Advertisment

ರಾಜ್ಯದಲ್ಲಿ ಮತ್ತೊಂದು ದೊಡ್ಡ ಅನಾಹುತದ ಆತಂಕ.. ಇಲ್ಲಿ ಓಡಾಡೋ ಪ್ರಯಾಣಿಕರೇ ಹುಷಾರ್​..!

author-image
Ganesh
Updated On
ರಾಜ್ಯದಲ್ಲಿ ಮತ್ತೊಂದು ದೊಡ್ಡ ಅನಾಹುತದ ಆತಂಕ.. ಇಲ್ಲಿ ಓಡಾಡೋ ಪ್ರಯಾಣಿಕರೇ ಹುಷಾರ್​..!
Advertisment
  • ರಾಷ್ಟ್ರಿಯ ಹೆದ್ದಾರಿ 67 ರಲ್ಲಿ ರಸ್ತೆ ಪಕ್ಕದ ಗುಡ್ಡ ಕುಸಿಯೋ ಭೀತಿ
  • ಸರ್ವಿಸ್ ರಸ್ತೆಯೇ ಮೇಲೆ ಬೀಳೋ ಹಂತದಲ್ಲಿದೆ ಗುಡ್ಡದ ಮಣ್ಣು
  • ಉತ್ತರ ಕರ್ನಾಟಕದಲ್ಲೂ ಮಳೆ ಮಾಡಿರೋ ಅವಾಂತರ ಅಷ್ಟಿಷ್ಟಲ್ಲ

ಉತ್ತರ ಕರ್ನಾಟಕದಲ್ಲೂ ಮಳೆ ಸೃಷ್ಟಿ ಮಾಡಿರೋ ಅವಾಂತರ ಅಷ್ಟಿಷ್ಟಲ್ಲ. ಉತ್ತರ ಕರ್ನಾಟಕದ ಜನರನ್ನೂ ಮಳೆರಾಯ ಕಾಡಿಸುತ್ತಿದ್ದಾನೆ.

Advertisment

ವಿಜಯನಗರ:
ವಿಜಯನಗರ ಜಿಲ್ಲೆಯ ಹೊಸಪೇಟೆ ಹೊರವಲಯದ ರಾಷ್ಟ್ರಿಯ ಹೆದ್ದಾರಿ 67 ರಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡದ ಭೂತ ಅವಘಡ ಸೃಷ್ಟಿಸಲು ರೆಡಿಯಾಗಿ ನಿಂತಂತೆ ಕಾಣ್ತಿದೆ. ಇನ್ನೂ ಈ ರಸ್ತೆಯಲ್ಲಿ ಓಡಾಡುವವರ ಪರಿಸ್ಥತಿ ಯಾವಾಗ ಏನ್​ ಆಗುತ್ತೋ ಅನ್ನೋ ಭಯದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಾಗಿದೆ.

ಇದನ್ನೂ ಓದಿ:ಗಂಭೀರ್​​ ಆಡಿದ ಗೇಮ್​ಗೆ ಬೆಂಡ್​ ಆದ ಕೊಹ್ಲಿ.. ಆರಂಭದಲ್ಲೇ ಜುಟ್ಟು ಹಿಡಿದು ಬಿಗಿಗೊಳಿಸಿದ ಗೌತಿ..!

publive-image

ಹೊಸಪೇಟೆಯ ಐತಿಹಾಸಿಕ ಜೋಳದ ರಾಶಿ ಗುಡ್ಡದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ 67ರ ಕಾಮಗಾರಿ ನಿರ್ಮಾಣ ಮಾಡಲಾಗಿದೆ. ಗುಡ್ಡದ ಮಣ್ಣು ಹೆದ್ದಾರಿ ಪಕ್ಕದಲ್ಲಿರೋ ಸರ್ವಿಸ್ ರಸ್ತೆಯೇ ಮೇಲೆ ಬೀಳೋ ಹಂತದಲ್ಲಿದೆ. ಇದೇ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳ ಸಂಚಾರ ಮಾಡ್ತಿದೆ. ಅದ್ರಲ್ಲೂ ಗಣಿಗಾರಿಕೆಯ ಡೆಂಜರಸ್ ಲಾರಿಗಳ ಯರ್ರಾಬಿರ್ರಿ ಓಡಾಟ ಮಾಡ್ತಿದೆ. ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿಂದೆಯೂ ಒಂದು ಬಾರಿ ಗುಡ್ಡ ಕುಸಿದು, ರಸ್ತೆ ಬಂದ್ ಆಗಿತ್ತು ಅಂತಾ ಸ್ಥಳೀಯರು ನೆನಪಿಸಿಕೊಂಡಿದ್ದಾರೆ.

Advertisment

ಇದನ್ನೂ ಓದಿ:ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!
publive-image

ದಾವಣಗೆರೆ
ದಾವಣಗೆರೆ ಜಿಲ್ಲೆಯ ಲೋಕಿಕೆರೆ ಗ್ರಾಮದಿಂದ ಹೂವಿನ ಮಡು ಗ್ರಾಮಕ್ಕೆ ನೇರ ಸಂಪರ್ಕ ಕಡಿತಗೊಂಡಿದೆ. ಚನ್ನಗಿರಿ ಮುಖ್ಯ ರಸ್ತೆಗೆ ಹಾದುಹೋಗುವ ರಸ್ತೆ ಇದಾಗಿದ್ದು, ಮಳೆ ಬಂದರೆ ಸಾಕು ಇಲ್ಲಿನ ರಸ್ತೆ ಕೆಸರು ಗದ್ದೆಯಂತಾಗುತ್ತೆ. ಸರಕು ಸಾಗಾಣಿಕೆ ಸಾಗಿಸುವಂತಹ ವಾಹನ ಸವಾರರಿಗೂ ಧನಕರುಗಳಿಗೂ ತುಂಬಾ ತೊಂದರೆ ಉಂಟಾಗಿದ್ದು, ಸುಮಾರು ಮಕ್ಕಳು ವೃದ್ಧರು ಬಿದ್ದು ಕೈಕಾಲನ್ನು ಮುರಿದುಕೊಂಡಿರುವ ಅನೇಕ ಪ್ರಸಂಗಗಳುಂಟು. ಒಟ್ಟಾರೆ, ವರುಣದೇವ ಉತ್ತರ, ದಕ್ಷಿಣ, ಪೂರ್ವ ಪಶ್ಚಿಮ ಅಂತ ಬೇದ ತೋರದೆ ಎಲ್ಲರ ಮೇಲೂ ಸಾವರಿ ಮಾಡ್ತಿದ್ದಾರೆ.

ಇದನ್ನೂ ಓದಿ:ಕರೆಂಟ್ ಬಿಟ್ಟಿಲ್ಲ ಎಂದು ಶಾಪ ಹಾಕೋ ಜನಗಳೇ ಇಲ್ನೋಡಿ.. ನಿಮ್ಮ ಮನೆ ಬೆಳಗಲು ಜೀವವನ್ನೇ ಒತ್ತೆಯಿಟ್ಟು ಕೆಲಸ..!

Advertisment

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment