newsfirstkannada.com

×

JDS​​ಗೆ ವೋಟ್ ಮಾಡಿದ್ದಕ್ಕೆ ಬೆರಳು ಕಟ್.. ಕಾಂಗ್ರೆಸ್​ ವಿರುದ್ಧ ಗಂಭೀರ ಆರೋಪ

Share :

Published April 27, 2024 at 1:48pm

Update April 27, 2024 at 2:03pm

    ವೋಟ್​ ಮಾಡಿದ ನಂತರ ಕೈ-ದಳ ಕಾರ್ಯಕರ್ತರ ಮಧ್ಯೆ ಮಾರಾಮಾರಿ

    ಜೆಡಿಎಸ್​​ನವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಆರೋಪ

    ಕಾಂಗ್ರೆಸ್ ಕಾರ್ಯಕರ್ತರಿಂದ ಜೆಡಿಎಸ್​ನವರ ಮೇಲೆ‌ ಮಚ್ಚಿನಿಂದ ಹಲ್ಲೆ

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯ ಮತದಾನದ ವೇಳೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಕಾಂಗ್ರೆಸ್​​ನವರು ಮಚ್ಚಿನಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಓರ್ವ ಜೆಡಿಎಸ್ ಕಾರ್ಯಕರ್ತನ ಬೆರಳು ಕಟ್ ಆಗಿದ್ದು, ತಲೆಗೆ ಗಂಭೀರವಾದ ಗಾಯವಾಗಿದೆ. ಚಿಂತಾಮಣಿ ತಾಲೂಕಿನ ಕಣಿಶೆಟ್ಟಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗಲಾಟೆಯಲ್ಲಿ ಜೆಡಿಎಸ್ ಕಾರ್ಯಕರ್ತ ಗೋವರ್ಧನ್ ಬೆರಳುಗಳು ಕಟ್ ಆಗಿದ್ದು ತಲೆಗೆ ಗಂಭೀರವಾದ ಗಾಯವಾಗಿದೆ. ಸದ್ಯ ಗಾಯಾಳುವನ್ನು ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಈ ಸಂಬಂಧ ಜೆಡಿಎಸ್ ಮಾಜಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿಯವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಯೋಗ ಕ್ಷೇಮ ವಿಚಾರಿಸಿದ್ದಾರೆ.

ಇದನ್ನೂ ಓದಿ: ಜನಪ್ರಿಯ ಬಿರಿಯಾನಿ ಹೌಸ್ ಹೋಟೆಲ್​​ಗೆ ಬೆಂಕಿ.. ಮಾಲೀಕನಿಗೆ ಲಕ್ಷ, ಲಕ್ಷ ರೂಪಾಯಿ ನಷ್ಟ

ಇದನ್ನೂ ಓದಿ: ರಾಡ್‌ನಿಂದ ‘ಕೈ’ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ.. ವೋಟಿಂಗ್ ಮುಗೀತಿದ್ದಂತೆ ಹಾಸನ ಜಿಲ್ಲೆಯಲ್ಲಿ ಏನಾಯಿತು?

ನಿನ್ನೆ ಕಣಿಶೆಟ್ಟಿಹಳ್ಳಿ ಗ್ರಾಮದಲ್ಲಿ ಮತದಾನದ ವೇಳೆ ಜೆಡಿಎಸ್​ಗೆ ವೋಟ್ ಹಾಕಿದ್ದರಿಂದ ಕಾಂಗ್ರೆಸ್ ಕರ್ಯಕರ್ತರು ಮಚ್ವಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರಾದ ನರೇಂದ್ರ, ಮಂಜುನಾಥ, ಗಣೇಶ ಮತ್ತು ಮಹೇಶ್ ಎಂಬುವರಿಂದ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

JDS​​ಗೆ ವೋಟ್ ಮಾಡಿದ್ದಕ್ಕೆ ಬೆರಳು ಕಟ್.. ಕಾಂಗ್ರೆಸ್​ ವಿರುದ್ಧ ಗಂಭೀರ ಆರೋಪ

https://newsfirstlive.com/wp-content/uploads/2024/04/CBL_JDS_CONGRESS.jpg

Load More