/newsfirstlive-kannada/media/post_attachments/wp-content/uploads/2025/03/TUM_Student_1.jpg)
ತುಮಕೂರಿನ ಪ್ರತಿಷ್ಠಿತ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಪಿಯು ವಸತಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿನಿ ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿ ಓದುತ್ತಿದ್ದಳು. ಆದರೆ ಪತ್ರ ಬರೆದಿಟ್ಟು, ತನ್ನ ಜೀವ ತಾನೇ ಕಳೆದುಕೊಂಡಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಿದ್ಧಾರ್ಥ ಪಿಯು ವಸತಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ
ಹೆಸರು ದೀಪಿಕಾ ವಿದ್ಯಾವಂತೆ, ಬುದ್ಧಿವಂತೆ. ಮೂಲತಃ ಶಿರಾ ತಾಲೂಕಿನ ಕುಂಟೆಗೌಡನಹಳ್ಳಿ ನಿವಾಸಿ. ಸಿದ್ದಾರ್ಥ ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡ್ತಿದ್ದಳು. ಈಗಾಗಲೇ ಕನ್ನಡ ಮತ್ತು ಗಣಿತ ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿ ಬೌತಶಾಸ್ತ್ರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಆದ್ರೆ ನಿನ್ನೆ ಮಧ್ಯಾಹ್ನ 12:30ರ ಸುಮಾರಿಗೆ ಟೆರೆಸ್‌ನಲ್ಲಿ ಪತ್ರ ಬರೆದಿಟ್ಟು, ವೇಲಿನಿಂದ ನೇಣು ಬಿಗಿದು ಸಾವಿಗೆ ಶರಣಾಗಿದ್ದಾಳೆ. ಸ್ನೇಹಿತರು ಟೆರೆಸ್‌ಗೆ ಹೋಗಿ ನೋಡಿದ್ರೆ ನೇಣುಬಿಗಿದ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯನ್ನ ಕಂಡು ಭಯ ಬಿದ್ದು ಕಿರುಚಾಡಿದ್ದಾರೆ. ಕೂಡಲೇ ಬಂದ ಉಪನ್ಯಾಸಕರು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದ್ದಾರೆ. ಅಷ್ಟರಲ್ಲೇ ಪ್ರಾಣಪಕ್ಷಿ ಹಾರಿ ಹೋಗಿದೆ.
ಅವಳ ಮೈಯೆಲ್ಲಾ ಬಿಸಿ ಇತ್ತು. ತಕ್ಷಣ ಇಳಿಸಿಕೊಂಡು, ಆಟೋದಲ್ಲಿ ಹಾಕ್ಕೊಂಡು ವೈದ್ಯರ ಕೈಯಲ್ಲಿ ಚೆಕ್ ಮಾಡಿಸಿದೆ. ಅವರು ತಕ್ಷಣ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಹೋಗಿ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದ್ವಿ. ಅಲ್ಲಿನ ಅಧಿಕಾರಿಗಳು ಪೊಲೀಸರಿಗೆ ಫೋನ್ ಮಾಡಿದರು. ಅಷ್ಟೊತ್ತಿಗೆ ವಿದ್ಯಾರ್ಥಿನಿ ಇನ್ನಿಲ್ಲ ಎನ್ನುವುದು ಆಸ್ಪತ್ರೆಯಲ್ಲಿ ಕನ್ಫಾರ್ಮ್ ಆಗೋಯಿತು.
ಜಗದೀಶ್, ಉಪನ್ಯಾಸಕರು
ಇದನ್ನೂ ಓದಿ:ಬೆಂಗಳೂರಿನ ಕಾನ್ಸ್ಟೆಬಲ್ ಮಾಸ್ಟರ್ ಪ್ಲಾನ್.. ಗ್ಯಾಂಗ್ನಿಂದ ಚಿನ್ನ, ಬೆಳ್ಳಿ, ಹವಳ, ಹರಳು ದರೋಡೆ
ಅನುಮಾನ ವ್ಯಕ್ತಪಡಿಸಿದ ಪೋಷಕರು
ಇನ್ನು ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳು ಚೆನ್ನಾಗಿಯೇ ಓದುತ್ತಿದ್ದು, ಟಾಪರ್ ಆಗಿದ್ದಳು. ಮಗಳನ್ನು ಆಸ್ಪತ್ರೆಗೆ ಕರೆದುಕೊಂಡ ಮೇಲೆ ನಮಗೆ ಕಾಲ್ ಮಾಡಿದ್ದಾರೆ. ಪತ್ರ ಇದೆ ಅಂತಾರೆ. ಆದ್ರೆ ಅದನ್ನ ನಮಗೆ ತೋರಿಸ್ತಾ ಇಲ್ಲ ಎಂದು ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಎಸ್‌ಪಿ ಅಶೋಕ್ ಕೆ.ವಿ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿನಿ ಬರೆದ ಪತ್ರ ಜಾಗದಲ್ಲಿ ಸಿಕ್ಕಿದೆ. ಇರೋದನ್ನ ತನಿಖೆ ಬಳಿಕ ತಿಳಿಸಲಾವುದು ಎಂದು ಹೇಳಿದ್ದಾರೆ. ಚೆನ್ನಾಗಿ ಓದುತ್ತಿದ್ದ ವಿದ್ಯಾರ್ಥಿನಿ ಏಕಾಏಕಿ ಹೀಗೆ ಏಕೆ ಮಾಡಿಕೊಂಡಿದ್ದು. ಪೋಷಕರು ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಪೊಲೀಸರ ತನಿಖೆಯಿಂದ ಸತ್ಯಾ ಸತ್ಯತೆ ಹೊರ ಬರಬೇಕಿದೆ. ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ