newsfirstkannada.com

ಛಲ-ಹಠ.. ಕೆಚ್ಚೆದೆಯ ಹೋರಾಟ.. ಅಫ್ಘಾನ್ ಯಶಸ್ಸಿನ ಹಿಂದಿರುವ ಹೀರೋಗಳು ಇವರು..!

Share :

Published June 26, 2024 at 12:08pm

    ಅಫ್ಘಾನ್ ಕೆಚ್ಚೆದೆಯ ಹೋರಾಟದ ಪ್ರತಿಫಲವೇ ಗೆಲುವು

    ಟಿ20 ವಿಶ್ವಕಪ್​​ನಲ್ಲಿ ಇತಿಹಾಸ ನಿರ್ಮಿಸಿದ ಅಫ್ಘಾನ್

    ತೆರೆ ಹಿಂದಿನ ಹೀರೋಗಳಿಗೆ ಒಂದು ಸೆಲ್ಯೂಟ್​..!

ಸಾಧಿಸುತ್ತೇನೆ ಎಂಬ ಛಲ.. ಕೆಚ್ಚೆದೆಯ ಹೋರಾಟ.. ತಂಡದ ಗೆಲುವಿಗಾಗಿ ಏನನ್ನ ಬೇಕಾದ್ರೂ ಮಾಡ್ತೀನಿ ಅನ್ನೋ ಮನೋಭಾವ.. ಇಂದು ಅಫ್ಘಾನಿಸ್ತಾನ ತಂಡವನ್ನ ಸೆಮಿಫೈನಲ್​ಗೇರಿಸಿದೆ. ಬಾಂಗ್ಲಾ ಟೈಗರ್ಸ್​ ಬೇಟೆಯಾಡಿದ ಅಫ್ಘನ್​​​ ಆಟಗಾರರು ಬಲಿಷ್ಠ ಆಸ್ಟ್ರೇಲಿಯಾವನ್ನೆ ವಿಶ್ವಕಪ್​ನಿಂದ ಕಿಕ್​ಔಟ್​ ಮಾಡಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಸೆಮಿಫೈನಲ್‌ ಪ್ರವೇಶಿಸಿದೆ. ಸೂಪರ್-8ನ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ರಶೀದ್ ಖಾನ್ ಬಳಗ, ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಆ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಐತಿಹಾಸಿಕ ಗೆಲುವಿಗೆ ಅಫ್ಘನ್ ಹೋರಾಡಿದ ರೀತಿ ಮೈ ಜುಮ್​ ಎನಿಸುವಂತಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಭರ್ಜರಿ ಮಳೆಯ ಎಚ್ಚರಿಕೆ.. ಬೆಂಗಳೂರಿಗೆ ಹವಾಮಾನ ಇಲಾಖೆ ಕೊಟ್ಟ ಸೂಚನೆ ಏನು?

ಬಾಂಗ್ಲಾ ಟೈಗರ್ಸ್​ನ ಬೇಟೆಯಾಡಿದ ಆಫ್ಫನ್ಸ್..!
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘನ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಜಸ್ಟ್​ 115 ರನ್ ಗಳಿಸಿತ್ತು. ಮಳೆ ಅಡ್ಡಿಪಡಿಸಿದ ಪರಿಣಾಮ ಬಾಂಗ್ಲಾಗೆ 19 ಓವರ್​ಗಳಲ್ಲಿ 114 ರನ್​ಗಳ ಗುರಿ ನೀಡಲಾಯ್ತು. ಈ ಟಾರ್ಗೆಟ್​ನ 12.1 ಎಸೆತದಲ್ಲೇ ತಲುಪಿದ್ರೆ ಬಾಂಗ್ಲಾಗೆ ಸೆಮಿಸ್​ ಪ್ರವೇಶದ ಅವಕಾಶ ಇತ್ತು. ಅದೇ ಮಹಾದಾಸೆಯಲ್ಲಿ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾ ಲೆಕ್ಕಚಾರ ತಲೆಕೆಳಗಾಯ್ತು.

ಕೊನೆವರೆಗೂ ಫೈಟರ್ಸ್​ನಂತೆ ಆಫ್ಘನ್ಸ್ ಹೋರಾಟ
ಅಫ್ಘನ್ ತಂಡದ ಹೋರಾಟ ನಿಜಕ್ಕೂ ಮೈ ಜುಮ್​ ಅನ್ನಿಸುವಂತಿತ್ತು. ಚೇಸಿಂಗ್​ಗಿಳಿದ ಆರಂಭದಲ್ಲಿ ಬಾಂಗ್ಲಾ ಮೇಲುಗೈ ಸಾಧಿಸಿತ್ತು. ಒಂದು ಹಂತದಲ್ಲಿ ಅಫ್ಘನ್ ಸೋಲಿನ ಸುಳಿಗೆ ಸಿಲುಕಿತ್ತು. ಆದ್ರೂ, ಛಲ, ಗೆಲುವಿನ ಹಠ ಆಟಗಾರರಲ್ಲಿ ಕಡಿಮೆಯಾಗಲಿಲ್ಲ. ಪದೇ ಪದೇ ಪಂದ್ಯಕ್ಕೆ ಮಳೆ ಅಡ್ಡಿಯಾದರೂ, ತಾಳ್ಮೆ ಕಳೆದುಕೊಳ್ಳದ ಅಫ್ಘನ್ನರು, ಬಾಂಗ್ಲಾ ಟೈಗರ್ಸ್​ನ ಕಂಪ್ಲೀಟ್ ಡಾಮಿನೇಟ್ ಮಾಡಿದ್ರು.

ಇದನ್ನೂ ಓದಿ:ಅಪರಿಚಿತ ವಾಹನ ಡಿಕ್ಕಿ.. ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ದರ್ಶನ್ ಅಭಿಮಾನಿ

ಕ್ಯಾಪ್ಟನ್ ರಶೀದ್ ಖಾನ್ ಸೂಪರ್ ಸ್ಪೆಲ್..!
ಅಫ್ಘನ್ ಪಡೆಯ ಗೇಮ್ ಚೇಂಜರ್ಸ್​ ಕ್ಯಾಪ್ಟನ್ ರಶೀದ್ ಹಾಗೂ ವೇಗಿ ನವೀನ್ ಉಲ್ ಹಕ್..! ಅಲ್ಪಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವುದು ಸುಲಭದ್ದಾಗಿರಲಿಲ್ಲ. ಆದ್ರೆ, ಇದನ್ನ ಸಾಧ್ಯವಾಗಿಸಿದ ಶ್ರೇಯ ಇವರಿಬ್ಬರಿಗೆ ಸಲ್ಲುತ್ತೆ. ಸೂಪರ್ ಸ್ಪೆಲ್ ಮಾಡಿದ ರಶೀದ್​​​​​​​​​​​​​​​​​, 4 ಓವರ್​ಗಳಲ್ಲಿ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದ್ರು. ಆ ಮೂಲಕ ಬಾಂಗ್ಲಾ ಬ್ಯಾಟಿಂಗ್ ಬೆನ್ನಲುಬನ್ನೇ ಮುರಿದ್ರು.

ಮತ್ತೊಂದೆಡೆ ಅಗ್ರೆಸ್ಸಿವ್ ಆಗಿ ಕಾಣ್ತಿದ್ದ ನವೀನ್, ಆರಂಭದಲ್ಲೇ 2 ವಿಕೆಟ್ ಕಬಳಿಸಿ ಬ್ರೇಕ್ ಥ್ರೂ ನೀಡಿದ್ರು. ಬಳಿಕ 18ನೇ ಓವರ್​ನಲ್ಲಿ ದಾಳಿಗಿಳಿದ ನವೀನ್ ಮುಂದೆ, ಅನುಭವಿ ಲಿಟನ್​​ ದಾಸ್ ಎದುರು 12 ರನ್ ಡಿಫೆಂಡ್​​​​​​​​​​​​​​​ ಮಾಡಿಕೊಳ್ಳುವ ಚಾಲೆಂಜ್ ಇತ್ತು. ಆದ್ರೆ, ಲಿಟನ್ ದಾಸ್​ಗೆ​ ಅಬ್ಬರಿಸಲು ಅವಕಾಶ ನೀಡದ ನವೀನ್, ಬ್ಯಾಕ್ ಟು ಬ್ಯಾಕ್ ಟಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್ ವಿಕೆಟ್ ಉರುಳಿಸಿ ಗೆಲುವು ತಂದಿಟ್ರು.

ಟಿ20 ವಿಶ್ವಕಪ್​​​​ನಲ್ಲಿ ಇತಿಹಾಸ ನಿರ್ಮಾಣ
ಬಾಂಗ್ಲಾ ಎದುರಿನ ಗೆಲುವಿನೊಂದಿಗೆ​ ಸೆಮಿಫೈನಲ್‌ ಟಿಕೆಟ್ ಗಿಟ್ಟಿಸಿಕೊಂಡ ಅಫ್ಘನ್, ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿ ಹೊಸ ಇತಿಹಾಸವನ್ನೇ ನಿರ್ಮಿಸಿದೆ. ವಿಶ್ವ ಚಾಂಪಿಯನ್​ ಆಗುವತ್ತ ಹೆಜ್ಜೆ ಹಾಕುವುದರ ಜೊತೆ ಜೊತೆಗೆ ಟೀಮ್ ಇಂಡಿಯಾ ಬಳಿಕ ಏಷ್ಯಾದಲ್ಲಿ ನಾವೇ ಬಲಾಢ್ಯರು ಎಂಬ ಸಂದೇಶವನ್ನು ಸಾರಿದೆ.

ಇದನ್ನೂ ಓದಿ:ಮಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ.. ಮಳೆಗೆ ಗೋಡೆ ಕುಸಿದು ಗಂಡ, ಹೆಂಡತಿ, ಇಬ್ಬರು ಮಕ್ಕಳು ಸಾವು

ತೆರೆ ಹಿಂದಿನ ಹೀರೋಗಳಿಗೆ ಒಂದು ಸೆಲ್ಯೂಟ್​..!
ಆನ್​ಫೀಲ್ಡ್​ನಲ್ಲಿ ಆಟಗಾರರ ಆಟ ಮಾತ್ರವೇ ಗೆಲುವಿಗೆ ಕಾರಣವಾಗಲಿಲ್ಲ. ತೆರೆ ಹಿಂದೆ ಗೇಮ್​​ಪ್ಲಾನ್, ಸ್ಟ್ರಾಟರ್ಜಿ ರೂಪಿಸ್ತಿದ್ದ ಹೆಡ್ ಕೋಚ್ ಜೊನಾಥನ್ ಟ್ರಾಟ್, ಬೌಲಿಂಗ್ ಕನ್ಸಲ್​ಟೆಂಟ್​​ ಡ್ವೇನ್ ಬ್ರಾವೋಗೂ ಸೇರುತ್ತೆ. ಯಾಕಂದ್ರೆ, ಕ್ರೂಶಿಯಲ್ ಟೈಮ್​ನಲ್ಲಿ ಇವರು ನೀಡ್ತಿದ್ದ ಸಣ್ಣ ಸಣ್ಣ ಇನ್​ಫುಟ್ಸ್, ಆನ್​ಫೀಲ್ಡ್​ನಲ್ಲಿ ಬಿಗ್ ಇಂಪ್ಯಾಕ್ಟ್​ ತಂದು ಕೊಡ್ತು. ಒಂದು ರೀತಿ ಹೆಡ್ ಕೋಚ್ ಜೋನಾಥನ್ ಟ್ರಾಟ್, ಅನ್​ಅಫಿಶಿಯಲ್ ಕ್ಯಾಪ್ಟನ್ ಆಗಿದ್ರು.

ಆಸ್ಟ್ರೇಲಿಯಾ ಪಾಲಿಗೆ ಅಫ್ಘನ್ನರೇ ವಿಲನ್ಸ್​..!
ಸೂಪರ್-8ನಲ್ಲಿ ಆಸ್ಟ್ರೇಲಿಯಾಗೆ ಮೊದಲ​ ಆಘಾತ ನೀಡಿದ್ದ ಅಫ್ಘನ್, ಆಸಿಸ್​ ಪಡೆಯನ್ನ ಸಂಕಷ್ಟಕ್ಕೆ ಸಿಲುಕಿಸಿತ್ತು. ಇದೀಗ ಬಾಂಗ್ಲಾವನ್ನು ಮಣ್ಣು ಮುಕ್ಕಿಸುವುದರೊಂದಿಗೆ ಅಫ್ಘಾನಿಸ್ತಾನ ಆಸಿಸ್​ ತಂಡವನ್ನ ವಿಶ್ವಕಪ್​ನಿಂದ ಕಿಕ್​ಔಟ್​ ಮಾಡಿತು. ಸೆಮೀಸ್​ಗೆ ಎಂಟ್ರಿ ನೀಡಿರುವ ಅಫ್ಘನ್ ಮುಂದಿನ ಟಾರ್ಗೆಟ್​, ಬಲಿಷ್ಠ ಸೌತ್ ಆಫ್ರಿಕಾ ಆಗಿದೆ. ಈ ಸೆಮಿಫೈನಲ್​ನಲ್ಲಿ ಚೋಕರ್ಸ್ ಹಣೆಪಟ್ಟಿಯ ಸೌತ್ ಆಫ್ರಿಕಾವನ್ನೇ ಮಣಿಸಿ ಫೈನಲ್​​ಗೇರಿದ್ರು ಅಚ್ಚರಿ ಇಲ್ಲ.

ವಿಶೇಷ ವರದಿ: ಸಂತೋಷ್

ಇದನ್ನೂ ಓದಿ:ಸಂಸತ್ತಿಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದವರ ಮೇಲೆ ಫೈರಿಂಗ್.. ಐವರು ಸಾವು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಛಲ-ಹಠ.. ಕೆಚ್ಚೆದೆಯ ಹೋರಾಟ.. ಅಫ್ಘಾನ್ ಯಶಸ್ಸಿನ ಹಿಂದಿರುವ ಹೀರೋಗಳು ಇವರು..!

https://newsfirstlive.com/wp-content/uploads/2024/06/AFGHAN-2.jpg

Load More