ಬೊಂಬೆಯೊಂದಿಗೆ ಮದುವೆಯಾಗಿ ಸಖತ್‌ ಫೇಮಸ್‌ ಆದ ಜಪಾನ್ ಹುಡುಗ; ಎಷ್ಟು ಸಂತೋಷವಾಗಿದ್ದಾನೆ ಗೊತ್ತಾ?

author-image
Gopal Kulkarni
Updated On
ಬೊಂಬೆಯೊಂದಿಗೆ ಮದುವೆಯಾಗಿ ಸಖತ್‌ ಫೇಮಸ್‌ ಆದ ಜಪಾನ್ ಹುಡುಗ; ಎಷ್ಟು ಸಂತೋಷವಾಗಿದ್ದಾನೆ ಗೊತ್ತಾ?
Advertisment
  • ನಿರಂತರ ಲವ್ ಫೆಲ್ಯೂವರ್​ಗಳ ಬಳಿಕ ಜಪಾನ್ ಯುವಕ ಮಾಡಿದ್ದೇನು
  • ಕಾಲ್ಪನಿಕ ಪತ್ನಿಯೊಂದಿಗೇ 6 ವರ್ಷಗಳ ಕಾಲ ಸಂಸಾರ ಮಾಡಿದ ಕೊಂಡೋ
  • ಅಡ್ಜಸ್ಟ್​ಮೆಂಟ್ ಡಿಸಾರ್ಡರ್​​ಗೆ ಕಾಯಿಲೆಗೆ ತುತ್ತಾಗಿದ್ದು ಏಕೆ ಅಕಿಹಿಕೋ ಕೊಂಡೋ

ಸಾಂಪ್ರದಾಯಿ ಸಂಬಂಧಗಳ ಕಲ್ಪನೆಗಳು ಈಗ ದೂರ ಸರಿಯುತ್ತಿವೆ. ಮದುವೆ ವಯಸ್ಸಿಗೆ ಬಂದವರಿಗೆ ಸರಿಯಾಗಿ ಹುಡುಗಿ ಸಿಗುತ್ತಿಲ್ಲ. ಹೀಗಾಗಿಯೇ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಅನ್ನುವ ಹಾಡುಗಳು ಈಗ ವಾಸ್ತವಕ್ಕೆ ಹತ್ತಿರವಾಗಿವೆ. ಸಿಂಗಲ್​​ಗಳೇ ನೂರಾರು ರೀಲ್ಸ್ ಮಾಡಿ ತಮ್ಮ ವೇದನೆಯನ್ನು ಹೊರಗೆ ಹಾಕುತ್ತಿದ್ದಾರೆ. ಇಂತವರ ಮಧ್ಯೆ ಜಪಾನ್​ನ ಈ ಯುವಕ ಮಾತ್ರ ಬೇರೆಯದ್ದೇ ರೀತಿ ತನ್ನ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಈಗಾಗಲೇ ಹೇಳಿದಂತೆ ಪರಂಪರಾನುಗತವಾಗಿ ಬಂದ ಮದುವೆಯ ಪದ್ಧತಿಗಳು ಈಗ ತೆರೆ ಮರೆಗೆ ಸರಿಯುತ್ತಿವೆ. ಸ್ವಯಂ ಮದುವೆ ಹಾಗೂ ರೊಬಾಟಿಕ್ ಸಂಗಾತಿಯನ್ನು ಹೊಂದುವ ದಿನಗಳಲ್ಲಿ ನಾವೀಗ ಇದ್ದೇವೆ. ಅದಕ್ಕೆ ಸಾಕ್ಷಿ ಎನ್ನುವಂತೆ ಜಪಾನ್​ ಈ ಯುವಕನೊಬ್ಬ ಒಂದು ಗೊಂಬೆಯನ್ನು ಮದುವೆಯಾಗಿ ಅದನ್ನೇ ತನ್ನ ಕಾಲ್ಪನಿಕ ಪತ್ನಿ ಎಂದು ಭಾವಿಸಿ ಅದರೊಂದಿಗೆ ಆರು ವರ್ಷ ಸಂಸಾರ ಮಾಡಿದ್ದಾನೆ ಹ್ಯಾಟ್ಸುನೆ ಮಿಕು ಎಂಬ ಕಾಲ್ಪನಿಕ ಪತ್ನಿಯೊಂದಿಗೆ ಸದ್ಯ 6ನೇ ವರ್ಷದ ವಿವಾಹವಾರ್ಷಿಕೋತ್ಸವದ ಫೋಟೋ ಅಪ್​ಲೋಡ್ ಮಾಡುವ ಮೂಲಕ ಜಗತ್ತಿನ ಗಮನವನ್ನು ಸೆಳೆದಿದ್ದಾನೆ ಜಪಾನ್​ನ ಅಕಿಹಿಕೋ ಕೊಂಡೋ.


ಇದನ್ನೂ ಓದಿ: ಅಮೆರಿಕಾದಲ್ಲಿರುವ 4 ಲಕ್ಷ ಭಾರತೀಯರಿಗೆ ದೊಡ್ಡ ಟೆನ್ಷನ್.. ಟ್ರಂಪ್‌ ಮತ್ತೆ ಆ ರೂಲ್ಸ್‌ ಜಾರಿಗೆ ತಂದ್ರೆ ತವರಿಗೆ ವಾಪಸ್‌!

ವಿದೇಶಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ದಿಯ ಪ್ರಕಾರ ಅಕ್ಟೋಬರ್ 23 ರಂದು 41 ವರ್ಷದ ಅಕಿಹಿಕೊ ಕೊಂಡೋ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಫೋಟೋ ಶೇರ್ ಮಾಡಿದ್ದು. ಅದರಲ್ಲಿ ಒಂದು ಕೇಕ್ ಕೂಡ ಇದ್ದು, ಅದನ್ನು ತನ್ನ ಆರನೇ ಮದುವೆ ವಾರ್ಷಿಕೋತ್ಸವಕ್ಕೆ ತಂದಿರುವುದು ಗೊತ್ತಾಗಿದೆ. ಹೆಂಡತಿ ಯಾರು ಎಂದು ನೋಡಿದಾಗ ಹ್ಯಾಟ್ಸುನೆ ಮಿಕು ಎಂಬ ಒಂದು ಗೊಂಬೆ. ಕೇಕ್ ಮೇಲೆ ಐ ಲೈಕ್ ಯೂ ಮಿಕು ವೇರಿ ಮಚ್​ ಹ್ಯಾಪಿ ಸಿಕ್ಸ್ತ್​ ಆ್ಯನಿವರ್ಸರಿ ಎಂದು ಬರೆಯಲಾಗಿದೆ. 2018ರಲ್ಲಿ ಇದೆ ಬೊಂಬೆಯನ್ನು ಮದುವೆಯಾದ ಕೊಂಡೋ ಈಗ 6ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.


">November 4, 2024


ಇದನ್ನೂ ಓದಿ:ಡಿಮ್ಯಾಂಡ್ ಕಳೆದುಕೊಂಡ ಗೋವಾ.. ಟಾಟಾ ಬೈಬೈ ಅಂತಿದ್ದಾರೆ ವಿದೇಶಿಗರು.. ಕಾರಣ ಏನು?

ಕೊಂಡೋ ಸ್ಥಳೀಯರ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ತನ್ನ ಈ ನಿರ್ಧಾರಕ್ಕೆ ಕಾರಣವೇನು ಎಂಬುದು ತಿಳಿಸಿದ್ದಾರೆ. ಪಿಯುಸಿ ಸಮಯದಲ್ಲಿಯೇ ಆತ ಹುಡುಗಿಯರನ್ನು ಕಂಡು ಲವ್​ನಲ್ಲಿ ಬಿದ್ದಿದ್ದನಂತೆ. ಅವನು ಎಲ್ಲರ ಮುಂದೆಯೂ ಕೂಡ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದಾನೆ ಒಟ್ಟಾರೆ. ಆದರೆ ಒಟ್ಟು ಏಳು ಬಾರಿ ಕೊಂಡೋ ಹುಡುಗಿಯರಿಂದ ತಿರಸ್ಕೃತಗೊಂಡಿದ್ದಾನೆ. ಕೊಂಡೋ 2007ರಲ್ಲಿ ಮಿಕು ಎಂಬ ಯುವತಿಯ ಲವ್​​ನಲ್ಲಿ ಬಿದ್ದಿದ್ದರು.ಅದು ಕೂಡ ತಿರಸ್ಕೃತಗೊಂಡಿತು. ಕೊಂಡೋಗೆ ಅವನು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಬೆದರಿಕೆಗಳು ಬಂದವು. ಇದರ ಪರಿಣಾಮವಾಗಿ ಅಡ್ಜಸ್ಟ್​ಮೆಂಟ್ ಡಿಸಾರ್ಡರ್ ಎಂಬ ಮಾನಸಿಕ ಕಾಯಿಲೆಗೆ ತುತ್ತಾದ ಕೊಂಡೋ, ದೀರ್ಘ ರಜೆಯ ಮೇಲೆ ಕೆಲಸದಿಂದ ಆಚೆ ಬಂದ. ಕೊನೆಗೆ ಮಿಕು ಎಂಬ ಗೊಂಬೆಯನ್ನೇ ಮದುವೆಯಾದ ಅವಳೊಂದಿಗೆ ಸುಮಾರು 6 ವರ್ಷದಿಂದ ಕಾಲ ಕಳೆಯುತ್ತಿರುವ ಕೊಂಡೋ ಈಗ 6ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡು ಸಂಭ್ರಮದಿಂದ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment