ಉಗ್ರ ನಝೀರ್ ತಂಡಿಯಾಂತಾವಿಡೆ ಕಥೆಯೇ ಭಯಾನಕ
ಜೈಲಿನಲ್ಲಿದ್ದುಕೊಂಡೇ ದಿನಕ್ಕೆ ನಾಲ್ಕೈದು ಸಾವಿರ ದುಡಿಯುತ್ತಿದ್ದ ಉಗ್ರ
ಜೈಲಿನಲ್ಲಿದ್ದುಕೊಂಡು 30ಕ್ಕೂ ಹೆಚ್ಚು ಹಿಂದೂ ಹುಡುಗರನ್ನ ಮತಾಂತರ ಮಾಡಿದ್ದ
ಬೆಂಗಳೂರು ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ A1 ಆರೋಪಿ ಟಿ. ನಝೀರ್ ಮುಖವಾಡ ಒಂದೊಂದಾಗಿ ಬಯಲಾಗುತ್ತಿದೆ. 2010ರಿಂದಲೇ ಪರಪ್ಪನ ಅಗ್ರಹಾರದಲ್ಲಿ ಸೆರೆಮನೆವಾಸ ಅನುಭವಿಸುತ್ತಿರುವ ಈ ಎಲ್ಇಟಿ ಉಗ್ರನ ಕುರಿತು ಅಗೆದಷ್ಟು ಭಯಾನಕ ಸುದ್ದಿಗಳು ಹೊರಬೀಳುತ್ತಿವೆ. ಜೈಲಿನಲ್ಲಿರುವ ನಝೀರ್ ಅಲಿಯಾಸ್ ತಂಡಿಯಾಂತಾವಿಡೆ ಲಕ್ಷ ಲಕ್ಷ ಹಣ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ದಿನಕ್ಕೆ ನಾಲ್ಕೈದು ಸಾವಿರ ದುಡಿಯುತ್ತಿದ್ದ
ಟಿ.ನಝೀರ್ ಜೈಲಿನಲ್ಲಿದ್ದುಕೊಂಡೇ ದಿನಕ್ಕೆ ನಾಲ್ಕೈದು ಸಾವಿರ ದುಡಿಯುತ್ತಿದ್ದ. ಕೈದಿಗಳಿಗೆ ಬಟ್ಟೆ, ಡ್ರೈಫ್ರೂಟ್ಸ್, ಸ್ವೀಟ್ಸ್ ಮಾರಾಟ ಮಾಡುತ್ತಿದ್ದ. ಉಗ್ರರ ಸೆಲ್ ಬಿಟ್ಟು ಬೇರೆ ಕಡೆ ಸಹ ನಝೀರ್ ಓಡಾಡುತ್ತಿದ್ದ ಎನ್ನಲಾಗುತ್ತಿದೆ.
ಲಕ್ಷಾಂತರ ಹಣ ಸಂಪಾದಿಸಿದ್ದ
ಇದಲ್ಲದೇ, ಟಿ ನಝೀರ್ ಹೊರಗಡೆಯಿಂದ ಡ್ರೈ ಫ್ರೂಟ್ಸ್, ಬಟ್ಟೆ ತರಿಸುತ್ತಿದ್ದ. ಖೈದಿಗಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡ್ತಿತ್ತಿದ್ದ . ಈ ಕಾರಣದಿಂದ ಲಕ್ಷಾಂತರ ಹಣ ಸಂಪಾದಿಸಿದ್ದನು ಎಂಬ ಮಾತುಗಳು ಕೇಳಿಬಂದಿವೆ.
ಹಿಂದೂಗಳ ಮತಾಂತರ ಮಾಡುತ್ತಿದ್ದ ಟಿ ನಝೀರ್!
ಜೈಲಿನಲ್ಲಿ ಇದ್ದುಕೊಂಡೇ ವ್ಯಾಪಾರ, ವ್ಯವಹಾರದ ಜೊತೆಗೆ ಅಲ್ಲಿದ್ದ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಎಂಬ ಮಾತುಗಳು ಕೇಳಿಬಂದಿವೆ. ಜೈಲಲ್ಲಿ 30ಕ್ಕೂ ಹೆಚ್ಚು ಹಿಂದೂಗಳನ್ನ ಇಸ್ಲಾಂಗೆ ಕನ್ವರ್ಟ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಹಿಂದೂ ಹುಡುಗರ ಟಾರ್ಗೆಟ್
ಟಿ. ನಝೀರ್ ಅಮಾಯಕ ಹಿಂದೂ ಹುಡುಗರನ್ನ ಟಾರ್ಗೆಟ್ ಮಾಡುತ್ತಿದ್ದ. ಈತನ ಮಾತಿಗೆ ಪ್ರಚೋದನೆಗೊಂಡ ಹಿಂದೂಗಳು ಮೀಸೆ ಬೋಳಿಸಿಕೊಂಡು ಗಡ್ಡ ಬಿಡುತ್ತಿದ್ದರು. ಇನ್ನು ಜೈಲಿಗೆ ಬಂದ ಮುಸ್ಲಿಂ ಆರೋಪಿಗಳು ಕೇರಳದವರಾದ್ರೆ ಮೊದಲಿಗೆ ಇವನ ಬಳಿ ಬರಬೇಕು ಎಂಬ ನಿಯಮವಿಟ್ಟುಕೊಂಡಿದ್ದ. ಇದಲ್ಲದೆ, ಉಗ್ರರನ್ನು ಹೈ-ಸೆಕ್ಯುರಿಟಿ ಸೆಲ್ನಲ್ಲೇ ನಝೀರ್ ಇರಿಸಿಕೊಳ್ಳುತ್ತಿದ್ದ. ಇದಕ್ಕೆ ₹70,000ವರೆಗೆ ಹಣ ಚಾರ್ಜ್ ಮಾಡುತ್ತಿದ್ದ.
ಶಂಕಿತರ ಬೆನ್ನತ್ತಿದ ಸಿಸಿಬಿ
ಬಂಧಿತರು ಜೈಲಿನಲ್ಲಿ ಜುನೈದ್, ನಝೀರ್ಗೆ ಹಲವರ ಸಹಾಯ ಸಿಕ್ಕಿದೆ. ಈ ಹಿನ್ನಲೆ ಸಿಸಿಬಿ ಪೊಲೀಸರು ಹಣ ಸಹಾಯ, ಸ್ಫೋಟಕ ನೀಡಿರುವವರ ಬೆನ್ನತ್ತಿದ್ದಾರೆ. ಸಿಸಿಬಿ ತನಿಖೆಯ ಜೊತೆಗೆ ಹಲವು ತನಿಖಾ ತಂಡಗಳು ಹಿಂದೆ ಬಿದ್ದಿದೆ. ಎನ್ಐಎ ಕೂಡ ಸಿಸಿಬಿ ಕೇಸ್ನ ಪ್ರತ್ಯೇಕವಾಗಿ ತನಿಖೆ ಆರಂಭಿಸಿದೆ. ಮತ್ತಷ್ಟು ಆರೋಪಿಗಳ ಪತ್ತೆಗೆ ಎನ್ಐಎ ಮುಂದಾಗಿದೆ. ಇದಲ್ಲದೇ ರಾಜ್ಯ ಆಂತರಿಕಾ ಭದ್ರತಾ ದಳದಿಂದಲೂ ಶಂಕಿತರ ವಿಚಾರಣೆ ನಡೆಸುತ್ತಿದೆ. ಮಿಲಿಟರಿ ಇಂಟಲಿಜೆನ್ಸ್ನಿಂದಲೂ ಶಂಕಿತರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಇನ್ನು ಸಿಕ್ಕ ಗ್ರೆನೇಡ್ ಬಗ್ಗೆಯೂ ಮಿಲಿಟರಿ ವಿಭಾಗ ತನಿಖೆಗೆ ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ