲಿ ಆರೋಪಿ ಆಗಿದ್ದ ಸುಹಾಸ್ ಶೆಟ್ಟಿ

ಕರಾವಳಿಯಲ್ಲಿ ಮತ್ತೆ ರಕ್ತದೋಕುಳಿ ಹರಿದಿದೆ. 2 ವರ್ಷಗಳ ಹಿಂದೆ ಸುರತ್ಕಲ್​ನಲ್ಲಿ ನಡೆದಿದ್ದ ಫಾಜಿಲ್ ಎಂಬಾತನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮಂಗಳೂರು ಹೊರವಲಯದ ಕಿನ್ನಿಪದವು ಬಳಿ ನಿರ್ದಯವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ಕೊಚ್ಚಿ ಕೊಲೆ!

ಸುಹಾಸ್ ಶೆಟ್ಟಿ, ಹಿಂದೂ ಕಾರ್ಯಕರ್ತನಾಗಿದ್ದ. ಈತನ ಕೊಲೆಗೂ ಪ್ರವೀಣ್ ನೆಟ್ಟಾರು ಹತ್ಯೆಗೂ ಸಂಬಂಧವಿದೆ ಎನ್ನಲಾಗ್ತಿದೆ. ಪ್ರವೀಣ್​ ನೆಟ್ಟಾರು ಹತ್ಯೆ ಕೇಸ್​ನಲ್ಲಿ ಫಾಜಿಲ್ ಆರೋಪಿಯಾಗಿದ್ದ. ಪ್ರವೀಣ್​ ನೆಟ್ಟಾರು ಕೊಲೆ ಪ್ರತಿಕಾರಕ್ಕೆ ಸುಹಾಸ್ ಶೆಟ್ಟಿ ಸುರತ್ಕಲ್‌ನ ಫಾಜಿಲ್​ನನ್ನ ಹತ್ಯೆ ಮಾಡಿದ್ದ ಎಂಬ ಆರೋಪ ಇದೆ. ಈ ಸಂಬಂಧ ಸುಹಾಸ್ ಮೇಲೆ ಮಂಗಳೂರು ಪೊಲೀಸರು ರೌಡಿ ಶೀಟರ್​ ಓಪನ್​ ಮಾಡಿದ್ರು. ಇದೇ ಸೇಡಿನ ಮುಂದುವರೆದ ಭಾಗವಾಗಿ ಈ ಕೊಲೆ ನಡೆದಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ಗಡ್ಡಧಾರಿ ಗಂಡನ ಬಿಟ್ಟು ಕ್ಲೀನ್ ಶೇವ್‌ ವ್ಯಕ್ತಿಯ ಜೊತೆ ಓಡಿ ಹೋದ ಮಹಿಳೆ; 3 ತಿಂಗಳ ಬಳಿಕ ಏನಾಯ್ತು?

publive-image

ನಿನ್ನೆ ರಾತ್ರಿ ಸ್ನೇಹಿತರ ಜೊತೆ ಇನ್ನೋವಾ ಕಾರಿನಲ್ಲಿ ಸುಹಾಸ್ ಶೆಟ್ಟಿ ಬರ್ತಿದ್ದ.. ಇದನ್ನ ಗಮನಿಸಿದ್ದ ಹಂತಕರು ಮೀನಿನ ಟೆಂಪೋ, ಸ್ವಿಫ್ಟ್ ಕಾರಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಹಾಗೆ ಬಂದವರು.. ಸುಹಾಸ್ ಇದ್ದ ಇನ್ನೋವಾ ಕಾರಿಗೆ ಮೀನಿನ ಟೆಂಪೋದಿಂದ ಡಿಕ್ಕಿ ಹೊಡೆದಿದ್ದಾರೆ. ಸ್ವಿಫ್ಟ್ ಕಾರಿನಿಂದ ಇಳಿದ ದುಷ್ಕರ್ಮಿಗಳು ಸುಹಾಸ್ ಶೆಟ್ಟಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಲು ಶುರು ಮಾಡಿದ್ದಾರೆ.

6 ಜನ ಗ್ಯಾಂಗ್​ನಲ್ಲಿದ್ದ ಕೆಲವರು ಕೊಚ್ಚಿ ಕೊಚ್ಚಿ ಹಲ್ಲೆ ಮಾಡ್ತಿದ್ರೆ ಉಳಿದವರು ಬೇರೆಯವರು ಹತ್ತಿರ ಸುಳಿಯದಂತೆ ಮಚ್ಚು ಹಿಡಿದು ಬೆದರಿಸ್ತಿದ್ರು. ಮನಸೋ ಇಚ್ಛೆ ಹಲ್ಲೆ ಮಾಡಿದ ದುರುಳರು ಸ್ಥಳದಿಂದ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಹಾಸ್ ಶೆಟ್ಟಿ ದಾರುಣ ಅಂತ್ಯ ಕಂಡಿದ್ದಾನೆ. ಇನ್ನೂ ವಿಚಾರ ತಿಳಿದು ಸ್ಪಾಟ್​​ಗೆ ಬಂದ ಬಜಪೆ ಪೊಲೀಸ್ ಠಾಣೆ ಪೊಲೀಸರು, ಕೇಸ್​ ದಾಖಲಿಸಿಕೊಂಡು ನಾಲ್ಕು ತಂಡ ರಚಿಸಿ ತನಿಖೆ ಶುರು ಮಾಡಿದೆ. ಫಾಜಿಲ್‌ ಹತ್ಯೆಗೆ ಪ್ರತಿಯಾಗಿ ಈ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಈಗ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಭಾರತದ ಗಡಿಯಲ್ಲಿ ಸಂಪೂರ್ಣ ಗೋಧಿ ಕಟಾವು ಮುಗಿಸಿದ ರೈತರು; ಪಾಕ್‌ಗೆ ಮತ್ತೊಂದು ಸ್ಪಷ್ಟ ಸೂಚನೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment