newsfirstkannada.com

ನಡು ಬೀದಿಯಲ್ಲಿ 2 ಕುಟುಂಬಗಳ ನಡುವೆ ಮಾರಾಮಾರಿ.. ಮಹಿಳೆ ಸೇರಿ 6 ಮಂದಿಗೆ ಗಾಯ

Share :

Published January 23, 2024 at 9:47am

    ಮಾರಕಾಸ್ತ್ರಗಳನ್ನು ಹಿಡಿದು ಹೊಡೆದಾಡಿಕೊಂಡ 2 ಕುಟುಂಬ

    ಸುಮಾರು 20 ರಿಂದ 25 ಜನರ ನಡುವೆ ನಡೆದ ಬಡಿದಾಟ

    ಏಕಾಏಕಿ ನಡುರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಾಡಿಕೊಂಡ ಕುಟುಂಬ

ಹುಬ್ಬಳ್ಳಿ: ನಡು ಬೀದಿಯಲ್ಲಿ ಸಂಬಂಧಿಕರ ನಡುವೆಯೇ ಮಾರಾಮಾರಿ ನಡೆದಿದ್ದು, ಮಹಿಳೆ ಸೇರಿ ಆರು ಜನರ ಮೇಲೆ ಹಲ್ಲೆ ಮಾಡಿದ ಪ್ರಕರಣ ಹುಬ್ಬಳ್ಳಿಯ ಶಿವಶಂಕರ ಕಾಲೋನಿ ಬಳಿ ನಡೆದಿದೆ.

ಸೋಮವಾರ ಮಧ್ಯಾಹ್ನ ಸಂಬಂಧಿಕರ ಎರಡು ಗುಂಪುಗಳ ನಡುವೆ ಬಡೆದಾಟ ನಡೆದಿದೆ. ಮಾರಕಾಸ್ತ್ರಗಳನ್ನು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಜಗಳದಲ್ಲಿ ಗಂಭೀರವಾಗಿ ಗಾಯಗೊಂಡ ಆರು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಟುಂಬದ ಎರಡು ಗುಂಪುಗಳ ಸದಸ್ಯರಿಗೂ ಗಂಭೀರ ಗಾಯಗಳಾಗಿವೆ.

ಗಾಯಗೊಂಡಿರುವವರನ್ನು ಕೌದಿ ಕುಟುಂಬದ ಮಂಜುನಾಥ್ ಕೌದಿ, ಶಂಕರ ಕೌದಿ, ಭರತ ಕೌದಿ, ಪಾರ್ವತಿ ಶಿಕಲಾಗಾರ, ಜ್ಯೋತಿ ಅಂಚಣಗೇರಿಗೆ ಎಂದು ಗುರುತಿಸಲಾಗಿದೆ.

ಸುಮಾರು 20 ರಿಂದ 25 ಜನರ ನಡುವೆ ಬಡೆದಾಟ ನಡೆದಿದೆ. ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಾ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಒಂದು ಗುಂಪಿನ ಐದು ಜನರಿಗೆ ಗಂಭೀರ ಗಾಯಗಲಾಗಿವೆ. ಇನ್ನೊಂದು ಕುಟುಂಬದ ಓರ್ವನಿಗೆ ಗಾಯವಾಗಿದ್ದು, ಯುವತಿಗೆ ಪೆಟ್ಟಾಗಿದೆ.

ಕೌದಿ ಕುಟುಂಬಸ್ಥರು ಅಂಚಟಗೇರಿ ಕುಟುಂಬಸ್ಥರಿಂದ ಹಲ್ಲೆ ನಡೆದಿದೆ ಎಂದು ಆರೋಪ ಮಾಡುತ್ತಿದ್ದಾರೆ. ಅಂಚಟಗೇರಿ ಕುಟುಂಬದ ಅನಿಲ್ ಹರಪ್ಪನಹಳ್ಳಿ, ಅರ್ಜುನ್ ಕಾಂಚಗಾರ, ಮುತ್ತಕ್ಕ ಅಂಚಟಗೇರಿ, ಮಹಮ್ಮದ್ ಅಂಚಟಗೇರಿ ಸೇರಿ 20 ಜನರ ಮೇಲೆ ಆರೋಪ ಮಾಡುತ್ತಿದ್ದಾರೆ. ಹಳೆ ವೈಷ್ಯಮ್ಯಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇತ್ತ ಅಂಚಟಗೇರಿ ಕುಟುಂಬಸ್ಥರು ಸಹ ಕೌದಿ ಕುಟುಂಬದ ಮೇಲೆ ಹಲ್ಲೆ ಆರೋಪ ಮಾಡಿದ್ದಾರೆ. ಏಕಾಏಕಿ ನಡುರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ ಎಂದು ಹೇಳಿದ್ದಾರೆ. ಚಿಕ್ಕ ಮಕ್ಕಳಂತಾನೂ ನೋಡದೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕುಟುಂಬದ ಎರಡು ಗುಂಪುಗಳ ನಡುವೆ ನಡೆದ ಬಡೆದಾಟ ಹಿನ್ನೆಲೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಡು ಬೀದಿಯಲ್ಲಿ 2 ಕುಟುಂಬಗಳ ನಡುವೆ ಮಾರಾಮಾರಿ.. ಮಹಿಳೆ ಸೇರಿ 6 ಮಂದಿಗೆ ಗಾಯ

https://newsfirstlive.com/wp-content/uploads/2024/01/hubli-4.jpg

Load More