Advertisment

VIRAL VIDEO; ಯುವತಿಯ ತುಟಿಗೆ ಮುತ್ತಿಡಲು ಹೋದ ಮಹಿಳಾ ಪೊಲೀಸ್; ಅಸಲಿಗೆ ಅಲ್ಲಿ ಆಗಿದ್ದೇನು?

author-image
Gopal Kulkarni
Updated On
VIRAL VIDEO; ಯುವತಿಯ ತುಟಿಗೆ ಮುತ್ತಿಡಲು ಹೋದ ಮಹಿಳಾ ಪೊಲೀಸ್; ಅಸಲಿಗೆ ಅಲ್ಲಿ ಆಗಿದ್ದೇನು?
Advertisment
  • ಪಶ್ಚಿಮ ಬಂಗಾಳದ ಮಹಿಳಾ ಪೊಲೀಸ್ ಇನ್ಸ್​ಪೆಕ್ಟರ್​ರಿಂದ ದುರ್ವರ್ತನೆ
  • ಯುವತಿಯ ತುಟಿಗೆ ಮುತ್ತಿಡಲು ಹೋದ ಇನ್ಸ್​ಪೆಕ್ಟರ್ ತಾನಿಯಾ ರಾಯ್​
  • ಸಿಲಿಗುರಿಯಲ್ಲಿ ನಡೆದ ಘಟನೆಯ ವಿಡಿಯೋ ವೈರಲ್, ಜನರಿಂದ ಛೀಮಾರಿ

ಮಹಿಳೆಯರ ರಕ್ಷಣೆ ಬಗ್ಗೆ ಪದೇ ಪದೇ ನಮ್ಮ ದೇಶದಲ್ಲಿ ಕೂಗು ಕೇಳಿ ಬರುತ್ತಲೇ ಇರುತ್ತವೆ. ಅವರ ರಕ್ಷಣೆ ಹಾಗೂ ಗೌರವ ಕಾಪಾಡುವ ಜವಾಬ್ದಾರಿಯೊಂದು ನಮ್ಮ ಮೇಲೆ ಇದೆ ಎಂದು ಎಲ್ಲರೂ ಹೇಳುತ್ತಲೇ ಇರುತ್ತಾರೆ. ದೇಶದ ಮಹಿಳೆಯರಿಗೆ ಕೊಂಚ ಹೆಚ್ಚು ಕಡಿಮೆಯಾದರು ಅವರನ್ನು ಕಾಪಾಡಲು ಪೊಲೀಸರು ಓಡೋಡಿ ಬರುತ್ತಾರೆ. ಆದ್ರೆ ಪೊಲೀಸರೇ ಅದರಲ್ಲೂ ಮಹಿಳಾ ಪೊಲೀಸರೇ ಮಹಿಳೆಯರ ಘನತೆ ಧಕ್ಕೆ ತಂದರೆ ಹೇಗಿರುತ್ತೆ. ಅಂತಹದೊಂದು ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ.
ಸಿಲಿಗುರಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ತನಿಯಾ ರಾಯ್ ಎಂಬ ಅಸಿಸ್ಟೆಂಟ್ ಸಬ್ ಇನ್​​ಸ್ಪೆಕ್ಟರ್ ಯುವತಿಯೊಂದಿಗೆ ದುರ್ವರ್ತನೆ ತೋರಿರುವುದು ಬೆಳಕಿಗೆ ಬಂದಿದೆ. ಅಸಲಿಗೆ ಇದೇ ಸಬ್ ಇನ್ಸ್​ಪೆಕ್ಟರ್ ಪಶ್ಚಿಮ ಬಂಗಾಳದಲ್ಲಿ ಮಹಿಳಾ ಸುರಕ್ಷತೆಗಾಗಿ ಪಿಂಕ್​ ಮೊಬೈಲ್ ವ್ಯಾನ್ ಗುರಿಯನ್ನು ಇಟ್ಟುಕೊಂಡಿದ್ದರು.

Advertisment

ಇದನ್ನೂ ಓದಿ:ಡಾಲರ್ ಪ್ರಾಬಲ್ಯ ಹತ್ತಿಕ್ಕಲು ಸಾಂಕೇತಿಕ ಹಣ ಅನಾವರಣಗೊಳಿಸಿದ ಬ್ರಿಕ್ಸ್; ಏನಿದರ ಸ್ಪೆಷಲ್‌?


">October 25, 2024

ಡ್ಯೂಟಿ ಮೇಲೆ ಅದು ಸಮವಸ್ತ್ರದ ಮೇಲೆ ಇದ್ದ ತನಿಯಾ ರಾಯ್ ಒಂದು ಹುಡುಗಿಯ ಕುತ್ತಿಗೆಯನ್ನು ಹಿಡಿದು ಮುತ್ತಿಡಲು ಹೋಗಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ಮಹಿಳಾ ಪೊಲೀಸ್​ ಹೀಗೆ ಯುವತಿಯನ್ನು ನಡೆಸಿಕೊಂಡಿದ್ದ ತುಂಬಾ ಅವಮಾನಕಾರಕ ಹಾಗೂ ನಾಚಿಕೆಗೇಡುತನ ಎಂದು ಜನರು ತನಿಯಾ ರಾಯ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

Advertisment

ಇದನ್ನೂ ಓದಿ:ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆ.. ವರನಿಗೆ ಅನಿರೀಕ್ಷಿತ ಟ್ವಿಸ್ಟ್​ ನೀಡಿದ ಮದುಮಗಳು.. ಆಗಿದ್ದೇನು?

ತನಿಯಾ ರಾಯ್ ಗಸ್ತು ತಿರುಗುತ್ತಿದ್ದ ವೇಳೆ ಒಂದು ಕಡೆ ಯುವಕ ಹಾಗೂ ಯುವತಿ ಸುಮ್ಮನೆ ಮಾತನಾಡುತ್ತಾ ನಿಂತಿದ್ದಾರೆ. ಈ ವೇಳೆ ಅವರನ್ನು ಕರೆದು ಮಾತನಾಡಿಸಿದ ತನಿಯಾ ರಾಯ್ ಹುಡುಗಿ ನಾನು ಮದ್ಯಪಾನ ಮಾಡಿಲ್ಲ ಅಂತ ಹೇಳಲು ಹೋಗುವಾಗ ಯುವತಿಯ ಬಾಯಿಗೆ ತನ್ನ ಬಾಯಿಯನ್ನು ಒಯ್ದು ಮುತ್ತಿಡಲು ಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಸದ್ಯ ಈ ವಿಚಾರವನ್ನು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸಮೀಕ್ ಭಟ್ಟಾಚಾರ್ಯ ಖಂಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment