newsfirstkannada.com

ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಭಾರೀ ಏರಿಕೆ.. ರಾಜಕೀಯ ಪಕ್ಷಗಳ ಲೆಕ್ಕಾಚಾರ ಉಲ್ಟಾ-ಪಲ್ಟಾ..!

Share :

Published May 1, 2024 at 9:51am

Update May 1, 2024 at 10:20am

    ವಿಪಕ್ಷಗಳ ಆಘಾತಕ್ಕೆ ತಳ್ಳಿದ ಚುನಾವಣಾ ಆಯೋಗದ ಮತ ಪ್ರಮಾಣ

    ತಡವಾಗಿ ಪ್ರಕಟಿಸಿದ ಮತದಾನದ ಶೇಕಡಾವಾರು ಅಂಕಿ ಅಂಶಗಳು

    ಏಪ್ರಿಲ್​​ 19 ಮತ್ತು 26ರಂದು ನಡೆದ ಚುನಾವಣೆ ಮತ ಪ್ರಮಾಣ ಜಿಗಿತ

ದೇಶದಲ್ಲಿ 7 ಹಂತಗಳಲ್ಲಿ ಮತಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. 7 ಹಂತಗಳಲ್ಲಿ ಈಗಾಗಲೇ 2 ಹಂತದ ಮತಹಬ್ಬಕ್ಕೆ ತೆರಬಿದ್ದಿದೆ. ಆದ್ರೆ ಏಪ್ರಿಲ್​​​ 19 ಮತ್ತು ಏಪ್ರಿಲ್ 26 ರಂದು ನಡೆದ ಚುನಾವಣೆ ಮತ ಪ್ರಮಾಣ ಜಿಗತ ಕಂಡಿದೆ. ಆಯೋಗ ತಡವಾಗಿ ಪ್ರಕಟಿಸಿದ ಮತದಾನದ ಶೇಕಡಾವಾರು ಅಂಕಿ ಅಂಶಗಳು ರಾಜಕೀಯ ಬಿಸಿ ಏರಿಸಿದೆ.

ದೇಶದ ದಶ ದಿಕ್ಕುಗಳಲ್ಲೂ ಲೋಕಸಭಾ ಚುನಾವಣಾ ಕಾವು ರಂಗೇರಿದೆ.. ಬೇಸಿಗೆ ದಗೆ ಹೆಚ್ಚಾದಂತೆ ಚುನಾವಣಾ ಬಿಸಿ ಕೂಡ ದಿನದಿಂದ ದಿನಕ್ಕೆ ಏರಿಕೆ ಆಗ್ತಿದೆ. ಈಗಾಗಲೇ 2 ಹಂತದ ಚುನಾವಣಾ ಪರ್ವ ಮುಗಿದು 3ನೇ ಚುನಾವಣೆಗೆ ಅಖಾಡ ಸಜ್ಜಾಗ್ತಿದೆ. ಅತಿರಥ ಮಹಾರಥರು ಪ್ರಚಾರ ಕಣದಲ್ಲಿ ಅಬ್ಬರಿಸ್ತಿದ್ದಾರೆ. ಈ ಮಧ್ಯೆ ಚುನಾವಣೆ ಆಯೋಗ ಪ್ರಕಟಿಸಿದ ಮೊದಲ 2 ಹಂತದ ಶೇಕಡಾವಾರು ಮತಪ್ರಮಾಣ ಅಚ್ಚರಿಗೆ ಕೆಡವಿದೆ.

2 ಹಂತಗಳ ಎಲೆಕ್ಷನ್​​ನಲ್ಲಿ 8.85 ಶೇಕಡಾವಾರು ಮತ ಏರಿಕೆ

ಏಪ್ರಿಲ್ 19 ರಿಂದ ಲೋಕಸಭೆ ಚುನಾವಣೆ ಮತದಾನ ಆರಂಭವಾಗಿದೆ. ಒಟ್ಟು 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ 2 ಚರಣದ ಮತದಾನ ಮುಕ್ತಾಯವಾಗಿದೆ. 3ನೇ ಹಂತ ಮೇ 7ಕ್ಕೆ ನಡೆಯಲಿದೆ. ಆದ್ರೆ, ಏಪ್ರಿಲ್​​​ 19 ಮತ್ತು ಏಪ್ರಿಲ್ 26 ರಂದು ನಡೆದ ಚುನಾವಣೆ ಮತ ಪ್ರಮಾಣ ಏಕಾಏಕಿ ಜಿಗತ ಕಂಡಿದೆ. ಆಯೋಗ ತಡವಾಗಿ ಪ್ರಕಟಿಸಿದ ಮತದಾನದ ಶೇಕಡಾವಾರು ಅಂಕಿಅಂಶಗಳು ರಾಜಕೀಯ ಬಿಸಿ ಏರಿಸಿದೆ.

ಲೋಕದಲ್ಲಿ ಮತ ಜಿಗಿತ?

  • ಏಪ್ರಿಲ್​​ 19 ರಂದು ದೇಶದಲ್ಲಿ ಮೊದಲ ಹಂತದ ಚುನಾವಣೆ
  • ಈ ಮೊದಲು ಮೊದಲ ಹಂತದಲ್ಲಿ ಶೇ.63 ರಷ್ಟು ಮತದಾನ
  • ಈಗ ಮೊದಲ ಹಂತದಲ್ಲಿ ಶೇ.66.14ರಷ್ಟು ಮತದಾನ ಎಂದಿದೆ
  • ಮೊದಲ ಹಂತದಲ್ಲಿ ಒಟ್ಟು 3.14 ಶೇಕಡಾ ಮತ ಏರಿಕೆ ಕಂಡಿದೆ
  • 2ನೇ ಹಂತದಲ್ಲಿ ಮೊದಲು ಶೇ.61 ರಷ್ಟು ಮತದಾನ ಮಾಹಿತಿ
  • 2ನೇ ಹಂತದಲ್ಲಿ ಶೇ.66.71 ರಷ್ಟು ಮತದಾನದ ಅಂಕಿ-ಅಂಶ
  • ಎರಡನೇ ಹಂತದಲ್ಲಿ 5.71 ರಷ್ಟು ದೊಡ್ಡ ಮಟ್ಟದಲ್ಲಿ ಮತ ಜಿಗಿತ

ಸಾಮಾನ್ಯವಾಗಿ ಮತದಾನದ ಶೇಕಡಾವಾರು ಅಂಕಿಅಂಶವನ್ನು 24 ಗಂಟೆಗಳ ಒಳಗೆ ಬಿಡುಗಡೆ ಮಾಡಲಾಗುತ್ತೆ.. ಆದ್ರೆ, ಮೊದಲ ಹಂತಕ್ಕೆ 11 ದಿನ, ಎರಡನೇ ಹಂತಕ್ಕೆ ನಾಲ್ಕು ದಿನ ವಿಳಂಬವಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಅಂಕಿಅಂಶಗಳ ಬಿಡುಗಡೆಗೆ ಯಾಕಿಷ್ಟು ವಿಳಂಬ ಅಂತ ಆಯೋಗವನ್ನ ವಿಪಕ್ಷಗಳು ಪ್ರಶ್ನಿಸಿವೆ.

2014 ರವರೆಗೆ ಪ್ರತಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆಯು ಇಸಿಐ ವೆಬ್‌ಸೈಟ್‌ನಲ್ಲಿ ಲಭ್ಯವಿತ್ತು.. ಆದ್ರೆ, ಈಗ ಆ ಮಾಹಿತಿ ಸಿಗ್ತಿಲ್ಲ ಅನ್ನೋ ಆರೋಪವನ್ನ ಸಿಪಿಎಂ ಮಾಡ್ತಿದೆ. ಮತ ಎಣಿಕೆ ವೇಳೆ ಒಟ್ಟು ಮತದಾರರ ಸಂಖ್ಯೆ ಬದಲಾಗುವ ಸಾಧ್ಯತೆ ಇದ್ಯಾ ಅನ್ನೋ ಅನುಮಾನ ಹೊರಹಾಕಿದೆ. ಮತದಾನದ ಅಂಕಿ-ಅಂಶಗಳ ಏರಿಕೆ, ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಭಾರೀ ಏರಿಕೆ.. ರಾಜಕೀಯ ಪಕ್ಷಗಳ ಲೆಕ್ಕಾಚಾರ ಉಲ್ಟಾ-ಪಲ್ಟಾ..!

https://newsfirstlive.com/wp-content/uploads/2024/04/bigg-boss-vote2.jpg

Load More