ಕೊನೆಗೂ ವಿಕ್ಕಿ ಕೌಶಲ್ ಮನಗೆದ್ದ ಸೀರೆ ನಾರಿ.. ಲೇಡಿ ‘ತೌಬಾ ತೌಬಾ’ ಡ್ಯಾನ್ಸ್‌ಗೆ ಫಿದಾ; ಏನಂದ್ರು ಗೊತ್ತಾ?

author-image
admin
Updated On
ಕೊನೆಗೂ ವಿಕ್ಕಿ ಕೌಶಲ್ ಮನಗೆದ್ದ ಸೀರೆ ನಾರಿ.. ಲೇಡಿ ‘ತೌಬಾ ತೌಬಾ’ ಡ್ಯಾನ್ಸ್‌ಗೆ ಫಿದಾ; ಏನಂದ್ರು ಗೊತ್ತಾ?
Advertisment
  • ತೌಬಾ ತೌಬಾ.. ಎಲ್ಲಿ ನೋಡಿದ್ರೂ ತೌಬಾ ತೌಬಾ ಹಾಡಿನ ಹವಾ!
  • ಮಕ್ಕಳೊಂದಿಗೆ ತೌಬಾ ತೌಬಾಗೆ ನೃತ್ಯ ಮಾಡಿದ ಮಹಿಳೆ ವಿಡಿಯೋ
  • ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ನೋಡಿದ ವಿಕ್ಕಿ ಕೌಶಲ್ ಹೇಳಿದ್ದೇನು?

ತೌಬಾ ತೌಬಾ.. ತೌಬಾ ತೌಬಾ.. ಈಗ ಎಲ್ಲಿ ನೋಡಿದ್ರೂ ಈ ತೌಬಾ ತೌಬಾ ಹಾಡಿನದ್ದೇ ಹವಾ. ಸೋಷಿಯಲ್ ಮೀಡಿಯಾದಲ್ಲಂತೂ ಈ ಸಾಂಗ್‌ ಸಖತ್ ವೈರಲ್ ಆಗಿದೆ. ಚಿಕ್ಕ ಹುಡುಗರಿಂದ ಹಿಡಿದು ಪ್ರತಿಯೊಬ್ಬರು ಈ ತೌಬಾ ತೌಬಾ ಡ್ಯಾನ್ಸ್‌ಗೆ ಸ್ಟೆಪ್ ಹಾಕುತ್ತಿದ್ದಾರೆ. ಅದರಲ್ಲೂ ಸೀರೆ ನಾರಿ ತೌಬಾ ತೌಬಾಗೆ ಡ್ಯಾನ್ಸ್‌ ಮಾಡಿರೋ ವಿಡಿಯೋ ಅಂತೂ ಸೂಪರ್ ಹಿಟ್ ಆಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ತೆರೆಮರೆಯ ಪ್ರತಿಭೆಗಳು ಸಿಕ್ಕಾಪಟ್ಟೆ ಫೇಮಸ್ ಆಗುತ್ತಾರೆ. ಈ ತೌಬಾ ತೌಬಾ ಹಾಡಿಗೆ ಡ್ಯಾನ್ಸ್‌ ಮಾಡಿರೋ ಈ ಸೀರೆ ನಾರಿಯೂ ಅಷ್ಟೇ ಸಖತ್ ವೈರಲ್ ಆಗಿದ್ದಾರೆ. ವಿಕ್ಕಿ ಕೌಶಲ್ ರೀತಿಯ ಡ್ಯಾನ್ಸ್‌ಗೆ ಸ್ಟೆಪ್ ಹಾಕಿರೋ ಈ ಮಹಿಳೆ ಸೆನ್ಸೇಷನ್ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: 6 ಗಂಟೆ ವಾಯ್ಸ್​ ನೋಟ್.. ಅಭಿಮಾನಿಯ ಮೆಸೇಜ್‌ ನೋಡಿ ದಂಗಾದ ನಟಿ ಮೃಣಾಲ್‌ ಠಾಕೂರ್‌; ಏನದು? 

ಸೀರೆ ನಾರಿ ತೌಬಾ, ತೌಬಾ ಹಾಡಿಗೆ ಡ್ಯಾನ್ಸ್‌ ಮಾಡಿರೋ ವಿಡಿಯೋ ಸೂಪರ್ ಹಿಟ್ ಆಗಿದೆ. ಅದು ಎಷ್ಟರ ಮಟ್ಟಿಗೆ ಜನರ ಮನಸು ಕದ್ದಿದೆ ಅಂತ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ. ಮಕ್ಕಳೊಂದಿಗೆ ತೌಬಾ ತೌಬಾಗೆ ನೃತ್ಯ ಮಾಡಿರೋ ಈ ಮಹಿಳೆಯ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 55 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ವಿಕ್ಕಿ ಕೌಶಲ್‌ ಕೂಡ ಫಿದಾ!
ಅಬ್ಬಾ.. ಇದು ಆಶ್ಚರ್ಯವಾದ್ರೂ ನಿಜ. ಸೀರೆಯುಟ್ಟ ತೌಬಾ, ತೌಬಾ ಹಾಡಿಗೆ ಡ್ಯಾನ್ಸ್ ಮಾಡಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ. ಸ್ಯಾಡ್ ರೂಪಾ ಅನ್ನೋ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಮಹಿಳೆಯ ಡ್ಯಾನ್ಸ್‌ ಸದ್ಯ ವಿಕ್ಕಿ ಕೌಶಲ್ ಹಾಡಿನಷ್ಟೇ ಫೇಮಸ್‌ ಆಗಿರೋದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.

ಇನ್ನೂ ಆಶ್ಚರ್ಯದ ವಿಚಾರ ಏನಂದ್ರ ಖುದ್ದು ನಟ ವಿಕ್ಕಿ ಕೌಶಲ್ ಅವರ ಈ ಮಹಿಳೆಯ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ನೋಡಿರೋದಷ್ಟೇ ಅಲ್ಲ ಈ ವಿಡಿಯೋಗೆ ವಾವ್ ಎಂದು ಕೂಡ ಕಮೆಂಟ್ ಹಾಕಿದ್ದಾರೆ. ವಿಕ್ಕಿ ಕೌಶಲ್ ಅವರ ಈ ಕಮೆಂಟ್‌ನಿಂದಾಗಿ ಸೀರೆ ನಾರಿಯ ಈ ಡ್ಯಾನ್ಸ್ ವಿಡಿಯೋ ಮತ್ತಷ್ಟು ಫೇಮಸ್ ಆಗಿದೆ. ಬ್ಯಾಡ್‌ ನ್ಯೂಸ್‌ ಚಿತ್ರದ ತೌಬಾ, ತೌಬಾ ಹಾಡಂತೂ ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment