KL ರಾಹುಲ್ ವಿಚಾರದಲ್ಲಿ ಗಂಭೀರ್ ಮತ್ತು ರೋಹಿತ್ ಮಧ್ಯೆ ಜಟಾಪಟಿ; ಕೊನೆಯಲ್ಲಿ ಗೆದ್ದಿದ್ದು ಯಾರು?

author-image
Ganesh
Updated On
ತಂಡದಿಂದ ರೋಹಿತ್​ ಶರ್ಮಾರನ್ನೇ ಕೈ ಬಿಟ್ಟ ಭಾರತದ ಮುಖ್ಯ ಕೋಚ್​​ ಗಂಭೀರ್​​; ಕಾರಣವೇನು?
Advertisment
  • ಕೋಚ್​ ಹೇಳಿದ್ದು ವೇದವಾಕ್ಯ.. ಗಂಭೀರ್​ ರಿಯಲ್​ ಬಾಸ್?
  • ವಿಕೆಟ್ ಕೀಪರ್ ಆಯ್ಕೆಯಲ್ಲಿ ಮೇಲುಗೈ ಸಾಧಿಸಿದ್ದು ಯಾರು?
  • ಇನ್ಮುಂದೆ ಏಕದಿನಕ್ಕೆ ರಾಹುಲ್ ಫಸ್ಟ್​ ಚಾಯ್ಸ್ ಕೀಪರ್

ಇಂಗ್ಲೆಂಡ್​ ಎದುರಿನ ಮೊದಲ ಏಕದಿನ ಪಂದ್ಯ ಟೀಮ್ ಇಂಡಿಯಾದ ರಿಯಲ್ ಬಾಸ್​ ಹೆಡ್ ಕೋಚ್ ಗೌತಮ್ ಗಂಭೀರ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್​ ಮಾಡಿದೆ. ಆಂಗ್ಲರ ವಿರುದ್ಧದ ಕದನದಲ್ಲೂ ಪ್ಲೇಯಿಂಗ್​ ಇಲೆವೆನ್​​ ಆಯ್ಕೆಯಲ್ಲಿ ಗಂಭೀರ್​​ ಮೇಲುಗೈ ಸಾಧಿಸಿದ್ದಾರೆ. ವಿಕೆಟ್​ ಕೀಪರ್​​ ಕೋಟಾದಲ್ಲಿ ರಾಹುಲ್​​ನ ಆಡಿಸುವಲ್ಲಿ ಗಂಭೀರ್​​ ಸಕ್ಸಸ್ ಆದ್ರೆ, ಪಂತ್​ಗಾಗಿ ಪಟ್ಟು ಹಿಡಿದಿದ್ದ ಕ್ಯಾಪ್ಟನ್​ ರೋಹಿತ್​​ ಶರ್ಮಾ ನಿರಾಶರಾಗಿದ್ದಾರೆ.

ಆಸ್ಟ್ರೇಲಿಯಾ ಟೆಸ್ಟ್​ ಸರಣಿ ಸೋತ ಬಳಿಕ ಕೋಚ್​ ಗೌತಮ್​ ಗಂಭೀರ್​, ಕ್ಯಾಪ್ಟನ್​ ರೋಹಿತ್​ ಶರ್ಮಾ ನಡುವೆ ಎಲ್ಲಾ ಸರಿಯಿಲ್ಲ ಅನ್ನೋ ಸುದ್ದಿ ಸದ್ದು ಮಾಡಿತ್ತು. ಎಲ್ಲಾ ಸರಿಯಿದೆ ಎಂದು ಬಿಸಿಸಿಐನ ಕೆಲ ಅಧಿಕಾರಿಗಳು ಇದಕ್ಕೆ ತೇಪೆ ಹಚ್ಚೋ ಕೆಲ್ಸ ಮಾಡಿದ್ರು. ಇಂಡೋ-ಇಂಗ್ಲೆಂಡ್​ ಮೊದಲ ಏಕದಿನ ಫೈಟ್​ ಟೀಮ್​ ಇಂಡಿಯಾದ ಕೋಚ್​ vs ಕ್ಯಾಪ್ಟನ್​ ನಡುವಿನ ಮುಸುಕಿನ ಗುದ್ದಾಟ ಇನ್ನೂ ಮುಗಿದಿಲ್ಲ ಅನ್ನೋ ಕತೆಯನ್ನ ಹೇಳ್ತಿದೆ.

ಫೈಟ್​ನಲ್ಲಿ ಗೆದ್ದ ಗಂಭೀರ್

ಆಸ್ಟ್ರೇಲಿಯಾ ಪ್ರವಾಸದ ಹೀನಾಯ ಸೋಲಿನ ಬಳಿಕ ಗಂಭೀರ್​ ಪವರ್​​​ಕಟ್​ ಮಾಡಿದೆ ಎನ್ನಲಾಗಿತ್ತು. ಅಸಲಿಗೆ ಗಂಭೀರ್​ ಖದರ್​​ ಕಡಿಮೆಯಾಗಿಲ್ಲ. ಕ್ಯಾಪ್ಟನ್​ ರೋಹಿತ್​ ಶರ್ಮಾ ಅಲ್ಲ.. ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ರಿಯಲ್​ ಬಾಸ್​ ಅನ್ನೋದು ಮತ್ತೊಮ್ಮೆ ಪ್ರೂವ್​ ಆಗಿದೆ. ಕೋಚ್​​ ಹೇಳಿದ್ದೇ ವೇದವಾಕ್ಯ.. ಫೈನಲ್​ ಮಾಡಿದ್ದೇ ಟೀಮ್​​. ಕ್ಯಾಪ್ಟನ್​ ಕೆಲಸ ಆನ್​ಫೀಲ್ಡ್​ ಮಾತ್ರ ಅನ್ನೋದನ್ನ ಇಂಗ್ಲೆಂಡ್​ ಎದುರಿನ ಏಕದಿನ ಪಂದ್ಯ ರಿವೀಲ್​ ಮಾಡಿದೆ.

ಇದನ್ನೂ ಓದಿ: 12.75 ಲಕ್ಷವರೆಗೆ ಆದಾಯ ತೆರಿಗೆ ವಿನಾಯತಿ ಬೆನ್ನಲ್ಲೇ.. ಮತ್ತೊಂದು ಗುಡ್​ನ್ಯೂಸ್ ನಿರೀಕ್ಷೆಯಲ್ಲಿ ಜನ..!

publive-image

ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನಕ್ಕೂ ಮುನ್ನ ಸೆಲೆಕ್ಷನ್​ ಹೆಡ್ಡೇಕ್​ ಟೀಮ್​ ಇಂಡಿಯಾಗೆ ಎದುರಾಗಿತ್ತು. ರಿಷಭ್​​ ಪಂತ್ vs ಕೆ.ಎಲ್.ರಾಹುಲ್​. ಇಬ್ಬರಲ್ಲಿ ಯಾರು ವಿಕೆಟ್ ಕೀಪರ್ ಆಗಿ ಆಡ್ತಾರೆ ಅನ್ನೋ ಪ್ರಶ್ನೆ ಸಖತ್​ ಸದ್ದು ಮಾಡಿತ್ತು. ಈ ಸ್ಲಾಟ್​ನ ಸೆಲೆಕ್ಷನ್​ಗಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಗಂಭೀರ್​ ನಡುವೆ ಜಟಾಪಟಿಯೇ ನಡೆದಿತ್ತು. ಈ ಸೆಲೆಕ್ಷನ್​​​ ಜಟಾಪಟಿಯಲ್ಲಿ ಕೊನೆಗೆ ಗೆದ್ದಿದ್ದು ಗೌತಮ್ ಗಂಭೀರ್​.

ಪಂದ್ಯಕ್ಕೂ ಮುನ್ನ ರಿಷಭ್​ ಪಂತ್​ ಟೀಮ್​ ಇಂಡಿಯಾ ಫಸ್ಟ್​ ಚಾಯ್ಸ್​ ವಿಕೆಟ್​ ಕೀಪರ್​ ಅನಿಸಿದ್ರು. ಕೆ.ಎಲ್​ ರಾಹುಲ್​​ ತಂಡದಲ್ಲಿ ಇದ್ರೂ ಕೀಪರ್​ ಜವಾಬ್ದಾರಿ ಪಂತ್​ ಹೆಗಲೇರುತ್ತೆ ಎಂದು ನಿರೀಕ್ಷಿಲಾಗಿತ್ತು. ಪಂತ್​ ಪ್ಲೇಯಿಂಗ್​​ ಇಲೆವೆನ್​ನಿಂದಲೇ ಹೊರಬಿದ್ರು. ರಾಹುಲ್​ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಸ್ಲಾಟ್​ನಲ್ಲಿ ಕಣಕ್ಕಿಳಿದ್ರು. ಈ ನಿರ್ಧಾರದ ಹಿಂದಿನ ಸೂತ್ರಧಾರಿ ಹೆಡ್ ಕೋಚ್ ಗೌತಮ್ ಗಂಭೀರ್​​​​​​​​​​​..

ಇದನ್ನೂ ಓದಿ: Repo rate: ಮತ್ತೊಂದು ಬಿಗ್​ ರಿಲೀಫ್; ಗೃಹ, ವಾಹನ ಸಾಲ ಮಾಡೋರಿಗೆ ಗುಡ್​ನ್ಯೂಸ್..!

ರೋಹಿತ್​ಗೆ ಬೇಕಿತ್ತು ಪಂತ್

ಕೆ.ಎಲ್.ರಾಹುಲ್ ಆ್ಯಂಡ್ ರಿಷಭ್ ಪಂತ್​ ಇಬ್ಬರಲ್ಲಿ ಯಾರಿಗೆ ಚಾನ್ಸ್​ ನೀಡೋದು ಎಂಬ ವಿಚಾರದಲ್ಲಿ ಕ್ಯಾಪ್ಟನ್​- ಕೋಚ್​ ಭಿನ್ನ ನಿಲುವು ತಳೆದಿದ್ರು. ಹೆಡ್ ಕೋಚ್ ಗೌತಮ್ ಗಂಭೀರ್, ಕೆ.ಎಲ್.ರಾಹುಲ್​ ಪರವಾಗಿ ನಿಂತರೆ, ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್ ಪರವಾಗಿ ವಕಾಲತ್ತು ವಹಿಸಿದ್ರು. ಕಮ್​ಬ್ಯಾಕ್​ ಬಳಿಕ ಟಿ20, ಟೆಸ್ಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸ್ಪೆಷಲಿಸ್ಟ್​ ವಿಕೆಟ್​ ಕೀಪರ್​ ಪಂತ್​ನೇ ಏಕದಿನ ಫಾರ್ಮಟ್​ನಲ್ಲೂ ಆಡಿಸೋ ಲೆಕ್ಕಾಚಾರ ರೋಹಿತ್​ ಶರ್ಮಾದ್ದಾಗಿತ್ತು. ಗೌತಮ್​ ಗಂಭೀರ್​ ಕಳೆದ ಏಕದಿನ ವಿಶ್ವಕಪ್​ ವೇಳೆ ಪಂತ್​ ಅಲಭ್ಯತೆಯಲ್ಲಿ ಮಿಂಚಿದ್ದ ರಾಹುಲ್​ನೇ ಮುಂದುವರೆಸೋ ಪಟ್ಟು ಹಿಡಿದಿದ್ರು. ಕೊನೆಗೆ ಸೆಲೆಕ್ಷನ್​ ಫೈಟ್​​ನಲ್ಲಿ ಗೆದ್ದಿದ್ದಾರೆ.

ರಾಹುಲ್ ಫಸ್ಟ್​ ಚಾಯ್ಸ್ ಕೀಪರ್

​ಇಂಗ್ಲೆಂಡ್​​ ವಿರುದ್ಧ ಮೊದಲ ಏಕದಿನ ಪಂದ್ಯ ಮಾತ್ರವಲ್ಲ.. ಈ ಹಿಂದಿನ ಶ್ರೀಲಂಕಾ ಎದುರಿನ ಸರಣಿ ವೇಳೆಯೂ ಪಂತ್​ನ ಬೆಂಚ್​ಗೆ ಸೀಮಿತ ಮಾಡಿ ಮೊದಲ 2 ಪಂದ್ಯಗಳಲ್ಲಿ ರಾಹುಲ್​ ಹೆಗಲಿಗೆ ಕೀಪಿಂಗ್​ ಜವಾಬ್ದಾರಿ ನೀಡಲಾಗಿತ್ತು. ಈ ನಿರ್ಧಾರ ಏಕದಿನ ಫಾರ್ಮೆಟ್​ನಲ್ಲಿ ಕೆ.ಎಲ್ ರಾಹುಲ್ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಎಂಬ ಸ್ಪಷ್ಟ ಸಂದೇಶವನ್ನ ರವಾನಿಸಿದೆ. ಪಂತ್​ ಅಲಭ್ಯತೆಯಲ್ಲಿ ಏಷ್ಯಾಕಪ್ ಹಾಗೂ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್​ಗೆ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲೂ ವಿಕೆಟ್ ಕೀಪರ್ ಹೊಣೆಗಾರಿಕೆಯನ್ನ ನೀಡಲು ನಿರ್ಧರಿಸಿದಂತಿದೆ.

ಇದನ್ನೂ ಓದಿ: ಗಿಲ್, ಅಯ್ಯರ್, ಪಟೇಲ್ ಬ್ಯಾಟಿಂಗ್ ಅಬ್ಬರ​.. ರೋಹಿತ್, ರಾಹುಲ್​ ಮತ್ತೆ ದುರ್ಬಲ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment