Advertisment

ರಂಗಭೂಮಿ ಕಲಾವಿದ, ಸಂತ, ಕಲ್ಪನಾ 2 ಚಿತ್ರದ ಖಳ ನಾಯಕ ಪ್ರಕಾಶ್ ಹೆಗ್ಗೋಡು ಇನ್ನಿಲ್ಲ

author-image
admin
Updated On
ರಂಗಭೂಮಿ ಕಲಾವಿದ, ಸಂತ, ಕಲ್ಪನಾ 2 ಚಿತ್ರದ ಖಳ ನಾಯಕ ಪ್ರಕಾಶ್ ಹೆಗ್ಗೋಡು ಇನ್ನಿಲ್ಲ
Advertisment
  • ಕನ್ನಡದ ಸಂತ, ಭಾಗ್ಯದ ಬಳೆಗಾರ, ಕಲ್ಪನಾ 2 ಚಿತ್ರದಲ್ಲಿ ಅಭಿನಯ
  • ಏಸು ಪ್ರಕಾಶ್ ಕಲ್ಲುಕೊಪ್ಪ ಅಂತ ಖ್ಯಾತರಾಗಿದ್ದ ಪ್ರಕಾಶ್ ಕಲ್ಲುಕೊಪ್ಪ
  • ರಂಗಭೂಮಿ ಕಲಾವಿದ, ಚಿತ್ರ ನಟ, ಸಂಘಟಕ, ಸಾಮಾಜಿಕ ಹೋರಾಟಗಾರ

ನಟ, ರಂಗಕರ್ಮಿ ಪ್ರಕಾಶ್ ಹೆಗ್ಗೋಡು ಇನ್ನಿಲ್ಲ. 58 ವರ್ಷ ವಯಸ್ಸಿನ ಪ್ರಕಾಶ್ ಹೆಗ್ಗೋಡು ಇತ್ತೀಚೆಗಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಸಂಜೆ ನಿಧನರಾಗಿದ್ದಾರೆ.

Advertisment

ಪ್ರಕಾಶ್ ಹೆಗ್ಗೋಡು ಅವರು ರಂಗಭೂಮಿ ಕಲಾವಿದ, ಚಿತ್ರ ನಟ, ಸಂಘಟಕ, ಸಾಮಾಜಿಕ ಹೋರಾಟಗಾರರೂ ಆಗಿದ್ದರು. ಏಸು ಪ್ರಕಾಶ್ ಕಲ್ಲುಕೊಪ್ಪ ಪ್ರಕಾಶ್ ಹೆಗ್ಗೋಡು ಅಂತಲೇ ಖ್ಯಾತರಾಗಿದ್ದರು.

publive-image

ಇದನ್ನೂ ಓದಿ:ಸಾವಿನಲ್ಲೂ ಸಾರ್ಥಕತೆ ಮೆರೆದ ಡೇನಿಯಲ್ ಬಾಲಾಜಿ; ಕಣ್ಣುಗಳನ್ನ ದಾನ ಮಾಡಿ ಬೆಳಕಾದ ನಟ  

ಪ್ರಕಾಶ್ ಹೆಗ್ಗೋಡು ಅವರು ಕನ್ನಡದ ಸಂತ, ಭಾಗ್ಯದ ಬಳೆಗಾರ, ಕಲ್ಪನಾ 2, ನಮ್ಮ ಹುಡುಗರು, ಮಾಡ್ರನ್ ಮಹಾಭಾರತ, ವೀರು ಸಿನಿಮಾಗಳಲ್ಲಿ ನಟಿಸಿದ್ದರು. ಸಾವಿತ್ರಿಬಾಯಿ ಫುಲೆ ಏಕವ್ಯಕ್ತಿ ರಂಗ ಪ್ರಸ್ತುತಿ ಕೈಗೆತ್ತಿಕೊಂಡಿದ್ದರು. ಆದರೆ ಆರೋಗ್ಯ ಏರುಪೇರು ಆಗಿತ್ತು.

Advertisment

ಭಾನುವಾರ ಅಂದ್ರೆ ನಾಳೆ ಬೆಳಗ್ಗೆ 9 ಗಂಟೆಯಿಂದ ಕಲ್ಲುಕೊಪ್ಪದ (ಪುರಪ್ಪೇಮನೆ) ಸ್ವಗೃಹದಲ್ಲಿ ಪ್ರಕಾಶ್ ಹೆಗ್ಗೋಡು ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ರಂಗ ನಮನದ ಮೂಲಕ ಅಗಲಿದ ರಂಗಕರ್ಮಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment