/newsfirstlive-kannada/media/post_attachments/wp-content/uploads/2025/07/Indonesian.jpg)
ಇಂಡೋನೇಷ್ಯಾದ ಉತ್ತರ ಸುಲುವೇಸಿಯ ತಾಲಿಸ್ ದ್ವೀಪದಲ್ಲಿ 280 ಪ್ರಯಾಣಿಕರಿದ್ದ ಹಡಗುವೊಂದಕ್ಕೆ ಬೆಂಕಿ ಹೊತ್ತುಕೊಂಡು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವು ಜನರು ಸಮುದ್ರಕ್ಕೆ ಜಿಗಿದಿದ್ದು 130 ಪ್ರಯಾಣಿಕರು ಪತ್ತೆ ಆಗಿಲ್ಲ ಎಂದು ಹೇಳಲಾಗುತ್ತಿದೆ.
ಕೆಎಂ ಬಾರ್ಸಿಲೋನಾ 5 ಹೆಸರಿನ ಶಿಪ್ ಪ್ರಯಾಣ ಮಾಡುವಾಗ ಮಧ್ಯಾಹ್ನ 1 ಗಂಟೆ ಸುಮಾರಿಗೆ ನೀರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮೊದಲು ಹಡಗಿನ ಸೀಲಿಂಗ್ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಕ್ಷಣಾರ್ಧದಲ್ಲೇ ವ್ಯಾಪಕವಾಗಿ ಅಗ್ನಿ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ 280 ಪ್ರಯಾಣಿಕರು ಜೀವ ಭಯದಿಂದ ನೀರಿಗೆ ಜಂಪ್ ಮಾಡಿದ್ದಾರೆ.
ಇದನ್ನೂ ಓದಿ: ಯಂಗ್ ಪ್ಲೇಯರ್ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್.. 24 ವರ್ಷದ ಯುವ ಆಟಗಾರನಿಗೆ ಒಲಿದ ಅವಕಾಶ
ಇದರಲ್ಲಿ 150 ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದ್ದು ಮೂವರು ಕೊನೆಯುಸಿರೆಳೆದಿದ್ದಾರೆ. ಸ್ಥಳೀಯ ಮೀನುಗಾರರ ಬೋಟ್ಗಳಿಂದ ರಕ್ಷಣೆ ಮಾಡಲಾಗಿದೆ. ಆದರೆ 130 ಮಂದಿ ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಡಗಿನಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜನರು ನಾ ಮುಂದು ನೀ ಮುಂದು ಎನ್ನುವಂತೆ ನೀರಿಗೆ ಹಾರಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೋಡುಗರ ಎದೆ ನಡುಗಿಸುವಂತೆ ಇರುವ ವಿಡಿಯೋದಲ್ಲಿ ಬೆಂಕಿ ಜತೆ ದಟ್ಟ ಹೊಗೆ ಹಡಗಿನಲ್ಲಿ ಆವರಿಸಿಕೊಂಡಿದೆ. ಘಟನೆ ಕುರಿತಂತೆ ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಸದ್ಯ ಹಲವು ಬೋಟ್ಗಳಿಂದ ರಕ್ಷಣಾ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ