/newsfirstlive-kannada/media/post_attachments/wp-content/uploads/2025/06/Filmmaker.jpg)
ಗುಜರಾತ್ನಲ್ಲಿ ಚಲನಚಿತ್ರ ನಿರ್ಮಾಪಕರ ನಾಪತ್ತೆ ಪ್ರಕರಣ ಸಂಚಲನ ಸೃಷ್ಟಿಸಿದೆ. ಅದಕ್ಕೆ ಕಾರಣ ಅಹ್ಮದಾಬಾದ್ನಲ್ಲಿ ನಡೆದ ವಿಮಾನ ದುರಂತ ಪ್ರಕರಣ. ಈ ದುರ್ಘಟನೆಯಲ್ಲಿ ಅವರೂ ಕೂಡ ಜೀವ ಕಳೆದುಕೊಂಡಿರಬಹುದು ಎಂಬ ಅನುಮಾನ ಶುರುವಾಗಿದೆ.
ನರೋಡಾ ನಿವಾಸಿ ಮಹೇಶ್ ಕಲವಾಡಿಯಾ (Mahesh Kalawadia) ನಾಪತ್ತೆ ಆಗಿರುವ ಸಿನಿಮಾ ನಿರ್ಮಾಪಕ. ಇವರು ಮಹೇಶ್ ಜೈರ್ವಾಲಾ ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ಸಿನಿಮಾ ನಿರ್ಮಾಣದ ಜೊತೆ ಕೆಲವು ಆಲ್ಬಂ ಹಾಡುಗಳಿಗೆ ನಿರ್ದೇಶನ ಕೂಡ ಮಾಡಿದ್ದಾರೆ. ಇವರು, ವಿಮಾನ ದುರಂತ ನಡೆದ ದಿನ, ಒಬ್ಬರನ್ನು ಭೇಟಿಯಾಗಲು ಲಾ ಗಾರ್ಡನ್ ಪ್ರದೇಶಕ್ಕೆ ಹೋಗಿದ್ದರು. ನಂತರ ಮತ್ತೆ ವಾಪಸ್ ಬಂದಿಲ್ಲ ಎಂದು ಅವರ ಪತ್ನಿ ಹೇಟಲ್ ದೂರು ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಪ್ರಯಾಣಿಕರೇ ಎಚ್ಚರ.. ಇಂದಿನಿಂದ ನಗರದಾದ್ಯಂತ ಬೈಕ್ ಟ್ಯಾಕ್ಸಿಗಳು ಬ್ಯಾನ್!
ಪತ್ನಿ ಹೇಳ್ತಿರೋದು ಏನು..?
ನನ್ನ ಪತ್ನಿ ಅಂದು ಮಧ್ಯಾಹ್ನ 1.14ಕ್ಕೆ ಫೋನ್ ಮಾಡಿದ್ದರು. ಮೀಟಿಂಗ್ ಮುಗಿದಿದೆ. ನಾನು ಮನೆಗೆ ಬರ್ತಿದ್ದೀನಿ. ಕೊನೆಯಲ್ಲಿ ಅವರು ಮನೆಗೆ ವಾಪಸ್ ಬರಲಿಲ್ಲ. ನಾನು ಫೋನ್ ಮಾಡಿದೆ. ಅವರ ಫೋನ್ ಸ್ವಿಚ್ಡ್ಆಫ್ ಎಂದು ಬಂದಿದೆ. ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಪೊಲೀಸರು ಫೋನ್ ಕೊನೆಯ ಲೊಕೇಷನ್ ಹುಡುಕಿದಾಗ ವಿಮಾನ ದುರಂತ ನಡೆದ ಸ್ಥಳದಿಂದ 700 ಮೀಟರ್ ಆಸುಪಾಸಿನಲ್ಲಿ ಪತ್ತೆಯಾಗಿದೆ.
ಅವರ ಫೋನ್ ಮಧ್ಯಾಹ್ನ 1.40 ಸುಮಾರಿಗೆ ಸ್ವಿಚ್ಡ್ ಆಫ್ ಆಗಿದೆ. ಅವರ ಸ್ಕೂಟರ್, ಮೊಬೈಲ್ ಫೋನ್ ಕೂಡ ಮಿಸ್ ಆಗಿದೆ. ಅವರು ಮನೆಗೆ ಇನ್ನೂ ಬಂದಿಲ್ಲ. ಹೀಗಾಗಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಅವರೂ ಒಬ್ಬರೇ ಎಂದು ತಿಳಿದುಕೊಳ್ಳಲು ಡಿಎನ್ಎ ಸ್ಯಾಂಪಲ್ ನೀಡಿದ್ದೇವೆ ಎಂದು ಹೇಟಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದಿಂದ ದೇಶದ ಎಂಟು ಸಂಸದರು, ಕುಟುಂಬಸ್ಥರು ಜಸ್ಟ್ ಮಿಸ್..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ