ಪೋಪ್ ಫ್ರಾನ್ಸಿಸ್‌ಗೆ ಅಂತಿಮ ವಿದಾಯ.. ವ್ಯಾಟಿಕನ್ ಸಿಟಿಯ ಟಾಪ್ 10 ಫೋಟೋಗಳು ಇಲ್ಲಿವೆ!

author-image
admin
Updated On
ಪೋಪ್ ಫ್ರಾನ್ಸಿಸ್‌ಗೆ ಅಂತಿಮ ವಿದಾಯ.. ವ್ಯಾಟಿಕನ್ ಸಿಟಿಯ ಟಾಪ್ 10 ಫೋಟೋಗಳು ಇಲ್ಲಿವೆ!
Advertisment
  • ಕ್ರೈಸ್ತ ಧರ್ಮದ ಪರಮೋಚ್ಛ ನಾಯಕ ಪೋಪ್ ಫ್ರಾನ್ಸಿಸ್‌ಗೆ ವಿದಾಯ
  • ವ್ಯಾಟಿಕನ್ ಸಿಟಿಯಲ್ಲಿ ವಿಶ್ವದ 2 ಲಕ್ಷಕ್ಕೂ ಅಧಿಕ ಜನರಿಂದ ಶ್ರದ್ಧಾಂಜಲಿ
  • ಭಾರತದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಹಲವರು ಭಾಗಿ

ಕ್ರೈಸ್ತ ಧರ್ಮದ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವ್ಯಾಟಿಕನ್‌ನ ಬೆಸಿಲಿಕಾದ ಸಾಂಟಾ ಮಾರಿಯಾ ಮ್ಯಾಗಿಯೋರ್‌ನಲ್ಲಿ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ ನಡೀತಿದೆ.

publive-image

ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದಾರೆ. ವಿಶ್ವದ ಗಣ್ಯಾತಿಗಣ್ಯರು ಪೋಪ್ ಫ್ರಾನ್ಸಿಸ್​ಗೆ ಅಂತಿಮ ಸಲ್ಲಿಸುತ್ತಿದ್ದಾರೆ. ಕಾರ್ಡಿನಲ್ಸ್ ಕಾಲೇಜಿನ ಡೀನ್ ಜಿಯೋವಾನಿ ಬಟಿಸ್ಟಾ ರೇ ಅಧ್ಯಕ್ಷತೆಯಲ್ಲಿ ಅಂತಿಮ ಯಾತ್ರೆಗೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ.

publive-image

ಪೋಪ್ ಫ್ರಾನ್ಸಿಸ್ ಅವರ ಅಂತಿಮ ದರ್ಶನ ಪಡೆಯಲು ವಿಶ್ವದ ಮೂಲೆ ಮೂಲೆಗಳಿಂದ ಜನ ಆಗಮಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಕ್ರೈಸ್ತ ಧರ್ಮದ ಪರಮೋಚ್ಛ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

publive-image

ಜಗತ್ತಿನ ಸುಮಾರು 160 ದೇಶಗಳ ಗಣ್ಯರು ಅಗಲಿದ ಧರ್ಮಗುರುವಿನ ಅಂತಿಮ ದರ್ಶನ ಪಡೆದಿದ್ದಾರೆ.

publive-image

ಇದನ್ನೂ ಓದಿ: 20 ವರ್ಷಗಳಿಂದ ನಿದ್ರಿಸುತ್ತಿರುವ ರಾಜಕುಮಾರನಿಗೆ 36ನೇ ವರ್ಷದ ಹುಟ್ಟುಹಬ್ಬ; ಯಾರಿವನು? 

ಭಾರತದ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವ ಕಿರಣ್‌ ರಿಜಿಜು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್​ಕಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸೇರಿದಂತೆ ಹಲವು ರಾಷ್ಟ್ರಗಳ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.

publive-image

ಪೋಪ್ ಫ್ರಾನ್ಸಿಸ್​ಗೆ ಗೌರವ ನಮನ!
ರಾಷ್ಟ್ರಪತಿ ದ್ರೌಪದಿ ಮುರ್ಮು ಪೋಪ್​ ಫ್ರಾನ್ಸಿಸ್​ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ವ್ಯಾಟಿಕನ್‌ನ ಬೆಸಿಲಿಕಾದ ಸಾಂಟಾ ಮಾರಿಯಾ ಮ್ಯಾಗಿಯೋರ್‌ನಲ್ಲಿ ಪೋಪ್​ ಫ್ರಾನ್ಸಿಸ್​ಗೆ ಮುರ್ಮು ಗೌರವ ನಮನ ಸಲ್ಲಿಸಿದ್ದಾರೆ.

publive-image

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್​ನಲ್ಲಿ ಟ್ವೀಟ್​ ಮಾಡಿದ್ದಾರೆ. ರಾಷ್ಟ್ರಪತಿಗಳು ಭಾರತದ ಜನರ ಪರವಾಗಿ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಸಮಾಜಕ್ಕೆ ಅವರ ಸೇವೆಯನ್ನ ಜಗತ್ತು ಯಾವಾಗಲೂ ಸ್ಮರಿಸುತ್ತೆ ಅಂತ ಬರೆದುಕೊಂಡಿದ್ದಾರೆ.

publive-image

ಬಿಗಿ ಭದ್ರತೆಯೊಂದಿಗೆ ಅಂತ್ಯಕ್ರಿಯೆ
ಪೋಪ್ ಫ್ರಾನ್ಸಿಸ್‌ ಅಂತ್ಯಕ್ರಿಯೆ ಹಿನ್ನೆಲೆ ಸಾವಿರಾರು ಪೊಲೀಸರು ಮತ್ತು ವಿಶೇಷ ಪಡೆಗಳನ್ನ ನಿಯೋಜಿಸಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿರೋದ್ರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜೊತೆಗೆ ವೈಮಾನಿಕ ಕಣ್ಗಾವಲು ಮತ್ತು ಡ್ರೋನ್ ವಿರೋಧಿ ಮಿಲಿಟರಿ ಘಟಕವನ್ನ ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment