/newsfirstlive-kannada/media/post_attachments/wp-content/uploads/2024/11/KOHLI_FAN.jpg)
ವಿರಾಟ್ ಕೊಹ್ಲಿಯಷ್ಟು ನೇಮ್ ಮತ್ತು ಫೇಮ್ ಇರುವಷ್ಟು ಯಾರಿಗೂ ಇಲ್ಲ. ಹುಟ್ಟೂರು ಡೆಲ್ಲಿಯಿಂದ ವಿಶ್ವದ ಹಲವು ದೇಶಗಳ ಗಲ್ಲಿ ಗಲ್ಲಿಯವರೆಗೂ ಕೊಹ್ಲಿ ಹೆಸರು ಗೊತ್ತಿದೆ. ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ ಬಳಿಕ ಫ್ಯಾಮಿಲಿಗೆ ಹೆಚ್ಚು ಇಂಪಾರ್ಟೆಂಟ್ ಕೊಡುತ್ತಿದ್ದಾರೆ. ಬ್ಯುಸಿ ನಡುವೆಯು ವಿರಾಟ್ ಕೊಹ್ಲಿ ಫ್ಯಾನ್ಸ್ ಜೊತೆ ನಡೆದುಕೊಂಡ ರೀತಿ ಎಲ್ಲರ ಮನ ತಟ್ಟಿದೆ.
ಇದನ್ನೂ ಓದಿ:IND vs SA; ಫಸ್ಟ್ ಅಲ್ಲಿ ಬ್ಯಾಟಿಂಗ್ ಅಬ್ಬರ.. ಸೆಕೆಂಡ್ ಹಾಫ್ನಲ್ಲಿ ಭಾರತದ ಯುವ ಬೌಲರ್ಗಳ ಆರ್ಭಟ
ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದರು. ಮುಂಬೈನ ಹೋಟೆಲ್ ಒಂದಕ್ಕೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಇಬ್ಬರು ಹೋಗುತ್ತಿದ್ದರು. ಹೋಟೆಲ್ನ ಮೇನ್ ಡೋರ್ ಮುಂಭಾಗವೇ ಮಹಿಳಾ ಅಭಿಮಾನಿ ಒಬ್ಬರು ಕೊಹ್ಲಿ ಬಳಿ ಫೋಟೋಗೆ ಮನವಿ ಮಾಡಿದ್ದಾರೆ. ತುರಾತುರಿಯಲ್ಲಿದ್ದ ಕೊಹ್ಲಿ, ಹೋಟೆಲ್ ಒಳಗೆ ಹೋಗಲು ಯತ್ನಿಸಿದ್ದಾರೆ. ಇದೇ ವೇಳೆ ಮಹಿಳೆ ಕೈ ಹಿಡಿದು ಎಳೆದು ಕೊಹ್ಲಿರನ್ನ ನಿಲ್ಲಿಸಿಕೊಂಡಿದ್ದಾರೆ. ಇದಕ್ಕೆ ಏನೂ ಅನ್ನದ ವಿರಾಟ್ ಕೊಹ್ಲಿ ಶಾಂತವಾಗಿ ವರ್ತಿಸಿದ್ದಾರೆ. ಮಹಿಳೆ ಜೊತೆ ಕೊಹ್ಲಿ, ಫೋಟೋಗೆ ಪೋಸ್ ಕೊಟ್ಟು ಎಲ್ಲರ ಮನ ಗೆದ್ದಿದ್ದಾರೆ.
ವಿರಾಟ್ ಕೊಹ್ಲಿ -ಅನುಷ್ಕಾ ಶರ್ಮಾ ಮೋಸ್ಟ್ ಪವರ್ಫುಲ್ ಕಪಲ್. ನೇಮ್ ಅಂಡ್ ಫೇಮ್ ಅಂತ ಬಂದ್ರೆ ಈ ಸ್ಟಾರ್ಸ್ ಕಪಲ್ ಹೆಸರು ಮುಂಚೂಣಿಯಲ್ಲಿರುತ್ತೆ. ವಿರಾಟ್ ಕ್ರಿಕೆಟ್ ಲೋಕಕ್ಕೆ ಕಿಂಗ್ ಆದರೆ. ಅನುಷ್ಕಾ ಬಾಲಿವುಡ್ನ ಜನಪ್ರಿಯ ನಟಿ. ಇಬ್ಬರೂ 2017 ರಲ್ಲಿ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಟ್ಟವರು. ಸದ್ಯ ಈ ಸ್ಟಾರ್ ಜೋಡಿಗೆ 2 ಮಕ್ಕಳಿವೆ. 1,300 ಕೋಟಿ ರೂಪಾಯಿ ಹೊಂದಿರೋ ವಿರುಷ್ಕಾ ದಂಪತಿಯ ಅದ್ಧೂರಿ ಲೈಫ್ಸ್ಟೈಲ್ ಎಲ್ಲರ ಕಣ್ಣು ಕುಕ್ಕುತ್ತೆ.
Virat Kohli is always there for fans ?
- Video of the Day.....!!!! pic.twitter.com/1rynnZrmod
— Johns. (@CricCrazyJohns)
Virat Kohli is always there for fans 🫡
- Video of the Day.....!!!! pic.twitter.com/1rynnZrmod— Johns. (@CricCrazyJohns) November 8, 2024
">November 8, 2024
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಪರ್ಫಾಮೆನ್ಸ್ ಅಷ್ಟೇನೂ ಚೆನ್ನಾಗಿ ಇರಲಿಲ್ಲ. ಕ್ರೀಸ್ಗೆ ಬರುತ್ತಿದ್ದ ವಿರಾಟ್ ಕೊಹ್ಲಿ ಅವರು ಬಂದಷ್ಟೇ ವೇಗವಾಗಿ ವಾಪಸ್ ಪೆವಿಲಿಯನ್ಗೆ ತೆರಳುತ್ತಿದ್ದರು. ಹೀಗಾಗಿ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ ಆಸಕ್ತಿ ಕಳೆದುಕೊಂಡಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ