/newsfirstlive-kannada/media/post_attachments/wp-content/uploads/2025/01/JOB_aspirants.jpg)
ಬ್ಯಾಂಕ್​ನಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಭಾರತದ ಪ್ರತಿಷ್ಠಿತ ಬ್ಯಾಂಕ್​ಗಳಲ್ಲಿ ಒಂದಾಗಿರುವ ಫೆಡರಲ್​ ಬ್ಯಾಂಕ್, ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ಮಾಡಿದೆ. ಆಸಕ್ತರು, ಅರ್ಹ ಅಭ್ಯರ್ಥಿಗಳು ಈ ಕೆಲಸಗಳಿಗೆ ಈ ದಿನಾಂಕದ ಒಳಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಫೆಡರಲ್​ ಬ್ಯಾಂಕ್ ನೇಮಕಾತಿ ಪ್ರಕ್ರಿಯೆಯೂ ಬ್ಯಾಂಕಿಂಗ್ ಉದ್ಯಮದಲ್ಲಿ ಅತ್ಯುತ್ತಮ ವೃತ್ತಿ ಜೀವನವನ್ನು ನಿರ್ಮಿಸಿಕೊಳ್ಳಲು ಅವಕಾಶ ಆಗಿರುತ್ತದೆ. ಅಭ್ಯರ್ಥಿಗಳು ಇಲ್ಲಿ ಹುದ್ದೆಯನ್ನು ಗಿಟ್ಟಿಸಿಕೊಂಡರೇ ಫೆಡರಲ್ ಬ್ಯಾಂಕಿನೊಂದಿಗೆ ವೃತ್ತಿಪರ ಬೆಳವಣಿಗೆ, ಉದ್ಯೋಗ ಸ್ಥಿರತೆ ಮತ್ತು ದೀರ್ಘಕಾಲೀನ ಭದ್ರತೆ ಇರುತ್ತದೆ ಎಂದು ಹೇಳಬಹುದು.
ಹುದ್ದೆಯ ಹೆಸರು ಏನು?
ಸಹಾಯಕ ಅಧಿಕಾರಿ (Associate Officer)
ವಿದ್ಯಾರ್ಹತೆ-
ಯಾವುದೇ ಪದವಿ
ವಯೋಮಿತಿ ಎಷ್ಟಿದೆ?
27 ವರ್ಷದ ಒಳಗಿನವರಿಗೆ ಅವಕಾಶ
ಇದನ್ನೂ ಓದಿ: ಭರ್ಜರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದ NIACL.. ಒಟ್ಟು ಎಷ್ಟು ಹುದ್ದೆಗಳು ಇವೆ?
/newsfirstlive-kannada/media/post_attachments/wp-content/uploads/2025/01/Job_aspirant_1.jpg)
ಅರ್ಜಿ ಶುಲ್ಕ ಎಷ್ಟು?
350 ರೂಪಾಯಿಗಳು
ಆಯ್ಕೆ ಪ್ರಕ್ರಿಯೆ ಹೇಗೆ?
ಆನ್​ಲೈನ್ ಪರೀಕ್ಷೆ
ಸಂದರ್ಶನ
ಕೆಲಸ ಮಾಡುವ ಸ್ಥಳಗಳು
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು
ಈ ಕೆಲಸದ ದಿನಾಂಕಗಳು
- ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 10 ಜೂನ್ 2025
- ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 22 ಜೂನ್ 2025
- ಆನ್​ಲೈನ್ ಪರೀಕ್ಷೆ ನಡೆಯುವ ದಿನಾಂಕ- 06 ಜುಲೈ 2025
ಪೂರ್ಣ ಮಾಹಿತಿ- https://www.federalbank.co.in/documents/d/guest/notification-1
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us