newsfirstkannada.com

ಕೋಲಾರ: ಕೊತ್ತೂರು ಮಂಜುನಾಥ್ ಮತ್ತು ಕೆ.ಎಚ್.ಮುನಿಯಪ್ಪ ಬೆಂಬಲಿಗರ ನಡುವೆ ಮಾರಾಮಾರಿ

Share :

Published February 13, 2024 at 1:59pm

Update February 13, 2024 at 2:27pm

  ಇಂದು ಬೂತ್ ಮಟ್ಟದ ಏಜೆಂಟರ್ ಸಭೆ ಕರೆಯಲಾಗಿತ್ತು

  ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎರಡು ತಂಡಗಳಿಂದ ಮಾರಾಮಾರಿ

  ಜಿಲ್ಲಾ ಕಾಂಗ್ರೆಸ್‌‌ ಕಾರ್ಯಾಧ್ಯಕ್ಷನ ಮೇಲೆ ಕಾರ್ಯಕರ್ತರಿಂದ ಹಲ್ಲೆ

ಕೋಲಾರ: ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾರಾಮಾರಿ ನಡೆದಿದೆ. ಕಾಂಗ್ರೆಸ್ ನ ಎರಡು ಗುಂಪುಗಳು ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಕೋಲಾರದ ಡಿಸಿಸಿ ಬ್ಯಾಂಕ್ ಪಕ್ಕದಲ್ಲಿರುವ ಕಾಂಗ್ರೆಸ್ ‌ಕಚೇರಿಯಲ್ಲಿ ಇಂದು ಬೂತ್ ಮಟ್ಟದ ಏಜೆಂಟರ್ ಸಭೆ ಕರೆಯಲಾಗಿತ್ತು. ಚುನಾವಣಾ ದಿನದಂದು ಬೂತ್ ಗಳಿಗೆ ಏಜೆಂಟ್ ನೇಮಕ ಕುರಿತು ಕಾರ್ಯಕರ್ತರನ್ನು ಆಹ್ವಾನಿಸಲಾಗಿತ್ತು. ಕೆಪಿಸಿಸಿ ಕೋಲಾರ ಕಾಂಗ್ರೆಸ್ ಉಸ್ತುವಾರಿ ರಾಜ್ ಕುಮಾರ್ ನೇತ್ರತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಈ ವೇಳೆ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ಮತ್ತು ಕೆ.ಎಚ್.ಮುನಿಯಪ್ಪ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಫ್ಲೆಕ್ಸ್ ನಲ್ಲಿ ಯಾವುದೇ ನಾಯಕರ ಪೋಟೋ ಇಲ್ಲದಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ.

ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮತ್ತು ರಾಜಕುಮಾರ್ ಸಮ್ಮುಖದಲ್ಲಿ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಶಾಸಕ ಕೊತ್ತೂರು ಮಂಜುನಾಥ್ ಅವರ ಬೆಂಬಲಿಗರಿಂದ ಜಿಲ್ಲಾ ಕಾಂಗ್ರೆಸ್‌‌ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ ಮೇಲೆ ಹಲ್ಲೆ ನಡೆದಿದೆ.

ಗಲಾಟೆ ಬಳಿಕ ಮುನಿಯಪ್ಪ ಬೆಂಬಲಿಗ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ ಸಭೆಯಿಂದ ಹೊರ ನಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಲಾರ: ಕೊತ್ತೂರು ಮಂಜುನಾಥ್ ಮತ್ತು ಕೆ.ಎಚ್.ಮುನಿಯಪ್ಪ ಬೆಂಬಲಿಗರ ನಡುವೆ ಮಾರಾಮಾರಿ

https://newsfirstlive.com/wp-content/uploads/2024/02/Kolar-1.jpg

Load More