/newsfirstlive-kannada/media/post_attachments/wp-content/uploads/2024/06/bujji-car5.jpg)
ಡಾರ್ಲಿಂಗ್ ಪ್ರಭಾಸ್ ಅಭಿನಯದ ಕಲ್ಕಿ 2898 AD ಪ್ರೇಕ್ಷಕರಲ್ಲಿ ಬಹುನಿರೀಕ್ಷೆ ಹುಟ್ಟುಹಾಕುತ್ತಿದೆ. ಈಗಾಗಲೇ ಟೀಸರ್ ಹಾಗೂ ಟ್ರೈಲರ್ ಮೂಲಕ ಗಮನ ಸೆಳೆದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಇದೇ ಜೂನ್ 27ರಂದು ವಿಶ್ವದಾದಂತ್ಯ ರಿಲೀಸ್ಗೆ ಸಿದ್ಧವಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಕಲ್ಕಿ 2898 AD ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಕಲ್ಕಿಯ ಬುಜ್ಜಿ ಕಾರ್ ಡ್ರೈವ್ ಮಾಡಿದ ರಿಷಬ್ ಶೆಟ್ಟಿ.. ಪ್ರಭಾಸ್ಗೆ ಸಾಥ್ ನೀಡಿದ್ರಾ ಡಿವೈನ್ ಸ್ಟಾರ್..?
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಮೇಕಿಂಗ್‌ನಿಂದ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಕಲ್ಕಿ 2898 AD ಸಿನಿಮಾ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿ ಇದೆ. ಹೌದು, ಇದೇ ಜೂನ್ 27ರಂದು ಬಿಡುಗಡೆಯಾಗುವ ಕಲ್ಕಿ 2898 AD ಸಿನಿಮಾವು ದಿನ ಕಳೆದಂತೆ ಸಾಕಷ್ಟು ಹೈಪ್ ಕೂಡ ಕ್ರಿಯೇಟ್ ಮಾಡುತ್ತಿದೆ. ಕೇವಲ ಹೈದರಾಬಾದ್ ಮಾತ್ರವಲ್ಲದೇ ವಿಶ್ವದಾದ್ಯಂತ ಪ್ರಭಾಸ್ ಸಿನಿಮಾದ ಕ್ರೇಜ್ ಹುಟ್ಟಿಸುತ್ತಿದೆ. ಹೌದು ಕಲ್ಕಿ 2898 AD ಸಿನಿಮಾದ ಪ್ರಮುಖ ಆಕರ್ಷಣೆಯೇ ಬುಜ್ಜಿ ಕಾರು. ಈ ಬುಜ್ಜಿ ಕಾರು ಬಗ್ಗೆಯೇ ಈಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಹುಟ್ಟು ಹಾಕುತ್ತಿದೆ ಎಂದರೆ ತಪ್ಪಾಗಲಾರದು.
ಇನ್ನು, ನಿನ್ನೆಯಷ್ಟೇ ಕಲ್ಕಿ 2898 AD ಸಿನಿಮಾದ ಬುಜ್ಜಿ ಕಾರು ನೇರವಾಗಿ ನಟ ರಿಷಬ್ ಶೆಟ್ಟಿಯ ಊರಿಗೆ ನೇರವಾಗಿ ಕಲ್ಕಿ ಕಾರು ಆಗಮಿಸಿದೆ. ಕಾಂತಾರ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದ ವೇಳೆ ನಟ ರಿಷಬ್ ಶೆಟ್ಟಿ ಈ ಸೂಪರ್ ಡೂಪರ್ ಬುಜ್ಜಿ ಕಾರು ಡ್ರೈವಿಂಗ್ ಮಾಡಿದ್ದಾರೆ. ಜೊತೆಗೆ ಡಾರ್ಲಿಂಗ್ ಪ್ರಭಾಸ್ ಸಿನಿಮಾಕ್ಕೆ ಗುಡ್‌ಲಕ್ ಹೇಳಿದ್ದಾರೆ. ಆದರೆ ಇದೀಗ ಕಲ್ಕಿ ಸಿನಿಮಾ ಜೊತೆಗೆ ಬುಜ್ಜಿ ಕಾರು ಕೂಡ ಸಖತ್ ಫೇಮಸ್ ಆಗುತ್ತಿದೆ. ಇದೀಗ ಎಲ್ಲಿ ನೋಡಿದ್ರು, ಯಾರನ್ನು ಕೇಳಿದ್ರು ಬರೀ ಬುಜ್ಜಿ ಕಾರಿನ ಬಗ್ಗೆಯೇ ಮಾತುಕಥೆ.
ಕಲ್ಕಿ ಸಿನಿಮಾದಲ್ಲಿ ಆಕರ್ಷಣೆಯಾಗಿರೋ ಬುಜ್ಜಿ ಕಾರಿನ ಬೆಲೆ ಎಷ್ಟು?
ಕಲ್ಕಿ 2898 ಎಡಿ ಚಿತ್ರಕ್ಕಾಗಿ ಎಂಜಿನಿಯರ್ಸ್ ತುಂಬಾ ವಿಶೇಷವಾಗಿ ನಿರ್ಮಿಸಿದ ಕಾರು ಇದಾಗಿದೆ. ಮೂರು ಚಕ್ರವನ್ನು ಬುಜ್ಜಿ ಕಾರು ಹೊಂದಿದೆ. ಕಾರಿನ ಮುಂಭಾಗದಲ್ಲಿ 2 ಚಕ್ರಗಳಿದ್ದರೆ, ಹಿಂಭಾಗದಲ್ಲಿ ಒಂದು ಚಕ್ರವಿದೆ. ಈ ಕಾರಿಗೆ ಬೃಹತ್ ಗಾತ್ರದ ಚಕ್ರಗಳನ್ನು ಬಳಸಲಾಗಿದೆ. ಜೊತೆಗೆ ಪವರ್‌ಫುಲ್ ಎಂಜಿನ್ ಬಳಸಲಾಗಿದೆ. ಈ ಕಾರು ಬರೋಬ್ಬರಿ 6 ಟನ್ ತೂಕ ಹೊಂದಿದೆ. ಈ ಕಾರನ್ನು ಎಂಜಿನಿಯರ್ಸ್ ಮಾರ್ವಲಸ್ ಎಂದೇ ಕರೆಯುತ್ತಿದ್ದಾರೆ. ಈ ಬುಜ್ಜಿ ಕಾರಿಗೆ 18 ಗಂಟೆ ಚಾರ್ಚ್ ಮಾಡಿದ್ರೆ 15 ಕಿಲೋ ಮೀಟರ್ನಷ್ಟು ಚಲಿಸುತ್ತದೆ. ಈ ಕಾರು 47kWh ಬ್ಯಾಟರಿಯನ್ನು ಹೊಂದಿದೆ.
ಇದನ್ನೂ ಓದಿ:ಪುಣೆ ಪೋರ್ಷೆ ಕಾರು ಆ್ಯಕ್ಸಿಡೆಂಟ್ ಕೇಸ್.. ಎರಡು ಜೀವ ಬಲಿ ಪಡೆದ ಆರೋಪಿಗೆ ಬಿಡುಗಡೆ ಭಾಗ್ಯ; ಭಾರೀ ಆಕ್ರೋಶ!
ಮತ್ತೊಂದು ವಿಶೇಷ ಎಂದರೆ ಈ ಬುಜ್ಜಿ ಕಾರು ಮಡಚುವ ವಿನ್ಯಾಸವನ್ನು ಹೊಂದಿದೆ. ಇದನ್ನು ನೋಡಿದ ಜನರು ಈ ಕಾರನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ಬುಜ್ಜಿ ಕಾರಿನ ಬೆಲೆಯ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಆದರೆ ಇದನ್ನು ಯಾರು ಕಂಡುಕೊಳ್ಳಲು ಆಗುವುದಿಲ್ಲ. ಏಕೆಂದರೆ ಇದಕ್ಕೆ ನಿಖರವಾದ ಬೆಲೆಯನ್ನು ನಿಗದಿ ಮಾಡಿಲ್ಲ. ಜೊತೆಗೆ ಈ ಬುಜ್ಜಿ ಕಾರನ್ನು ಸಿನಿಮಾ ಪ್ರಮೋಷನ್ಗಾಗಿ ಮಾತ್ರ ಬಳಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ