ವಿವಾದಗಳ ಚೆಲುವೆ ಈಗ ಎಲ್ಲವನ್ನೂ ತ್ಯಜಿಸಿದ ಸಾಧ್ವಿ; ಮಮತಾ ಕುಲಕರ್ಣಿ ಸನ್ಯಾಸಿ ಆಗಿದ್ದು ಯಾಕೆ?

author-image
admin
Updated On
ಮಹಾಕುಂಭಮೇಳದಿಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ ಉಚ್ಛಾಟನೆ; ಕಾರಣವೇನು?
Advertisment
  • 23 ವರ್ಷಗಳಿಂದ್ಲೂ ತಪಸ್ಸು ಮಾಡಿದ್ರಾ ನಟಿ ಮಮತಾ ಕುಲಕರ್ಣಿ?
  • ಯಮೈ ಮಮತಾನಂದ ಗಿರಿ ದೀಕ್ಷೆಗೂ ಮುನ್ನ ಬಿಕ್ಕಳಿಸಿ ಅತ್ತಿದ್ದು ಯಾಕೆ?
  • ಕಿನ್ನರ ಅಖಾಡದ ಮಹಾಮಂಡಲೇಶ್ವರ ಪಟ್ಟವೂ ದಕ್ಕಿದ್ದು ಹೇಗೆ?
ಬಾಲಿವುಡ್​​ನಲ್ಲಿ ಧೂಳೆಬ್ಬಿಸಿದ್ದ ಈ ಬ್ಯೂಟಿ ಪ್ರತಿ ಸಲ ಸನ್ಯಾಸಿ ಅಂದ್ಳು ಅನ್ನೋ ಸುದ್ದಿ ಬರ್ತಿತ್ತು. ಆದರೆ ಇದೀಗ ನಿಜಕ್ಕೂ ಸನ್ಯಾಸಿನಿಯೇ ಆಗಿದ್ದಾರೆ. ಅಷ್ಟೇ ಅಲ್ಲ, ಕಿನ್ನರ ಅಖಾಡದ ಮಹಾಮಂಡಳೇಶ್ವರ ಆಗಿದ್ದಾರೆ. ಅಂದಕ್ಕೆ ಅಂಬಾಸಿಡರ್ ಆಗಿದ್ದ, ಸೌಂದರ್ಯಕ್ಕೆ ಶೋ ಕೇಸ್ ಆಗಿದ್ದ ಅಂಡರ್​ವರ್ಲ್ಡ್​​ನಲ್ಲೂ ಅಡ್ರೆಸ್​​ ಮಾಡಿದ್ದ ವಿವಾದಗಳ ವಿಧಾತೆ 52ನೇ ವಯಸ್ಸಲ್ಲೂ ಮುಕ್ಕಾಗದ ಅಂದದಿಂದ್ಲೇ ಆಕರ್ಷಿಸುತ್ತಿದ್ದ ಚೆಲುವೆ ಏಕಾಏಕಿ ಸನ್ಯಾಸಿ ಆಗಿದ್ದೇಕೆ?
ಮಮತಾ ಕುಲಕರ್ಣಿ.. ಬಾಲಿವುಡ್​​ನ ಈ ಖ್ಯಾತ ನಟಿ ಕನ್ನಡದಲ್ಲೂ ಸಹ ಡಾ. ವಿಷ್ಣುವರ್ಧನ್ ಹಾಗೂ ಅಕ್ಷಯ್​ ಕುಮಾರ್​ ಒಟ್ಟಿಗೆ ನಟಿಸಿದ್ದ ವಿಷ್ಣು ವಿಜಯ ಸಿನಿಮಾ ನಿಮಗೆ ನೆನಪಿರಬಹುದು. ಶಾರುಖ್ ಖಾನ್-ಸಲ್ಮಾನ್ ಖಾನ್ ಒಟ್ಟಿಗೆ ನಟಿಸಿದ ಮೊದಲ ಮತ್ತು ಈಗಲೂ ಕಲ್ಟ್ ಸಿನಿಮಾ ಎಂದೇ ಕರೆಸಿಕೊಳ್ಳುವ ‘ಕರಣ್ ಅರ್ಜುನ್’ ಸಿನಿಮಾದಲ್ಲಿ ಮಮತಾ ಕುಲಕರ್ಣಿ ನಾಯಕಿಯಾಗಿ ನಟಿಸಿದ್ದರು.
publive-image
ಮಮತಾ ಕುಲಕರ್ಣಿ, ಸಲ್ಮಾನ್ ಖಾನ್​ಗೆ ಜೋಡಿಯಾಗಿದ್ದರು. ಅದು ಮಾತ್ರವೇ ಅಲ್ಲದೆ ‘ಆಶಿಕ್ ಆವಾರ’ ಆಮಿರ್ ಖಾನ್ ಜೊತೆಗೆ ‘ಬಾಜಿ’, ಸೂಪರ್ ಹಿಟ್ ಸಿನಿಮಾ ‘ಚೈನಾ ಗೇಟ್’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ರು. ಪದೇ ಪದೇ ಸನ್ಯಾಸಿ ಆದಳು ಅಂತ ಸುದ್ದಿ ಆದ ಪಡ್ಡೆ ಹುಡುಗರ ಕನಸಿನ ರಾಣಿ ಕೊನೆಗೂ ಸನ್ಯಾಸಿನಿ ಆಗಿಬಿಟ್ಟಿದ್ದಾರೆ. ಸಾಧ್ವಿ ಆಗಿ ದೀಕ್ಷೆ ತೆಗೆದುಕೊಂಡು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದಾರೆ. ಮಾಜಿ ನಟಿ, ಹಾಲಿ ಮಹಾಮಂಡಳೇಶ್ವರಿ ಮಮತಾ ಕುಲಕರ್ಣಿ.
publive-image
ಮಮತಾ ಕುಲಕರ್ಣಿ ಸನ್ಯಾಸ ದೀಕ್ಷೆ ತೊಟ್ಟಿದ್ದು ಏಕೆ?
ನ್ಯೂಸ್​​ಫಸ್ಟ್​ಗೆ ಯಮೈ ಮಮತಾ ಗಿರಿ ಹೇಳಿದ್ದೇನು?
ಮಹಾಕುಂಭಮೇಳದಿಂದ ನಿಮ್ಮ ನ್ಯೂಸ್​​ ಫಸ್ಟ್​ ಗ್ರೌಂಡ್​ ರಿಪೋರ್ಟ್​ ಮೂಲಕ ಅತಿ ರೋಚಕ ಸ್ಟೋರಿಗಳನ್ನು ಹೇಳುತ್ತಾ ಬರುತ್ತಿದೆ. ಅಂತೆಯೇ ಬಾಲಿವುಡ್​ ನಟಿ ಆಗಿದ್ದ ಮಮತಾ ಕುಲಕರ್ಣಿ ಸನ್ಯಾಸ ದೀಕ್ಷೆ ತೊಟ್ಟ ಕೂಡಲೇ ನ್ಯೂಸ್​​ ಫಸ್ಟ್​ ಅವರನ್ನ ಮಾತಾಡಿಸೋ ಪ್ರಯತ್ನ ಮಾಡಿದೆ. ನಮ್ಮ ವಿಶೇಷ ಪ್ರತಿನಿಧಿ ಚಂದ್ರಮೋಹನ್ ನೇರವಾಗಿ ಕಿನ್ನರ ಅಖಾಡದ ಮುಂದೆ ನಿಂತಾಗ ನ್ಯೂಸ್​​ ಫಸ್ಟ್​ ಜೊತೆ ಯಮೈ ಮಮತಾನಂದ ಗಿರಿ ಮಹಾರಾಜ್ ಅಸಲಿ ಸಂಗತಿಗಳನ್ನು ಹಂಚಿಕೊಂಡ್ರು.
publive-image
ಬಾಲಿವುಡ್​ ನಟಿ ಆಗಿದ್ದ ಮಮತಾ ಕುಲಕರ್ಣಿ ಸನ್ಯಾಸ ದೀಕ್ಷೆ ಪಡೆದಿದ್ದಾರೆ.. ಇದೀಗ ಮಮತಾ ಕುಲಕರ್ಣಿ ಯಮೈ ಮಮತಾ ಗಿರಿ ಮಹಾರಾಜ್ ಅಂತ ಹೆಸರನ್ನೂ ಬದಲಿಸಿಕೊಂಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಇತ್ತೀಚೆಗೆ ಜೋರಾಗಿ ಸದ್ದು ಮಾಡ್ತಿರೋ ಕಿನ್ನರ ಅಖಾಡದ ಮಹಾಮಂಡಳೇಶ್ವರ ಪಟ್ಟವನ್ನೂ ದಕ್ಕಿಸಿಕೊಂಡಿದ್ದಾರೆ. ಅದ್ಭುತ ನಟಿ, ಅಂದಗಾತಿ ಸನ್ಯಾಸಿನಿ ಆದ್ಳು ಅಂದ ಕೂಡಲೇ ಎಷ್ಟೋ ಮಂದಿ ಪಡ್ಡೆ ಹುಡುಗರನಿಗೆ ನೋವಾಯ್ತು? ಚಿತ್ರರಸಿಕರಂತೂ ಈಕೆಗೆ ಏನಾಯ್ತು ಅಂತ ಪ್ರಶ್ನಿಸಿದ್ರು. ಇದೇ ಪ್ರಶ್ನೆಗಳನ್ನೇ ನ್ಯೂಸ್​​ ಫಸ್ಟ್​ ಮಮತಾನಂದ ಗಿರಿ ಅವರನ್ನು ಕೇಳಿದಾಗ ಸಿಕ್ಕ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ.
publive-image
ದೀಕ್ಷೆಗೂ ಮುನ್ನ ಬಿಕ್ಕಳಿಸಿ ಅತ್ತಿದ್ದೇಕೆ ಮಮತಾ ಕುಲಕರ್ಣಿ!
ಮಮತಾ ಕುಲಕರ್ಣಿ ಕಟ್ಟ ಕಡೆಯದಾಗಿ 2003ರಲ್ಲಿ ಬೆಂಗಾಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. ಆ ಬಳಿಕ ಚಿತ್ರರಂಗದಿಂದಲೇ ದೂರವಾದ್ರು. ಪದೇ ಪದೇ ಆಧ್ಯಾತ್ಮದ ಹಾದಿ ಹಿಡಿದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಒಂದಷ್ಟು ಫೋಟೋಗಳೂ ಸಹ ಮಮತಾ ಸನ್ಯಾಸಿನಿ ಆಗಿರಬಹುದು ಅನ್ನೋ ಕಥೆ ಹರಿದಾಡುವಂತೆ ಮಾಡ್ತಿದ್ವು.  2016ರಲ್ಲಿ ಈ ನಟಿಯ ಹೆಸರು ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಕೇಳಿ ಬಂದಿತ್ತು. ಭರ್ತಿ 2000 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​ ಕೇಸ್​ ಇದಾಗಿತ್ತು.
ಇದೇ ವೇಳೆಯೇ ಅಂಡರ್​ವರ್ಲ್ಡ್​ನ ಖ್ಯಾತನಾಮರೊಂದಿಗೂ ಮಮತಾಗೆ ಸಂಬಂಧವಿದೆ ಅನ್ನೋ ಸುದ್ದಿ ಹರಿದಾಡಿತ್ತು. ಮುಂಬೈ ಪೊಲೀಸರು ನಟಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡಿದ್ರು. ಆದ್ರೀಗ ಏಕಾಏಕಿ ಮಮತಾ ಕುಲಕರ್ಣಿ ಸನ್ಯಾಸ ದೀಕ್ಷೆ ತೊಟ್ಟಿದ್ದಾರೆ.
publive-image
ಇದೇ ಜನವರಿ 24ರ ಶುಕ್ರವಾರ ರಾತ್ರಿ 8 ಗಂಟೆ ಹೊತ್ತಿಗೆ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಮಮತಾ ಕುಲಕರ್ಣಿ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಲೇ ಸನ್ಯಾಸ ದೀಕ್ಷೆ ತೆಗೆದುಕೊಂಡ್ರು. ಅಷ್ಟಕ್ಕೂ ಸನ್ಯಾಸ ದೀಕ್ಷೆ ಸಂದರ್ಭ ಮಮತಾ ಕುಲಕರ್ಣಿ ಬಿಕ್ಕಳಿಸಿದ್ದೇಕೆ? ಆಧ್ಯಾತ್ಮದ ಬದುಕಿಗೆ ಕಾಲಿಟ್ಟು, ಸನ್ಯಾಸ ದೀಕ್ಷೆ ಪಡೆಯುವಾಗ ಸುಲಭದ ಪ್ರಕ್ರಿಯೆ ಇರೋದಿಲ್ಲ. ಇಂಥಾ ನಿರ್ಧಾರಕ್ಕೇ ಗಟ್ಟಿ ಗುಂಡಿಗೆ ಇರಬೇಕು. ತಮ್ಮದೇ ದೇಹಕ್ಕೆ ಬದುಕಿರುವಾಗಲೇ ಪಿಂಡ ಪ್ರಧಾನ ಮಾಡಬೇಕು. ಇದೆಲ್ಲವನ್ನೂ ಮಾಡುವಾಗ ಮಮತಾ ಕುಲಕರ್ಣಿಯೇ ಅಲ್ಲ ಯಾರೇ ಆದ್ರೂ ಕೂಡ ಕಣ್ಣೀರಿಡ್ತಾರೆ. ಸನ್ಯಾಸ ದೀಕ್ಷೆ ತೊಟ್ಟ ಕೂಡಲೇ ಬಹುದೊಡ್ಡ ಪದವಿ ಕೂಡ ಮಮತಾ ಪಾಲಾಗಿದೆ. ಕಿನ್ನರ ಅಖಾಡದ ಮಹಾಮಂಡಲೇಶ್ವರ ಪಟ್ಟವೂ ದಕ್ಕಿದೆ.
ಇದೀಗ ನಾನು ನನ್ನ ಪಟ್ಟದ ಗುರುವನ್ನಾಗಿ ಲಕ್ಷ್ಮೀ ನಾರಾಯಣ್ ತ್ರಿಪಾಠಿ ಅವರನ್ನು ಆರಿಸಿದ್ದೇನೆ. ಯಾಕಂದ್ರೆ, ಇವತ್ತು ಶುಕ್ರವಾರ, ಎಲ್ಲಕ್ಕೂ ಮೊದಲು ಇವತ್ತು ಮಹಾಕಾಳಿಯ ದಿನ. ನಾಳೆ ಮಹಾಮಂಡಳೇಶ್ವರ ಆಗೋದಕ್ಕೆ ಎಲ್ಲಾ ಸಿದ್ಧತೆ ನಡೀತಿವೆ. ಇವತ್ತು ಮಹಾಶಕ್ತಿಯೇ ನನಗೆ ಆದೇಶಿಸಿದ್ದಾಳೆ. ನಾನು ಇಂದು ಯಾವ ಆಯ್ಕೆ ಮಾಡಿದ್ದೀನೋ? ಲಕ್ಷ್ಮೀ ನಾರಾಯಣ್ ತ್ರಿಪಾಠಿ ಅವರು ಸಾಕ್ಷಾತ್​ ಅರ್ಧನಾರೀಶ್ವರನ ಪ್ರತಿರೂಪ. ಅರ್ಧನಾರೀಶ್ವರನ ಅಮೃತ ಹಸ್ತದಿಂದ ನನ್ನ ಪಟ್ಟಾಭಿಷೇಕ ನಡೆಯಲಿದೆ.
- ಯಮೈ ಮಮತಾನಂದ ಗಿರಿ, ಮಹಾಮಂಡಳೇಶ್ವರ, ಕಿನ್ನರ ಅಖಾ
ಕಿನ್ನರ ಅಖಾಡವನ್ನು ಸ್ಥಾಪಿಸಿದ ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರೊಂದಿಗೆ ಹತ್ತು ವರ್ಷಗಳಿಂದ್ಲೂ ಸಂಪರ್ಕದಲ್ಲೇ ಇದ್ದ ಮಮತಾ ಕುಲಕರ್ಣಿ ಕೊನೆಗೂ ಸನ್ಯಾಸ ದೀಕ್ಷೆ ತೊಟ್ಟಿದ್ದಾರೆ. ತಮಗೂ ತ್ರಿಪಾಠಿ ಅವರಿಗೂ ನಡುವೆ ಇದ್ದ ಆಧ್ಯಾತ್ಮದ ಸಂಬಂಧದ ಬಗ್ಗೆಯೂ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಾಕ್ಷಾತ್ ಅರ್ಧನಾರೀಶ್ವರನ ಸ್ವರೂಪವೇ ಆದ ಲಕ್ಷ್ಮೀ ನಾರಾಯಣ ತ್ರಿಪಾಠಿ ಅಮೃತಹಸ್ತದಿಂದ ಸನ್ಯಾಸ ದೀಕ್ಷೆ ಹಾಗೂ ಮಹಾಮಂಡಳೇಶ್ವರ ಪಟ್ಟಾಭಿಷೇಕ ಆಗಿದ್ದು ನನ್ನ ಸೌಭಾಗ್ಯ ಅಂತ್ಲೇ ಹೇಳಿಕೊಂಡಿದ್ದಾರೆ. ಆದರೆ, ಯಮೈ ಮಮತಾನಂದಗಿರಿ ಮಹಾರಾಜ್ ಏಕಾಏಕಿ ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದೇಕೆ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
publive-image
23 ವರ್ಷಗಳಿಂದ್ಲೂ ತಪಸ್ಸು ಮಾಡಿದ್ರಾ ಮಮತಾ?
20 ವರ್ಷಗಳ ಬ್ರಹ್ಮಚರ್ಯೆ ಪಾಲನೆ ಅಂದಿದ್ದು ಏಕೆ? 
ಮಮತಾ ಕುಲಕರ್ಣಿ ಏಕಾಏಕಿ ಸನ್ಯಾಸಿನಿ ಆಗಿಲ್ಲ. ಈ ಹಿಂದೆ ಸನ್ಯಾಸಿನಿ ಆದ್ಳು ಅಂತ ಯಾವ ಫೋಟೋ ವೈರಲ್ ಆಗಿತ್ತೋ? ಅದ್ಯಾವ ಸುದ್ದಿ ಸೃಷ್ಟಿ ಆಗಿತ್ತೋ? ಆವಾಗಿನಿಂದಲೇ ಮಮತಾ ಕುಲಕರ್ಣಿ ಸನ್ಯಾಸಿನಿಯಂತೆಯೇ ಬದುಕೋ ಪ್ರಯತ್ನ ಮಾಡಿದ್ರಂತೆ.. ಈ ವಿಚಾರವನ್ನು ಖುದ್ದು ಯಮೈ ಮಮತಾನಂದ ಗಿರಿ ಹೇಳಿಕೊಂಡಿದ್ದಾರೆ.
publive-image
ಏಕಾಏಕಿ ಸನ್ಯಾಸ ದೀಕ್ಷೆ ಪಡೆದಿಲ್ಲ. 23 ವರ್ಷಗಳಿಂದ ತಪಸ್ಸು ಆಚರಿಸಿದ್ದೀನಿ. ಧ್ಯಾನ ಮಾಡಿದ್ದೀನಿ. ಧಾರಣೆ, ಪ್ರತ್ಯಾರ ಎಲ್ಲವನ್ನೂ ಮಾಡಿದ್ದೀನಿ. 20 ವರ್ಷಗಳಿಂದ ಬ್ರಹ್ಮಚರ್ಯೆಯನ್ನೂ ನಿಭಾಸಿದ್ದೀನಿ. ಒಲಿಪಿಂಕ್​​ಗೆ ಹೇಗೆ ಸ್ಪರ್ಧಿಗಳು ಸಜ್ಜಾಗುತ್ತಾರೋ? ಅದೇ ರೀತಿಯಲ್ಲೇ ಮಹಾತಪಸ್ಸು ಆಚರಿಸಿದ ಮೇಲೆ ಮಹಾಮಂಡಳೇಶ್ವರಆಗಿದ್ದೀನಿ. 23 ವರ್ಷಗಳ ತಪಸ್ಸಿನ ಫಲವಾಗಿ ನನ್ನ ಗುರು, ನನ್ನ ದೈವ ಮಹಾಕಾಳ ಹಾಗೂ ಮಹಾಕಾಳಿ ಆಶೀರ್ವಾದಿಂದಾಗಿ ಮಹಾಮಂಡಳೇಶ್ವರ ಆಗಿ ಘೋಷಿತಗೊಂಡಿದ್ದೇನೆ. ಇದು ಒಂದು ಪ್ರಶಸ್ತಿಯಂತೆ, ಪ್ರಮಾಣ ಪತ್ರದಂತೆ, ತಪಸ್ಸಿನ ಪೂರ್ಣಾಹುತಿಯಂತೆ ನೋಡುತ್ತೇನೆ.
- ಯಮೈ ಮಮತಾನಂದ ಗಿರಿ, ಮಹಾಮಂಡಳೇಶ್ವರ, ಕಿನ್ನರ ಅಖಾಡ

ಕಳೆದ 23 ವರ್ಷಗಳ ಹಿಂದಿನಿಂದ್ಲೂ ಸಹ ತಪಸ್ಸು ಮಾಡುತ್ತಲೇ ಬದುಕುತ್ತಿದ್ದರಂತೆ ಮಮತಾ ಕುಲಕರ್ಣಿ. ಕಿನ್ನರ ಅಖಾಡಕ್ಕೆ ಸೇರೋದಕ್ಕೂ ಮುಂಚೆ ಜುನಾ ಅಖಾಡಕ್ಕೆ ಸೇರಿದ್ರು. ಅಲ್ಲಿ ತಮ್ಮ ದೀಕ್ಷಾ ಗುರು ಕಾಲವಾದ ಬಳಿಕ ಗುರು ಹಾಗೂ ಗುರಿ ಇಲ್ಲದೇ ಕಿನ್ನರ ಅಖಾಡದ ತ್ರಿಪಾಠಿ ಅವರನ್ನು ಸಂಪರ್ಕಿಸಿದ್ರಂತೆ. ಹಾಗಾಗಿಯೇ ಇದೀಗ ತಮಗೆ ಸಿಕ್ಕಿರೋ ಮಹಾಮಂಡಳೇಶ್ವರ ಪಟ್ಟವೂ ಸಹ 23 ವರ್ಷಗಳ ಸುದೀರ್ಘ ಆಧ್ಯಾತ್ಮದ ಪರೀಕ್ಷೆಗಳಿಗೆ ಸಿಕ್ಕ ಪ್ರಶಸ್ತಿ ಹಾಗೂ ಪ್ರಶಸ್ತಿ ಪತ್ರದಂತೆ ಇದನ್ನು ಭಾವಿಸುತ್ತೇನೆ ಅಂತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 
Advertisment