/newsfirstlive-kannada/media/post_attachments/wp-content/uploads/2024/01/Money-11.jpg)
ಎಲ್ಲಾ ವಿದ್ಯಾರ್ಥಿಗಳಿಗೂ ವಿದೇಶದಲ್ಲಿ ಓದಬೇಕು ಅನ್ನೋ ಕನಸು ಇದ್ದೇ ಇರುತ್ತದೆ. ಆದರೆ, ಹಣಕಾಸು ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ವಿದೇಶದಲ್ಲಿ ಓದೋ ಕನಸಿನಿಂದ ಇವರು ಹಿಂದೇಟು ಹಾಕುತ್ತಾರೆ. ಹೀಗೆ ಹಣಕಾಸು ವಿಚಾರಕ್ಕೆ ಹೆದರಿ ಹಿಂದೇಟು ಹಾಕೋ ವಿದ್ಯಾರ್ಥಿಗಳು ನೀವಾಗಿದ್ದೀರಾ? ಹಾಗಾದ್ರೆ ಯಾವುದೇ ಕಾರಣಕ್ಕೂ ಹೆದರಬೇಡಿ. ನೀವು ಒಬ್ಬಂಟಿಯಲ್ಲ! ಸ್ಮಾರ್ಟ್​ ಆಗಿ ಹಣಕಾಸು ವಿಚಾರ ಡೀಲ್​ ಮಾಡೋದು ಹೇಗೆ? ಲೋನ್​ ರೀಪೇಮೆಂಟ್​​ ಮಾಡೋದು ಹೇಗೆ? ಎಜುಕೇಷನ್​​ ಲೋನ್​​ ಯಾವುದೇ ಒತ್ತಡ ಇಲ್ಲದೆ ಕ್ಲಿಯರ್​ ಮಾಡೋದು ಹೇಗೆ? ಅನ್ನೋ ಸಂಪೂರ್ಣ ವಿವರಗಳು ನಾವು ಈ ಲೇಖನದಲ್ಲಿದೆ ಓದಿ!
ಲೋನ್​ ಮಾಡಿದ ಮೇಲೆ ನೀವು ಮಾಡಬೇಕಾದ ಮೊದಲ ಕೆಲಸ
ಫಾರೀನ್​​ಗೆ ಹೋಗಿ ಓದೋದು ದೊಡ್ಡ ಕೆಲಸವಲ್ಲ. ಆದರೆ, ನೀವು ಅದಕ್ಕಾಗಿ ಹಣ ಹೊಂದಿಸೋದು ಭಾರೀ ದೊಡ್ಡ ಕೆಲಸ. ನೀವು ಫಾರೀನ್​ ಎಜುಕೇಷನ್​​ ಲೋನ್​ ಪಡೆಯೋದ ಮುನ್ನ ಒಂದಷ್ಟು ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಓದಿಗೆ ಬೇಕಿರೋ ಹಣ ಎಷ್ಟು? ಅದಕ್ಕಾಗಿ ನೀವು ಎಷ್ಟು ಬಡ್ಡಿ ಕಟ್ಟಬೇಕು? ಅನ್ನೋ ಲೆಕ್ಕ ಇರಬೇಕು. ಇಂಟರೆಸ್ಟ್​ ರೇಟ್​​, ರೀಪೇಮೆಂಟ್​​​ ಟೈಮ್​​, ಗ್ರೇಸ್​ ಪಿರಿಯಡ್​ ಎಲ್ಲದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಅಗತ್ಯ.
ಅಸಲು ಬೆಳೆಯದಂತೆ ಬಡ್ಡಿ ಕಟ್ಟೋದು ಇಂಪಾರ್ಟೆಂಟ್​​
ಯೆಸ್​​, ನೀವು ಲೋನ್​ ಮಾಡಿ ಓದಕ್ಕೆ ಶುರು ಮಾಡಿದ ಕೂಡಲೇ ಬಡ್ಡಿ ಬಗ್ಗೆ ಯೋಚನೆ ಮಾಡಬೇಕು. ಓದುತ್ತಿರೋ ಹೊತ್ತಿನಲ್ಲೇ ನೀವು ಸ್ಮಾರ್ಟ್​ ಆಗಿ ಬಡ್ಡಿ ಕಟ್ಟುತ್ತಾ ಹೋಗಬೇಕು. ನಿಮ್ಮ ಸಾಲದ ಬಡ್ಡಿಯನ್ನ ಮಾತ್ರ ಪಾವತಿಸುತ್ತಾ ಹೋಗೋದರಿಂದ ಹಲವಾರು ಅನುಕೂಲಗಳಿವೆ. ಬಡ್ಡಿ ಪಾವತಿಸುವ ಮೂಲಕ ನೀವು ಅಸಲು ಬೆಳೆಯದಂತೆ ತಡೆಯಬಹುದು. ಇದು ನಿಮ್ಮ ಹಣವನ್ನು ಸೇವ್​ ಮಾಡಲಿದೆ. ಅಷ್ಟೇ ಅಲ್ಲ ಯಾವುದೇ ಒತ್ತಡ ಇಲ್ಲದೆ ನಿಮ್ಮ ಓದಿನ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ.
/newsfirstlive-kannada/media/post_attachments/wp-content/uploads/2024/07/students.jpg)
ಡಿಗ್ರಿ ಮುಗಿದ ಕೂಡಲೇ ರೀಪೇಮೆಂಟ್​​​ ಮಾಡಬೇಕು
ನಿಮ್ಮ ಓದು ಮುಗಿದ ಕೂಡಲೇ ಲೋನ್​ ಕಟ್ಟಲು ಶುರು ಮಾಡಬೇಕಾಗುತ್ತದೆ. ಲೋನ್​​ಗೆ ಬಡ್ಡಿ ಮೇಲೆ ಬಡ್ಡಿ ಹಾಕುತ್ತಾರೆ ಅನ್ನೋದು ಅರ್ಥ ಮಾಡಿಕೊಳ್ಳಬೇಕು. ನೀವು ಈ ಬಡ್ಡಿ ಅನ್ನೋ ಟ್ರ್ಯಾಪ್​​ಗೆ ಬಲಿ ಆಗಬಾರದು ಅನ್ನೋದಾದ್ರೆ ನಮ್ಮೀ ಸಲಹೆಗಳನ್ನು ಫಾಲೋ ಮಾಡಿ!
ಎಜುಕೇಷನ್​ ಲೋನ್​ ತೀರಿಸಲು ಕೆಲವು ಟಿಪ್ಸ್​​
1. ಮೊದಲು ನಿಮ್ಮ ಲೋನ್​ ರೀಪೇಮೆಂಟ್​ ಬಗ್ಗೆ ಅರ್ಥ ಮಾಡಿಕೊಳ್ಳಬೇಕು
2. ನಿಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಲೋನ್​ ರೀಪೇಮೆಂಟ್​ ಪ್ಲಾನ್​ ಮಾಡಬೇಕು
3. ಡಿಗ್ರಿ ಮುಗಿದ ಕೂಡಲೇ ನಿಮ್ಮ ದುಡಿಮೆ ಎಷ್ಟು? ಸೇವಿಂಗ್ಸ್​ ಎಷ್ಟು ಎಂದು ನೋಡಬೇಕು
4. ಸಾಲ ತೀರಿಸಲು ಯಾರೇ ಆಗಲಿ ಒಂದು ಬಜೆಟ್​​ ಪ್ಲಾನ್​ ಮಾಡಲೇಬೇಕು
5. ಪ್ರತಿ ತಿಂಗಳು ನೀವು ಎಷ್ಟು ಹಣ ಮೀಸಲಿಡಬೇಕು ಎಂದು ತಿಳಿದುಕೊಳ್ಳಬೇಕು
6. ಹಣಕಾಸು ನಿರ್ವಹಣೆ ಮಾಡಲು ಬೇಕಾದ ಸಲಹೆಗಳನ್ನು ಪಡೆಯಲೇಬೇಕು
7. ಯಾವುದೇ ಕಾರಣಕ್ಕೂ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ
8. ಹಿರಿಯರಿಂದ ಮಾರ್ಗದರ್ಶನ ಪಡೆದು ಈ ಸಮಸ್ಯೆಯಿಂದ ಬಚಾವ್​ ಆಗಬಹುದು
9. ನಿಮ್ಮ ಸ್ನೇಹಿತರು ಮತ್ತು ಆಪ್ತರಿಂದ ಸಹಾಯ ಕೇಳಲು ಹಿಂಜರಿಯಬೇಡಿ
10. ನಿಮ್ಮ ಸಾಲದ ವಿವರಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಅಗತ್ಯ
11. ನಿಮ್ಮ ಮರುಪಾವತಿ ತಂತ್ರದ ಮೇಲೆ ಯೋಚಿಸಿ ಒಂದು ನಿರ್ಧಾರಕ್ಕೆ ಬರಬೇಕು
12. ನಿಮಗೆ ಯಾರೇ ಸಲಹೆ ನೀಡಿದ್ರೂ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು
13. ಶಿಕ್ಷಣ ಸಾಲವನ್ನು ನಿರ್ವಹಿಸುವ ಕುರಿತು ಒಳನೋಟ ಬೆಳೆಸಿಕೊಳ್ಳಬೇಕು
14. ಮುಂಜಾಗ್ರತಾ ಹಣಕಾಸು ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು
15. ಸಾಧ್ಯವಾದಷ್ಟು ಮರುಪಾವತಿಗಳ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು
16. ಯಾವಾಗಲೂ ಎಮರ್ಜೆನ್ಸಿ ಫಂಡ್​​ ನಿಮ್ಮ ಖಾತೆಯಲ್ಲಿ ಇಡೋದು ಉತ್ತಮ
17. ಇದರಿಂದ ಒತ್ತಡವಿಲ್ಲದೆ ನಿಮ್ಮ ಸಾಲದ ಪಾವತಿಗಳನ್ನು ಮುಂದುವರಿಸಬಹುದು
18. ಪದವಿ ಮುಗಿಯೋ ಮುನ್ನ ಯಾವ ರೀತಿಯ ಕೆಲಸ ಮಾಡಬೇಕು ಎಂದು ಯೋಚಿಸಿ
19. ನಿಮ್ಮ ವೃತ್ತಿ ಮಾರ್ಗ ಮತ್ತು ಸಂಭಾವ್ಯ ಗಳಿಕೆ ಬಗ್ಗೆ ಕ್ಲ್ಯಾರಿಟಿ ಬಹಳ ಮುಖ್ಯ
20. ಸರ್ಕಾರದಿಂದಲೇ ಉನ್ನತ ಶಿಕ್ಷಣಕ್ಕಾಗಿ ಬಡ್ಡಿರಹಿತ ಸಾಲ ಯೋಜನೆ ಇದೆ
21. ವಾರ್ಷಿಕ 10 ಲಕ್ಷದಂತೆ 2 ವರ್ಷಗಳ ಅವಧಿಗೆ ಗರಿಷ್ಠ 20 ಲಕ್ಷ ನೀಡಬಹುದು
22. ನೀವು ಬಡ್ಡಿರಹಿತ ಸಾಲ ತೆಗೆದುಕೊಂಡರೆ ಯಾವುದೇ ಒತ್ತಡ ಇರೋದಿಲ್ಲ
ಇನ್ನು, ಎಜುಕೇಷನ್​ ಲೋನ್​ ತೀರಿಸೋದು ದೊಡ್ಡ ಹೊರೆಯಲ್ಲ. ಅದಕ್ಕಾಗಿ ನೀವು ಸಾಕಷ್ಟು ಸ್ಮಾರ್ಟ್​ ವರ್ಕ್​ ಮಾಡಬೇಕು. ಸರಿಯಾದ ಸಮಯಕ್ಕೆ ಬಡ್ಡಿ ಕಟ್ಟುವ ಮೂಲಕ, ನಿಮ್ಮ ಹಣಕಾಸಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ಮೂಲಕ ಲೋನ್​ ಕ್ಲಿಯರ್​ ಮಾಡಬಹುದು. ಮಾರ್ಗದರ್ಶನ ಪಡೆಯುವ ಮೂಲಕ ನಿಮ್ಮ ಸಾಲದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.
UniCreds ನಂತಹ ಪ್ಲಾಟ್‌ಫಾರ್ಮ್‌ಗಳು ನಿಮ್ಮ ಶಿಕ್ಷಣ ಸಾಲಕ್ಕೆ ಪರಿಹಾರಗಳನ್ನು ನೀಡುತ್ತವೆ. ನಿಮ್ಮ ಸರ್ಕಲ್​​ನಲ್ಲಿರೋ ಎಲ್ಲರಿಂದಲೂ ಸಹಾಯ ಪಡೆಯುವ ಮೂಲಕ ನಿಮ್ಮ ಲೋನ್​ ಕ್ಲಿಯರ್​ ಮಾಡಬಹುದು. ಇಷ್ಟು ನೀವು ಎಜುಕೇಷನ್​ ಲೋನ್​ನಿಂದ ಬಚಾವ್​ ಆಗಲು ಇರೋ ಟಿಪ್ಸ್​​.
ಲೇಖಕರು:ಗಣೇಶ್​ ನಚಿಕೇತು
ಇದನ್ನೂ ಓದಿ:ಇವು ವಿಶ್ವದ ಅತ್ಯಂತ ಶ್ರೀಮಂತ ಟಾಪ್​ 10 ನಗರಗಳು! ನಂಬರ್ 1 ಸ್ಥಾನದಲ್ಲಿರುವ ನಗರ ಯಾವುದು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us