newsfirstkannada.com

ಜೈಲಿಂದಲೇ ಸ್ಪರ್ಧಿಸಿ ಲೀಡ್​ನಲ್ಲಿರೋ ಅಮೃತ್ ಪಾಲ್ ಸಿಂಗ್.. ಯಾವ ಕ್ಷೇತ್ರ?

Share :

Published June 4, 2024 at 12:34pm

  ಅಸ್ಸಾಂನ ದಿಬ್ರುಗಢ್‌ ಜೈಲಿನಲ್ಲಿರುವ ಅಮೃತ್ ಪಾಲ್ ಸಿಂಗ್

  2019ರ ಎಲೆಕ್ಷನ್​​ನಲ್ಲಿ ಗೆಲುವು ಪಡೆದಿದ್ದ ಕುಲ್ಬೀರ್ ಸಿಂಗ್ ಝಿರಾ

  ಕಾಂಗ್ರೆಸ್​ನ ಕುಲ್ಬೀರ್ ಝಿರಾ ವಿರುದ್ಧ ಲೀಡ್​ನಲ್ಲಿರೋ ಸಿಂಗ್

ಚಂಡೀಗಢ: ಸದ್ಯ ಅಸ್ಸಾಂನ ದಿಬ್ರುಗಢ್‌ ಜೈಲಿನಲ್ಲಿರುವ ವಾರಿಸ್ ಪುಂಜಾ ಡಿ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ ಅವರು ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಮುನ್ನಡೆ ಸಾಧಿಸಿದ್ದಾರೆ. ಜೈಲಿನಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು ಬರೋಬ್ಬರಿ 44 ಸಾವಿರ ಮತಗಳಿಂದ ಅಮೃತ್ ಪಾಲ್ ಸಿಂಗ್ ಮುನ್ನಡೆಯಲ್ಲಿದ್ದಾರೆ.

ಪಂಜಾಬ್​ನ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ನ ಅಭ್ಯರ್ಥಿ ಕಾಂಗ್ರೆಸ್ ಕುಲ್ಬೀರ್ ಸಿಂಗ್ ಝಿರಾ ವಿರುದ್ಧ ಜೈಲಿನಲ್ಲಿಂದಲೇ ಅಮೃತ್ ಪಾಲ್ ಸಿಂಗ್ ಸ್ಪರ್ಧೆ ಮಾಡಿದ್ದರು. ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ ಕುಲ್ಬೀರ್ ಸಿಂಗ್ ವಿರುದ್ಧ 44 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಅಮೃತ್ ಪಾಲ್ ಸಿಂಗ್ ಕಳೆದ ವರ್ಷ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಜೈಲು ಸೇರಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಮುನ್ನಡೆ; ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಬಿಗ್ ಶಾಕ್‌!

2019ರ ಎಲೆಕ್ಷನ್​​ನಲ್ಲಿ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕುಲ್ಬೀರ್ ಸಿಂಗ್ ಝಿರಾ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಆದರೆ ಈ ಸಲ ಅಖಾಡದಲ್ಲಿ ಬೇರೆ ಬೇರೆ ಅಭ್ಯರ್ಥಿಗಳಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಅಮೃತ್ ಪಾಲ್ ಸಿಂಗ್, ಕಾಂಗ್ರೆಸ್​ನಿಂದ ಕುಲ್ಬೀರ್ ಸಿಂಗ್ ಝಿರಾ, ಅಕಾಲಿದಳದ ವಿರ್ಸಾ ಸಿಂಗ್ ವಾಲ್ತೋಹಾ ಮತ್ತು ಎಎಪಿಯ ಲಾಲ್ಜಿತ್ ಸಿಂಗ್ ಭುಲ್ಲರ್ ಸದ್ಯ ಸ್ಪರ್ಧೆಯಲ್ಲಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಅಮೃತ್ ಪಾಲ್ ಸಿಂಗ್ ಲೀಡ್​​ನಲ್ಲಿದ್ದು, ಎಎಪಿ ಮೂರನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ನಾಲ್ಕನೇ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿಂದಲೇ ಸ್ಪರ್ಧಿಸಿ ಲೀಡ್​ನಲ್ಲಿರೋ ಅಮೃತ್ ಪಾಲ್ ಸಿಂಗ್.. ಯಾವ ಕ್ಷೇತ್ರ?

https://newsfirstlive.com/wp-content/uploads/2024/06/SINGH.jpg

Load More