ಕೊನೆಗೂ ಮದುವೆಗೆ ಸಜ್ಜಾದ ಅನುಶ್ರೀ.. ಮುಹೂರ್ತ ಫಿಕ್ಸ್, ಹುಡುಗ ಯಾರು..?

author-image
Ganesh
Updated On
ನಿರೂಪಕಿ ಅನುಶ್ರೀಗೆ ಕೂಡಿ ಬಂತು ಕಂಕಣ ಭಾಗ್ಯ? ಕೊನೆಗೂ ಮದುವೆಗೆ ಡೇಟ್ ಕೊಟ್ರು!
Advertisment
  • ಅನುಶ್ರೀ ಮದುವೆ ಯಾವಾಗ ಅನ್ನೋರಿಗೆ ಸಿಕ್ತು ಸಿಹಿಸುದ್ದಿ
  • ಫ್ಯಾಮಿಲಿ ನೋಡಿದ ಹುಡುಗನ ಜೊತೆ ಅನುಶ್ರೀ ಮದುವೆ
  • ಬೆಂಗಳೂರಲ್ಲಿ ನಡೆಯಲಿದೆ ನಿರೂಪಕಿ ಅನುಶ್ರೀ ಮ್ಯಾರೇಜ್

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ನಟಿ ಅನುಶ್ರೀ ಮದುವೆ ಫಿಕ್ಸ್​ ಆಗಿದೆ. ಇಷ್ಟುದಿನ ಅವರ ಅಭಿಮಾನಿಗಳು ಅನುಶ್ರೀ ಮದುವೆ ಯಾವಾಗ ಎಂದು ಕೇಳುತ್ತಿದ್ದರು. ಕೊನೆಗೂ ನಿರೂಪಕಿ ಶುಭ ಸುದ್ದಿಯನ್ನು ನೀಡಿದ್ದು, ಫ್ಯಾನ್ಸ್ ಖುಷಿಯಾಗಿದ್ದಾರೆ.

ಯಾವಾಗ ಮದುವೆ..?

ಆಗಸ್ಟ್ 28ಕ್ಕೆ ಅನುಶ್ರೀ ಮದುವೆ ನಡೆಯಲಿದೆ. ಬೆಂಗಳೂರು ಮೂಲದ ಕಾರ್ಪೋರೇಟ್ ಉದ್ಯೋಗಿಯನ್ನು ಅನುಶ್ರೀ ವಿವಾಹ ಆಗಲಿದ್ದಾರೆ. ಕುಟುಂಬಸ್ಥರು ನೋಡಿದ ಹುಡುಗನ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಮಾಹಿತಿಗಳ ಪ್ರಕಾರ ಬೆಂಗಳೂರಿನಲ್ಲಿಯೇ ಗ್ರ್ಯಾಂಡ್ ಆಗಿ ಮದುವೆ ನಡೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಾಲ್ತುಳಿತಕ್ಕೆ RCB ನೇರ ಹೊಣೆ ಎಂದ ಸರ್ಕಾರ; ವಿರಾಟ್ ಕೊಹ್ಲಿ ವಿಡಿಯೋ ಬಗ್ಗೆಯೂ ವರದಿಯಲ್ಲಿ ಉಲ್ಲೇಖ

publive-image

ಮಂಗಳೂರಿನ ಸೂರತ್ಕಲ್ ಮೂಲದ ಅನುಶ್ರೀ, ತಮ್ಮ ಚುರುಕಾದ ನಿರೂಪಣೆಯಿಂದ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ‘ಟೆಲಿ ಆಂತ್ಯಕ್ಷರಿ’ ಕಾರ್ಯಕ್ರಮದಿಂದ ವೃತ್ತಿಜೀವನ ಆರಂಭಿಸಿದ ಅನುಶ್ರೀ, ಈಟಿವಿ ಕನ್ನಡದ ‘ಡಿಮ್ಯಾಂಡಪ್ಪೋ ಡಿಮಾಂಡು’ ಕಾರ್ಯಕ್ರಮದ ಮೂಲಕ ಹೆಚ್ಚು ಜನಪ್ರಿಯರಾದರು.

ಕನ್ನಡ ಬಿಗ್ ಬಾಸ್​ನಲ್ಲಿ 76 ದಿನಗಳ ಕಾಲ ಭಾಗವಹಿಸಿದ್ದ ಅನುಶ್ರೀ, ‘ಸುವರ್ಣ ಫಿಲ್ಮ್ ಅವಾರ್ಡ್ಸ್’, ‘ಫಿಲ್ಮ್‌ಫೇರ್ ಅವಾರ್ಡ್ಸ್’ ಮತ್ತು ‘ಎಸ್‌ಐಐಎಂಎ’ನಂತಹ ಪ್ರತಿಷ್ಠಿತ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಬೆಂಕಿಪಟ್ನ, ಉಪ್ಪು ಹುಳಿ ಖಾರ, ಮುರುಳಿ ಮೀಟ್ಸ್ ಮೀರಾ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಷರಿಯಾ ಕಾನೂನಿನಲ್ಲಿ ಬ್ಲಡ್ ಮನಿ ಹೇಗೆ ಕೆಲಸ ಮಾಡ್ತದೆ..? ಈ ಹಿಂದೆ ಕೇರಳದ ವ್ಯಕ್ತಿಯೊಬ್ಬ ಶಿಕ್ಷೆಯಿಂದ ಪಾರಾಗಿದ್ದ..!

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment