/newsfirstlive-kannada/media/post_attachments/wp-content/uploads/2024/11/Faf_KL-Rahul.jpg)
2025ರ ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವಕ್ಕೆ ಮೂವರು ಸ್ಟಾರ್​ ಆಟಗಾರರ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮುಂದಿನ ಕ್ಯಾಪ್ಟನ್​ ಯಾರು? ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಇದರ ಮಧ್ಯೆ ತಂಡದ ನಾಯಕನ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ್ ಜಿಂದಾಲ್ ದೊಡ್ಡ ಸುಳಿವು ನೀಡಿದ್ದಾರೆ.
ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರಿಗೆ ಬರೋಬ್ಬರಿ 14 ಕೋಟಿ ನೀಡಿ ಖರೀದಿ ಮಾಡಲಾಗಿದೆ. ಹಾಗೆಯೇ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದ ಅನುಭವಿ ಫಾಫ್ ಡುಪ್ಲೆಸಿಸ್​ಗೆ ಮಣೆ ಹಾಕಿದೆ. ಆಲ್‌ರೌಂಡರ್ ಅಕ್ಸರ್ ಪಟೇಲ್ ಅವರನ್ನು 16.50 ಕೋಟಿಗೆ ರೀಟೈನ್​ ಮಾಡಿಕೊಂಡಿದೆ. ಈ ಮೂವರಲ್ಲಿ ಒಬ್ಬರಿಗೆ ಕ್ಯಾಪ್ಟನ್ಸಿ ಪಟ್ಟ ನೀಡುವ ಬಗ್ಗೆ ಮಾತಾಡಿದ್ದಾರೆ ಪಾರ್ಥ್​.
ಯಾರಿಗೆ ಕ್ಯಾಪ್ಟನ್ಸಿ? ಎಂದು ಬಿಚ್ಚಿಟ್ಟ ಪಾರ್ಥ್​​
ಕ್ಯಾಪ್ಟನ್ಸಿ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಅಕ್ಷರ್​ ಪಟೇಲ್​ ಹಿಂದಿನಿಂದಲೂ ತಂಡದಲ್ಲೇ ಇದ್ದಾರೆ. ಅವರೊಂದಿಗೆ ನನಗೆ ಉತ್ತಮ ಸಂಬಂಧ ಇದೆ. ಇವರು ತಂಡದ ಉಪನಾಯಕ ಆಗಿದ್ರು. ಹಾಗಾಗಿ ಅವರೇ ಕ್ಯಾಪ್ಟನ್​ ಆಗುತ್ತಾರೋ? ಅಥವಾ ಬೇರಯವರಿಗೆ ನಾಯಕತ್ವ ಸಿಗುತ್ತೋ ಗೊತ್ತಿಲ್ಲ. ಕೆ.ಎಲ್​ ರಾಹುಲ್​ ಅವರನ್ನು ನಾನು ಭೇಟಿ ಮಾಡಿದ್ದೇನೆ. ಅವರು ಹೇಗೆ ಯೋಚನೆ ಮಾಡುತ್ತಾರೆ ಎಂದು ನನಗೆ ಗೊತ್ತಿದೆ ಎಂದರು.
ಇಂಡಿಯನ್​ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನವೇ ಭಾರೀ ಕುತೂಹಲ ಮೂಡಿಸಿದೆ. ಎಲ್ಲಾ ಐಪಿಎಲ್​ ತಂಡಗಳು ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಬಿಡ್ ಮಾಡುವ ಮೂಲಕ ಬಲಿಷ್ಠ ತಂಡಗಳನ್ನು ಕಟ್ಟಿವೆ. ಈಗ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕತ್ವ ಯಾರಿಗೆ? ಅನ್ನೋ ಚರ್ಚೆ ಶುರುವಾಗಿದೆ.
ರಾಹುಲ್​​​ ಅವರಿಗೆ ಸಿಗುತ್ತಾ ಕ್ಯಾಪ್ಟನ್ಸಿ?
2022ರಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಹೊಸ ಇನಿಂಗ್ಸ್ ಶುರು ಮಾಡಿದ್ರು. ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಪರ 38 ಪಂದ್ಯಗಳನ್ನಾಡಿರೋ ರಾಹುಲ್ 10 ಅರ್ಧಶತಕ ಹಾಗೂ 2 ಶತಕಗಳೊಂದಿಗೆ ಒಟ್ಟು 1410 ರನ್ ಕಲೆಹಾಕಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ರು. ಇದಾಗ್ಯೂ ರಾಹುಲ್ ಅವರನ್ನು ಲಕ್ನೋ ತಂಡದಿಂದ ಕೈ ಬಿಡಲಾಯ್ತು. ಈಗ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಕೆ.ಎಲ್​ ರಾಹುಲ್​ ಅವರಿಗೆ ಕ್ಯಾಪ್ಟನ್ಸಿ ನೀಡಬಹುದು ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ