BREAKING: ಕೊನೆಗೂ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟಿದ್ದ ಉಗ್ರ ಅರೆಸ್ಟ್​.. ಎಲ್ಲಿ ತಲೆಮರೆಸಿಕೊಂಡಿದ್ದ ಗೊತ್ತಾ?

author-image
AS Harshith
Updated On
BREAKING: ಕೊನೆಗೂ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟಿದ್ದ ಉಗ್ರ ಅರೆಸ್ಟ್​.. ಎಲ್ಲಿ ತಲೆಮರೆಸಿಕೊಂಡಿದ್ದ ಗೊತ್ತಾ?
Advertisment
  • ಬೆಂಗಳೂರನ್ನೇ ನಡುಗಿಸಿದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ
  • ಈ ಬಾಂಬ್​ ಸ್ಫೋಟದಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದರು
  • ಉಗ್ರನಿಗಾಗಿ ಸದಾ ಹೊಂಚುಹಾಕುತ್ತಿದ್ದ NIA ತಂಡ.. ಕೊನೆಗೂ ಸಿಕ್ಕ ಖತರ್ನಾಕ್​

ಬೆಂಗಳೂರು: ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ್ದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಮತ್ತೊಬ್ಬ ಉಗ್ರನ ಬಂಧನವಾಗಿದೆ. ಎನ್ ಐಎ ತನಿಖೆಯಿಂದ ಬಾಂಬ್ ಇಟ್ಟಿದ್ದ ಉಗ್ರನನ್ನು ಅರೆಸ್ಟ್​ ಮಾಡಲಾಗಿದೆ. ಮುಸಾಫೀರ್ ಶಾಜೀನ್ ಹುಸೇನ್ ಎಂಬ ಉಗ್ರ ಬಾಂಬ್​ ಇಟ್ಟವನು ಎಂದು ತಿಳಿದುಬಂದಿದೆ.

ಮುಸಾಫೀರ್ ಶಾಜೀನ್ ಹುಸೇನ್​ನನ್ನು ಉತ್ತರ ಭಾರತದ ರಾಜ್ಯದಲ್ಲಿ ಅರೆಸ್ಟ್ ಮಾಡಲಾಗಿದೆ. ಎನ್ ಐಎ ತಂಡದಿಂದ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಇದನ್ನೂ ಓದಿ: ಹಲವು ಬಾರಿ ಅಬಾರ್ಷನ್​.. 2ನೇ ಪತ್ನಿಗೆ ಮಗು ಆಗುತ್ತೆ ಅಂತ ಕೊಲೆಗೈದ ಪಾಪಿ ಪತಿ

ಎಲ್ಲಿ ತಲೆಮರೆಸಿಕೊಂಡಿದ್ದ ಗೊತ್ತಾ?

ಮುಸಾಫೀರ್ ಶಾಜೀನ್ ಹುಸೇನ್​ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಕಡೆ ತಲೆಮರೆಸಿಕೊಂಡಿದ್ದನು. ಕೊನೆಗೂ ಆತನನ್ನು ಎನ್​ಐಎ ತಂಡ ಬಂಧಿಸಿದೆ. ಉಗ್ರ ಮುಸಾಮೀರ್ ಶಾಜೀನ್ ಹುಸೇನ್ ಜೊತೆ ಮಾಸ್ಟರ್ ಮೈಂಡ್ ಮತೀನಾ ತಾಹಾ ಉಗ್ರನನ್ನು ಕೂಡ ಬಂಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment