Advertisment

ಮದರಂಗಿಯಲ್ಲಿ ತುಂಬಿದ ಡಿವೋರ್ಸ್​ನ ರಂಗು ; ವಿಚ್ಛೇದನ ಕಥೆಯನ್ನು ಮೆಹಂದಿಯಲ್ಲಿ ಹೇಳಿದ ಯುವತಿ!

author-image
Gopal Kulkarni
Updated On
ಮದರಂಗಿಯಲ್ಲಿ ತುಂಬಿದ ಡಿವೋರ್ಸ್​ನ ರಂಗು ; ವಿಚ್ಛೇದನ ಕಥೆಯನ್ನು ಮೆಹಂದಿಯಲ್ಲಿ ಹೇಳಿದ ಯುವತಿ!
Advertisment
  • ಮದರಂಗಿಯಲ್ಲಿ ಅರಳಿನಿಂತ ವಿವಾಹ ವಿಚ್ಛೇದನದ ಚಿತ್ರಣ
  • ಯುವತಿ ಹಾಕಿಕೊಂಡ ಮೆಹಂದಿ ಹೇಳಿತ್ತು ಕರುಣಾಜನಕ ಕಥೆ
  • ಸೋಷಿಯಲ್ ಮೀಡಿಯಾದಲ್ಲಿ ಆ ಮೆಹಂದಿ ಡಿಸೈನ್ ವೈರಲ್

ಮದರಂಗಿ, ಗೋರಂಟಿ, ಮೆಹಂದಿ, ಸಡಗರದ-ಸಂಭ್ರಮದ ಸಮಯದಲ್ಲಿ ಸದಾ ಮನೆಯಲ್ಲಿ ಹಾಜರಿರುವ ಒಂದು ಅಂಗೈ ಅಲಂಕಾರದ ವಸ್ತು. ಮದುವೆ ಅಂದಮೇಲೆ ಅಲ್ಲಿ ಮೆಹಂದಿ ಕಾರ್ಯಕ್ರಮ ಕಡ್ಡಾಯವಾಗಿ ಇರಲೇಬೇಕಾಗುತ್ತದೆ. ಅರಿಷಿನದ ನೀರು ಹಾಕುವ ಮೊದಲೆ ಕೈಯಲ್ಲಿ ರಂಗಾಗಿಗೊಂಡು ಮದುವೆಯ ಸಂಭ್ರಮದ ಗುರುತಾಗಿ ಉಳಿದುಕೊಂಡಿರುತ್ತದೆ ಮದರಂಗಿ.

Advertisment

ಇದನ್ನೂ ಓದಿ:100 ಜನರೊಂದಿಗೆ ಮೆರವಣಿಗೆಯಲ್ಲಿ ಮದುವೆಗೆ ಹೋದವನಿಗೆ ಬಿಗ್‌ ಶಾಕ್.. ಮದುಮಗಳ ಮೇಲೆ ಕೇಸ್‌ ದಾಖಲು!


ಆದ್ರೆ ಇಲ್ಲೊಂದು ವಿಚಿತ್ರ ಕೇಸ್​ ನಡೆದಿದೆ. ಪತಿಗೆ ಡಿವೋರ್ಸ್ ಕೊಟ್ಟ ಯುವತಿ ಕೈಯಲ್ಲಿ ಮದರಂಗಿಯನ್ನು ಹಾಕಿಕೊಂಡು ಅದರ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾಳೆ. Finally Divorced ಎಂದು ಕೂಡ ಕೈಯಲ್ಲಿ ಬರೆದುಕೊಂಡಿರುವ ಯುವತಿ ಹೊಸ ರೀತಿಯಲ್ಲಿ ತನ್ನ ಡಿವೋರ್ಸ್​ ವಿಷಯವನ್ನು ತಿಳಿಸಿದ್ದಾಳೆ

Advertisment

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಈಗ ದೊಡ್ಡ ಸದ್ದು ಮಾಡುತ್ತಿದೆ. ಮೆಹಂದಿ ಹಾಕಿಕೊಂಡಿರುವ ಕೈನ ವಿಡಿಯೋ ಮಾಡಿ ಪೊಸ್ಟ್ ಮಾಡಿರುವ ಯುವತಿ ಮದುವೆಯಾದ ನಂತರ ಅನುಭವಿಸಿದ ನೋವುಗಳನ್ನು ಅದರಲ್ಲಿ ಬರೆದುಕೊಂಡಿದ್ದಾಳೆ. ನಾನು ಸೊಸೆಯಾ ಅಥವಾ ಮನೆಗೆಲಸದವಳಾ? ಎಂದು ಬರೆದುಕೊಂಡಿದ್ದು. ಗಂಡನ ಮನೆಯಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ನೋವುಗಳ ಚಿತ್ರಗಳನ್ನು ಕೂಡ ಮೆಹಂದಿಯಲ್ಲಿ ಚಿತ್ರದ ಮೂಲಕ ತೋರಿಸಿದ್ದಾಳೆ

ಇದನ್ನೂ ಓದಿ:ಪೊಲೀಸರ ಕಠಿಣ ಕ್ರಮ ಹೊಗಳಿದ್ದೇ ತಪ್ಪಾಯ್ತಾ? ಪತ್ನಿಗೆ ತ್ರಿವಳಿ ತಲಾಖ್ ಹೇಳಿದ ಪತಿ! ಆಗಿದ್ದೇನು?

ಗಂಡನ ಮನೆಗೆ ಹೋದ ಮೊದಲ ದಿನದಿಂದಲೇ ನನಗೆ ಸೇವಕಿಯಂತೆ ನೋಡಲಾಗಿದೆ. ಗಂಡನ ಬೆಂಬಲವು ಇಲ್ಲ ಎಂದು ಮದರಂಗಿಯ ಚಿತ್ತಾರದಲ್ಲಿ ಹೇಳಿಕೊಂಡಿದ್ದಾಳೆ. ಆಕೆ ಕಂಡ ಎಲ್ಲಾ ನೋವುಗಳು ಮದರಂಗಿ ಮೂಲಕ ಚಿತ್ರದಲ್ಲಿ ವ್ಯಕ್ತಗೊಂಡಿವೆ. ಮದರಂಗಿಯ ಒಂದೊಂದು ಡಿಸೈನ್​ಗಳು ಕೂಡ ಆಕೆ ಪಟ್ಟಿರವ ವ್ಯಥೆಯ ಕಥೆಯನ್ನ ಹೇಳುತ್ತಿವೆ.

Advertisment

ಈ ಒಂದು ವಿಡಿಯೋ ಸಾಕಷ್ಟು ಜನರನ್ನು ಸೆಳೆದಿದೆ. ಆಕೆ ಕಂಡ ನೋವಿನ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಅನೇಕರು ಮರುಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು. ಮನೆಗೆ ಬರುವ ಸೊಸೆಯನ್ನು ಸೊಸೆಯಂತೆ ನಡೆಸಿಕೊಂಡರೆ ಮಾತ್ರ ಸಂಸಾರಗಳು ಉಳಿಯುತ್ತವೆ. ಮನೆಗೆಲಸದವಳಂತೆ ದುಡಿಸಿಕೊಂಡರೇ ಹೀಗೆಯೇ ಆಗೋದು ಎಂದು ಜನರು ಹೇಳುತ್ತಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment