/newsfirstlive-kannada/media/post_attachments/wp-content/uploads/2023/10/DKS_SATISH.jpg)
ಬೆಂಗಳೂರು: ಕಾಂಗ್ರೆಸ್ ಮನೆಯಲ್ಲಿ ಸೀಟು, ಫೈಟು, ಭಲೇ ಘಾಟು ಎಬ್ಬಿಸಿದೆ. ಇದೆಲ್ಲಾ ಯಾಕೆ ಎಂದು ದೆಹಲಿಯಿಂದ ಬಂದ ಸುರ್ಜೇವಾಲ ಅವರು ಮಾತಿಗೆ ಸೀಮಿತವಾಗಿ ಪಾಠ ಮಾಡಿ ರಿಟರ್ನ್ ಆಗಿದ್ದಾರೆ. ಆದ್ರೆ, ನಿನ್ನೆ ಸಂಜೆ ನಡೆದ ಹೈವೋಲ್ಟೇಜ್ ಸಿಎಲ್ಪಿ ಮೀಟಿಂಗ್ ಬೆಳಗಾವಿ ಬೆಂಕಿ ಮತ್ತೆ ಧಗಧಗಿಸಿ ಬಿಟ್ಟಿದೆ.
ಸಂಧಾನಕ್ಕಾಗಿ ಕರೆದ ಕೈ ಮೀಟಿಂಗ್ನಲ್ಲಿ ಏನಿದು ಕದನ?
ಸಂಜೆ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಸಭೆ ನಡೆಯಿತು. ಈ ಸಭೆಯಲ್ಲಿ ಸಂಧಾನಕ್ಕೆ ಬಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಎದುರೇ ಬೆಳಗಾವಿ ಕಿಡಿ ಧಗ್ಗನೆ ಹೊತ್ತಿ ಉರಿದಿದೆ. ಅದ್ರಲ್ಲೂ ಸಿಎಲ್ಪಿ ಸಭೆಯಲ್ಲಿ ಬೆಳಗಾವಿ ಡಿಸಿಸಿ ಕಚೇರಿ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ವಾಗ್ಯುದ್ಧ ನಡೆದು ಹೋಗಿದೆ.
ಸಿಎಲ್ಪಿ ಸಭೆಯಲ್ಲಿ ಬೆಳಗಾವಿ ಸಚಿವರ ಮಧ್ಯೆ ವಾಗ್ಯುದ್ಧ!
ಬೆಳಗಾವಿಯಲ್ಲಿ ಪಕ್ಷದ ಕಚೇರಿ ವಿಚಾರವಾಗಿ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ನಡುವೆ ಕಿಡಿ ಹಾರಿದೆ. ಹಲವು ವರ್ಷಗಳಿಂದ ಉಸ್ತುವಾರಿ ಸಚಿವರಾಗಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷದ ಕಚೇರಿಯೇ ಇರಲಿಲ್ಲ. ನಾನು ಮೊದಲ ಬಾರಿ ಸಚಿವೆಯಾಗಿ, ಕಡಿಮೆ ಟೈಂನಲ್ಲಿ ಕಚೇರಿ ನಿರ್ಮಿಸಿದ್ದೇನೆ ಅಂತ ಲಕ್ಷ್ಮೀ ಬೆನ್ನು ತಟ್ಕೊಂಡ್ರು. ಅದು ನೇರವಾಗಿ ಸತೀಶ್ ಜಾರಕಿಹೊಳಿ ಗುರಿಯಾಗಿಸಿ ನಡೆದ ದಾಳಿ ಆಗಿತ್ತು. ಸುಮಾರು 7 ಕೋಟಿ ರೂಪಾಯಿಯಷ್ಟು ಹಣ ಬಾಕಿ ಇತ್ತು. ಅದೆಲ್ಲವನ್ನೂ ತೀರಿಸಿದ್ದೇನೆ ಅಂದ್ರು. ಆ ಬೆನ್ನಲ್ಲೆ ಡಿಕೆಶಿ ಸಹ ಲಕ್ಷ್ಮೀ ಗುಣಗಾನಕ್ಕೆ ನಿಂತ್ರು. ಆಗಲೇ ಕುದಿಯುತ್ತಿದ್ದ ಸತೀಶ್ ಅವರು ಸಿಡಿದು ನಿಂತ್ರು.
ಡಿಕೆಶಿ-ಸತೀಶ್ ನೇರಾನೇರ ಫೈಟ್?
ಡಿಸಿಎಂ ಡಿ.ಕೆ ಶಿವಕುಮಾರ್ ಅಂದಾಜಿನಲ್ಲೇ ಗೋಲು ಹೊಡೆದು ಹೆಬ್ಬಾಳ್ಕರ್ ಹೊಗಳಲು ನಿಂತ್ರು. ಬೆಳಗಾವಿ ಡಿಸಿಸಿ ಕಚೇರಿ ಹೆಬ್ಬಾಳ್ಕರ್ ಕಟ್ಟಿದ್ದಾರೆ ಅಂದ್ರು ಅಷ್ಟೆ, ಇದನ್ನ ಕೇಳ್ತಿದ್ದಂತೆ ಸೈಲೆಂಟ್ ಆಟಗಾರ ಸತೀಶ್ ವೈಲೆಂಟ್ ಆಗ್ಬಿಟ್ರು. ಸಿಟ್ಟಿಗೆದ್ದು ಬಂದು ಮೈಕ್ ಹಿಡಿದ ಜಾರಕಿಹೊಳಿ, ಏನ್ ನಿಮ್ಮ ಪ್ರಾಬ್ಲಮ್ಮು ಅಂತ ಪ್ರಶ್ನೆಗೆ ಎಳೆದ್ಬಿಟ್ರು. ಪದೇ ಪದೇ ನಮಗೆ ಹ್ಯುಮಿಲಿಯೇಷನ್ ಆಗ್ತಿದೆ. ಈ ವಿಚಾರ ಒಂದ್ಸಲ ಕೇಳಿಸ್ಕೊಂಬಿಡಿ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಲು ಜಾಗ ಕೊಟ್ಟಿದ್ದು, ಇವತ್ತಿನ ಬಿಜೆಪಿ ಶಾಸಕ ನಮ್ಮ ಸೋದರ ರಮೇಶ್ ಜಾರಕಿಹೊಳಿ. ಕಟ್ಟಡ ಕಟ್ಟಲು ಮೂರು ಕೋಟಿ ಹಣ ಸುರಿದಿದ್ದು ನಾನು ಅಂತ ನೇರವಾಗಿ ಸಿಡಿಲಿನಂತೆ ಅಬ್ಬರಿಸಿದ್ರು. ಇಲ್ಲಿ ಪದೇ ಪದೇ ಹೆಬ್ಬಾಳ್ಕರ್ ಕಟ್ಟಿದ್ರು, ಹೆಬ್ಬಾಳ್ಕರ್ ಕಟ್ಟಿದ್ರು ಅಂತ ಹೇಳಿ ಅವಮಾನಿಸಬೇಡಿ ಅಂತ ಡಿಸಿಎಂ ಡಿಕೆಶಿಗೆ ನೇರಾನೇರ ತಿರುಗೇಟು ನೀಡಿದ್ರು.
ಲಕ್ಷ್ಮೀ ಬೆಂಬಲಕ್ಕೆ ಬಂದ ಡಿಕೆಶಿ, ಅನಿರೀಕ್ಷಿತ ದಾಳಿಗೆ ಬೆಚ್ಚಿಬಿದ್ರು. ಸುರ್ಜೆವಾಲಾ ಶಾಂತಿ ಮಂತ್ರಪಠಿಸಿದ್ರು. ಫೈನಲಿ ಸಿಎಂ ಎಂಟ್ರಿಯಿಂದ ಕಾಡ್ಗಿಚ್ಚು ಬೂದಿಮುಚ್ಚಿದ ಕೆಂಡವಾಗಿ ಮಾರ್ಪಟ್ತು.
ಸಿಎಲ್ಪಿ ಸಭೆಯಲ್ಲಿ ಪ್ರತಿಧ್ವನಿಸಿದ ಏಕೈಕ ವಿಚಾರವೇ ಅನುದಾನ!
ಇನ್ನು ಇದೇ ಶಾಸಕಾಂಗ ಸಭೆಯಲ್ಲಿ ಅನುದಾನ ಬಗ್ಗೆ ಮತ್ತೆ ಪ್ರತಿಧ್ವನಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನಬೇಕೆಂದು ಶಾಸಕರು ಒಕ್ಕೊರಲಲ್ಲಿ ಧ್ವನಿ ಎತ್ತಿದ್ರು. ಈ ಬಾರಿ ಬಜೆಟ್ನಲ್ಲಿ ಹೆಚ್ಚಿನ ಅನುದಾನದ ಜೊತೆ ಶಾಸಕರಿಗೆ ತಲಾ 10 ಕೋಟಿ ಅನುದಾನ ನೀಡೋದಾಗಿ ಸಿಎಂ ಭರವಸೆ ಕೊಟ್ರು. ಫೈನಲಿ ಸಿಎಂ ಕುರ್ಚಿ ಪ್ರಸ್ತಾಪ ಆಗಿದೆ. ಏನೇ ಗೊಂದಲಗಳಿದ್ರೂ 4 ಗೋಡೆಗಳ ಮಧ್ಯೆ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಿ ಅಂತ ಶಾಸಕರಿಗೆ ಸುರ್ಜೇವಾಲ ತಾಕೀತು ಮಾಡಿದ್ರು ಅಂತ ಗೊತ್ತಾಗಿದೆ.
ಇದನ್ನೂ ಓದಿ:ಗಂಭೀರ್ ಜತೆ ಜಗಳ; ನಿವೃತ್ತಿ ಘೋಷಿಸಲು ಮುಂದಾದ ರೋಹಿತ್; ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ