newsfirstkannada.com

ಕೋವಿಶೀಲ್ಡ್ ಭಯ.. ನಿಜಕ್ಕೂ ಮಾರಣಾಂತಿಕ ಸೈಡ್ ಎಫೆಕ್ಟ್‌ ಇದೆಯಾ? ತಜ್ಞ ವೈದ್ಯರು ಹೇಳೋದೇನು?

Share :

Published May 2, 2024 at 3:40pm

Update May 2, 2024 at 3:43pm

    ಜನರಲ್ಲಿ ಇನ್ನಷ್ಟೂ ಆತಂಕ ಮನೆ ಮಡಿದ ಕೋವಿಶೀಲ್ಡ್‌ ವ್ಯಾಕ್ಸಿನ್

    ಕೋವಿಶೀಲ್ಡ್ ಲಸಿಕೆ ತಯಾರಿಕಾ ಕಂಪನಿ ಹೆಸರು ಅಸ್ಟ್ರಾಜೆನೆಕಾ

    ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀಡಿದ್ದ ಲಸಿಕೆ ಕೂಡ‌ ಇದು

ಇಡೀ ಜಗತ್ತೆ ಆ ಒಂದು ರೋಗದ ಹೆಸರು ಕೇಳಿ ಬೆಚ್ಚಿಬಿದ್ದಿತ್ತು. ಆ ರೋಗದ ಹೆಸರೇ ಕೊರೊನಾ ಮಹಾಮಾರಿ. ಈ ಮಹಾಮಾರಿ ಕೊರೊನಾದಿಂದ ಇಡೀ ಮನುಕುಲವೇ ನಲುಗಿ ಹೋಗಿತ್ತು. ಈ ಮಹಾಮಾರಿಯಿಂದ ಕುಟುಂಬದ ಅದೇಷ್ಟೋ ಜನ ಉಸಿರು ಚೆಲ್ಲಿದ್ದರು. ಈ ವೈರಸ್​​ನಿಂದ ಪಾರಾಗಲು ಭಾರತ ಸರ್ಕಾರ ವ್ಯಾಕ್ಸಿನ್ ಅಭಿಯಾನ ನಡೆಸಿತ್ತು.

ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‌ ವ್ಯಾಕ್ಸಿನ್​ ತೆಗೆದುಕೊಂಡರೇ ಕೊರೊನಾ ಬರುವುದನ್ನು ತಪ್ಪಿಸಬಹುದಿತ್ತು. ಆದರೆ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್​​ನಿಂದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಉಸಿರು ಚೆಲ್ಲಿದ್ದಾರೆ ಅಂತಾ ಅವರ ಫೋಟೋವನ್ನು ಹಾಕಿ ಫ್ಯಾನ್ಸ್​ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದೀಗ ಈ ವಿಚಾರ ತಿಳಿಯುತ್ತಿದ್ದಂತೆ ಕೋವಿಶೀಲ್ಡ್ ಹಾಕಿಸಿಕೊಂಡ ಕೆಲ ಜನರಲ್ಲಿ ಆತಂಕ ಮನೆ ಮಾಡಿದೆ. ನಾವು ಕೋವಿಶೀಲ್ಡ್ ಹಾಕಿಸಿಕೊಂಡಿದ್ದೀವಿ. ನಮಗೆ ಏನಾಗುತ್ತೆಂದು ಜನರು ಕಾಮೆಂಟ್​ ಮಾಡುವ ಮೂಲಕ ಆತಂಕ ಹೊರ ಹಾಕುತ್ತಿದ್ದಾರೆ. ಆದರೆ ಈ ಬಗ್ಗೆ ಜನರು ಭಯ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ವೈದ್ಯರು ಈ ಬಗ್ಗೆ ಹೇಳಿದ್ದೇನು?

ಕೋವೀಶೀಲ್ಡ್ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಇದರ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕಾಗುತ್ತದೆ. ಅದು ಅಧ್ಯಯನದಲ್ಲಿ ಪ್ರೂವ್ ಆಗಬೇಕು. ಅಲ್ಲಿಯ ತನಕ ಜನರಲ್ಲಿ ಭಯ ಬೇಡ. ಆತಂಕ ಪಡೋದು ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

– ಸವಿತಾ ವಾಣಿವಿಲಾಸ ಆಸ್ಪತ್ಸೆಯ ವೈದ್ಯರು

ವರದಿಯಲ್ಲಿ ಏನಿದೆ?

ಕೋವಿಶೀಲ್ಡ್ ಲಸಿಕೆ ತಯಾರಿಕಾ ಕಂಪನಿ ಹೆಸರು ಅಸ್ಟ್ರಾಜೆನೆಕಾ. ಕೋವಿಡ್-19 ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಯಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಉಲ್ಲೇಖ ಮಾಡಲಾಗಿದೆ. ಕೋವಿಶೀಲ್ಡ್ ಲಸಿಕೆ ಸೈಡ್​ ಎಫೆಕ್ಟ್ಸ್​​ ಆಗಬಹುದೆಂದು ಆಸ್ಟ್ರಾಜೆನೆಕಾ ಕಂಪನಿ ಕೋರ್ಟ್​​ನಲ್ಲಿ ಒಪ್ಪಿಕೊಂಡಿದೆ. 2020ರಲ್ಲಿ ಕೊರೊನಾ ವೈರಸ್​ ಉಲ್ಬಣಿಸಿದಾಗ ಆಕ್ಸಫರ್ಡ್​ ಜೊತೆಗೂಡಿ AZD1222 ಎಂಬ ಲಸಿಕೆಯನ್ನು ಅಭಿವೃದ್ಧಿ ಪಡಿಸಿತ್ತು. ಟಿಟಿಎಸ್​ ಎಂಬ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು, ಆಸ್ಟ್ರಾಜೆನೆಕಾ ಕಂಪನಿ ತಯಾರಿಸಿದ್ದ ಕೋವಿಶೀಲ್ಡ್ ಲಸಿಕೆ ಪಡೆದು ಜೇಮಿ ಸ್ಕ್ರಾಟ್​ ಎಂಬಾತನ ರಕ್ತ ಹೆಪ್ಪುಗಟ್ಟಿ ಅವರು ಮೆದುಳಿನ ಗಾಯಕ್ಕೆ ತುತ್ತಾಗಿದ್ದರು. ಅವರ ಹೆಂಡತಿ ಕೂಡ ಮೂರು ಲಸಿಕೆ ಪಡೆದ ಬಳಿಕ ಸಾವಿನ ಸ್ಥಿತಿಗೆ ತಲುಪಿದ್ದರಂತೆ. ಹೀಗಾಗಿ ಜೇಮಿ ಸ್ಕ್ರಾಟ್​ ಕಂಪನಿ ವಿರುದ್ಧ ಮೊಕದ್ದಮೆ ಹಾಕಿದ್ದರು. ಈ ಕೇಸ್​ ವಿಚಾರಣೆ ವೇಳೆ ಆಸ್ಟ್ರಾಜೆನಕಾ, AZD ಲಸಿಕೆಯು ಅಪರೂಪದ TTS​ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಒಪ್ಪಿಕೊಂಡಿದೆ. ಈ ಆಸ್ಟ್ರಾಜೆನಿಕಾ ಲಸಿಕೆಯನ್ನೇ ಭಾರತದ ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್‌ ಕೋವಿಶೀಲ್ಡ್‌ ಹೆಸರಲ್ಲಿ ಬಿಡುಗಡೆ ಮಾಡಿತ್ತು. ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀಡಿದ್ದ ಲಸಿಕೆ ಕೂಡ‌ ಇದಾಗಿದೆ. ಲಂಡನ್‌ ನ್ಯಾಯಾಲಯದಲ್ಲಿ ಆಸ್ಟ್ರಾಜೆನಿಕಾ ನೀಡಿದ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಏನಿದು ಟಿಟಿಎಸ್?

ಟಿಟಿಎಸ್​ ಸಿಂಡ್ರೋಮ್​, ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಎಂದು ಕರೆಯಲ್ಪಡುವ ಸಿಂಡ್ರೋಮ್. ಇದರಿಂದ ತಲೆ ನೋವು, ಹೊಟ್ಟೆ ನೋವು, ಉಸಿರಾಟ ಸಮಸ್ಯೆ, ಕಾಲು ಊತ, ನರ ಸಮಸ್ಯೆಯಂತಹ ಪ್ರಾಥಮಿಕ ಲಕ್ಷಣಗಳು ಕಂಡು ಬರುತ್ತವೆ. ರಕ್ತನಾಳಗಳಲ್ಲಿನ ಹೆಪ್ಪುಗಟ್ಟುವಿಕೆ ಹಾಗೂ ರಕ್ತದ ಪ್ಲೆಟ್ಲೆಟ್​​ ಕಡಿಮೆಯಾಗುತ್ತೆ.

ಕೋವಿಶೀಲ್ಡ್ ಪಡೆದವರು ಹೇಳೋದ್ಹೇನು?

ನಮಗೆ ಇಲ್ಲಿಯ ತನಕ ಯಾವುದೇ ಸೈಡ್ ಎಫೆಕ್ಟ್ ಆಗಿಲ್ಲ. ಆದರೆ ಮುಂದೆ ತೊಂದರೆ ಆಗ್ಬೋದ್ಹೇನೋ ಅನ್ನೋ ಆತಂಕ ಇದೆ. ಲಸಿಕಾ ಕಂಪನಿ ಈಗ ತೊಂದ್ರೆಯಾಗ್ಬೋದೆಂದು ಒಪ್ಪಿಕೊಂಡಿದೆ. ಅದನ್ನ ಮೊದಲೇ ಹೇಳಬೇಕಿತ್ತು ಕಂಪನಿ. ಈಗ ಹೇಳಿದ್ರೆ ಹೇಗೆ? ಇದಕ್ಕೆ ಪರ್ಯಾಯ ಔಷಧಿಯನ್ನ ಈಗಿನಿಂದಲೇ ತಯಾರು ಮಾಡಬೇಕು. ಮುಂದೆನಾಗುತ್ತೋ ಗೊತ್ತಿಲ್ಲವೆಂದು ಯುವ ಜನರಲ್ಲಿ ಆತಂಕ ಮನೆಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋವಿಶೀಲ್ಡ್ ಭಯ.. ನಿಜಕ್ಕೂ ಮಾರಣಾಂತಿಕ ಸೈಡ್ ಎಫೆಕ್ಟ್‌ ಇದೆಯಾ? ತಜ್ಞ ವೈದ್ಯರು ಹೇಳೋದೇನು?

https://newsfirstlive.com/wp-content/uploads/2024/05/covish.jpg

Load More