newsfirstkannada.com

ಕೊನೆಗೂ ಸಿಕ್ಕಿದ್ರು ‘ಕರಿಮಣಿ ಮಾಲೀಕ’ ಹಾಡಿನ ಗಾಯಕಿ! ಇವರು ಹೆಸರು ಬದಲಾಯಿಸಿ ವಿದೇಶದಲ್ಲಿರೋದ್ಯಾಕೆ?

Share :

Published February 21, 2024 at 12:54pm

Update February 21, 2024 at 12:57pm

  25 ವರ್ಷಗಳ ಬಳಿಕ ಜನಪ್ರಿಯತೆಗೆ ಬಂದ ಹಾಡು

  ಇನ್​ಸ್ಟಾ, ಫೇಸ್​ಬುಕ್​, ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​

  ಪ್ರತಿಮಾ ರಾವ್​ ಸದ್ಯ ಎಲ್ಲಿದ್ದಾರೆ? ಅವರ ಈಗಿನ ಹೆಸರೇನು?

ಸಾಮಾಜಿಕ ಜಾಲತಾಣ ತೆರೆದರೆ ಸಾಕು ಸದ್ಯ ಟ್ರೆಂಡಿಂಗ್​ನಲ್ಲಿ ‘ಏನಿಲ್ಲಾ ಏನಿಲ್ಲಾ’ ಹಾಡು ಕಾಣಸಿಗುತ್ತದೆ. ಅದಕ್ಕೆ ತಕ್ಕಂತೆ ಯುವಕ- ಯುವತಿಯರು ರೀಲ್ಸ್​ ಮಾಡಿರುವುದು ಕಾಣಿಸುತ್ತದೆ. ಅಷ್ಟರ ಮಟ್ಟಿದೆ 1999ರ ಹಾಡು ಈಗ ಮತ್ತೆ ಜನಪ್ರಿಯಗೊಂಡಿದೆ. ಆದರೆ ಇಷ್ಟೆಲ್ಲಾ ಟ್ರೆಂಡ್​ ಹುಟ್ಟಿಸಿರುವ ‘ಏನಿಲ್ಲಾ ಏನಿಲ್ಲಾ’ ಹಾಡಿನ ಜೊತೆಗೆ ಅದ್ಭುತ ಕಂಠದಲ್ಲಿ ಹಾಡಿರುವ ಗಾಯಕಿಯ ಬಗ್ಗೆಯೂ ಸಾಮಾಜಿಕ ಜಾಲತಾನದಲ್ಲಿ ಚರ್ಚೆ ನಡೆಯುತ್ತಿದೆ. ಆ ಗಾಯಕಿ ಯಾರು? ಸದ್ಯ ಎಲ್ಲಿದ್ದಾರೆ? ಹೆಸರು ಬದಲಾಯಿಸಿರೋದು ನಿಜವೇ? ಎಂಬೆಲ್ಲಾ ಚರ್ಚೆ ಜೋರಾಗಿದೆ. ಆದರೆ ಇವೆಲ್ಲದಕ್ಕೆ ಉತ್ತರ ನ್ಯೂಸ್​​ಫಸ್ಟ್​ಗೆ ಸಿಕ್ಕಿದೆ.

ರಿಯಲ್​ ಸ್ಟಾರ್​ ಉಪೇಂದ್ರ ಮತ್ತು ಪ್ರೇಮ ನಟನೆಯ ‘ಉಪೇಂದ್ರ’ ಸಿನಿಮಾ ಬಿಡುಗಡೆಗೊಂಡು ಇಂದಿಗೆ 25 ವರ್ಷ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾದ ‘ಏನಿಲ್ಲಾ ಏನಿಲ್ಲಾ’ ಹಾಡು ಮತ್ತೆ ಜನಪ್ರಿಯತೆಗೆ ಬಂದಿದೆ. ಅದಕ್ಕೆ ಪ್ರಮುಖ ಕಾರಣ ಸಾಮಾಜಿಕ ಜಾಲತಾಣವೆಂದರೆ ತಪ್ಪಾಗಲಾರದು. ಇನ್​ಸ್ಟಾಗ್ರಾಂ, ಫೇಸ್​ಬುಕ್​, ಟ್ವಿಟ್ಟರ್, ಯೂಟ್ಯೂಬ್​ ಸೇರಿದಂತೆ ಬಹುತೇಕ ಪ್ಲಾಟ್​ಫಾರ್ಮ್​ಗಳಲ್ಲಿ ಸದ್ಯ ‘ಕರಿಮಣಿ ಮಾಲೀಕ’ ಹಾಡು ಜನಪ್ರಿಯತೆ ಪಡೆದಿದೆ. ಆದರೆ ಇದರ ಜನಪ್ರಿಯತೆಯ ಜೊತೆಗೆ ಅನೇಕರು ಈ ಹಾಡನ್ನು ಹಾಡಿರುವ ಸಿಂಗರ್​ ಯಾರೆಂದು ಹುಡುಕಾಡಿದ್ದಾರೆ. ಆದರೆ  ಉಪೇಂದ್ರ ಸಿನಿಮಾದ ಏನಿಲ್ಲಾ ಹಾಡನ್ನು ಗಾಯಕ ಗುರುಕಿರಣ್​ ಹಾಡಿದರೆ, ಗಾಯಕಿ ಪ್ರತಿಮಾ ರಾವ್​ ಕಂಠದಲ್ಲಿ ಅಂದು ಈ ಹಾಡು ಅದ್ಭುತವಾಗಿ ಮೂಡಿಬಂದಿತ್ತು. ಇಷ್ಟೆಲ್ಲಾ ಹಾಡು 2024ರಲ್ಲಿ ಜನಪ್ರಿಯತೆ ಪಡೆದರು ಪ್ರತಿಮಾ ರಾವ್​ ಸುಳಿವು ಸಿಕ್ಕಿರಲಿಲ್ಲ. ಆದರೀಗ ನ್ಯೂಸ್​ಫಸ್ಟ್​ಗೆ ಅವರ ಮಾಹಿತಿ ಸಿಕ್ಕಿದೆ.

25 ವರ್ಷದ ನಂತರ ಪ್ರತ್ಯಕ್ಷ ಸಿಕ್ಕಿದ್ರು

ಕರಿಮಣಿ ಮಾಲೀಕ ಹಾಡಿನ ಒರಿಜಿನಲ್ ಸಿಂಗರ್ ಪ್ರತಿಮಾ ರಾವ್ ಸದ್ಯ ಅವರು ಭಾರತದಲ್ಲಿಲ್ಲ. ಅಷ್ಟು ಮಾತ್ರವಲ್ಲದೆ, ಈ ಗಾಯಕಿ ತಮ್ಮ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದಾರೆ.

ಹೆಸರು ಬದಲಾಯಿಸಿಕೊಂಡ ಗಾಯಕಿ

ಪ್ರತಿಮಾ ರಾವ್ ಆಸ್ಟ್ರೆಲಿಯಾದಲ್ಲಿ ಸಿಡ್ನಿಯಲ್ಲಿ ವಾಸವಾಗಿದ್ದಾರೆ. ತಮ್ಮ ಹೆಸರನ್ನು ರಾಧಿಕಾ ರಾವ್​ ಎಂದು ಬದಲಾಯಿಸಿಕೊಂಡಿದ್ದಾರೆ. ಸದ್ಯ ಅವರಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಹುಡುಕಾಟ ನಡೆಸುತ್ತಿದ್ದಾರೆ. ಕೊನೆಗೂ ಸಿಡ್ನಿಯಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ನ್ಯೂಸ್​ಫಸ್ಟ್​ಗೆ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಸಿಕ್ಕಿದ್ರು ‘ಕರಿಮಣಿ ಮಾಲೀಕ’ ಹಾಡಿನ ಗಾಯಕಿ! ಇವರು ಹೆಸರು ಬದಲಾಯಿಸಿ ವಿದೇಶದಲ್ಲಿರೋದ್ಯಾಕೆ?

https://newsfirstlive.com/wp-content/uploads/2024/02/Prathima-rao-1.jpg

Load More