ರಾಜ್ಯದಲ್ಲಿ ಫೈನಾನ್ಸ್ ಕಿರುಕುಳಕ್ಕೆ ಮತ್ತೆರಡು ಜೀವ ಬಲಿ; ನ್ಯೂಸ್​​ ಫಸ್ಟ್ ವರದಿ ಬೆನ್ನಲ್ಲೇ FIR ದಾಖಲು

author-image
admin
Updated On
ರಾಜ್ಯದಲ್ಲಿ ಫೈನಾನ್ಸ್ ಕಿರುಕುಳಕ್ಕೆ ಮತ್ತೆರಡು ಜೀವ ಬಲಿ; ನ್ಯೂಸ್​​ ಫಸ್ಟ್ ವರದಿ ಬೆನ್ನಲ್ಲೇ FIR ದಾಖಲು
Advertisment
  • ರಾಜ್ಯದಲ್ಲಿ ಇದುವರೆಗೂ ಜೀವ ಬಿಟ್ಟವರ ಸಂಖ್ಯೆ 14ಕ್ಕೆ ಏರಿಕೆ
  • ಫೈನಾನ್ಸ್ ಸಿಬ್ಬಂದಿ ‌ಮನೆಗೆ ಬಂದು ಅವಾಚ್ಯ ಶಬ್ಧಗಳಿಂದ ನಿಂದನೆ
  • ಮನೆ ಗೋಡೆ ಮೇಲೆ ಫೈನಾನ್ಸ್‌ ಸಿಬ್ಬಂದಿ ಬರೆದಿದ್ದಕ್ಕೂ ಸಾವಿಗೆ ಶರಣು

ಸಾಲದ ವ್ಯೂಹ, ಬಡ್ಡಿಯ ಬಲೆ ಬೀಸುವ ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ. ಸರ್ಕಾರ ಎಚ್ಚೆತ್ತು, ಎಚ್ಚರಿಕೆ ನೀಡುವಷ್ಟರಲ್ಲಿ ಫೈನಾನ್ಸ್ ಕಾಟಕ್ಕೆ ಎಷ್ಟೋ ಮಂದಿ ಸಾವಿಗೆ ಶರಣಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಮೈಕ್ರೋ ಫೈನಾನ್ಸ್ ಟಾರ್ಚರ್‌ಗೆ ಜೀವ ಬಿಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಬೆಳಗಾವಿಯ ಬೈಲಹೊಂಗಲ ಪಟ್ಟಣದಲ್ಲಿ ಇಂದು 38 ವರ್ಷದ ರಫೀಕ್ ತಿಗಡಿ ಫೈನಾನ್ಸ್‌ ಕಾಟಕ್ಕೆ ಬಲಿಯಾಗಿದ್ದಾರೆ. ರಫೀಕ್‌ ತಿಗಡಿ ಫೈನಾನ್ಸ್‌ನಲ್ಲಿ 6 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಫೈನಾನ್ಸ್ ಸಿಬ್ಬಂದಿ ‌ಮನೆಗೆ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಬೈಲಹೊಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

publive-image

ಸಿಎಂ ತವರಲ್ಲಿ ಮತ್ತೊಂದು ಬಲಿ!
ಸಿಎಂ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಜೀವ ಪ್ರಾಣ ಕಳೆದುಕೊಂಡಿದೆ. ಪಿರಿಯಾಪಟ್ಟಣದ ಬೆಟ್ಟದಪುರ ಬಸವೇಶ್ವರ ಕಾಲೋನಿ ನಿವಾಸಿ ಸುಬ್ರಹ್ಮಣ್ಯ (37) ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದಾರೆ.

ಸುಬ್ರಹ್ಮಣ್ಯ ಅವರ ಮನೆ ಗೋಡೆ ಮೇಲೆ ಫೈನಾನ್ಸ್‌ ಸಿಬ್ಬಂದಿ ಬಂದು ಸಾಲದ ಬಗ್ಗೆ ಬರೆದು ಹೋಗಿದ್ದರು. ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತ ಮನೆ ಮಾಲೀಕ ಸುಬ್ರಹ್ಮಣ್ಯ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: 608 ಉದ್ಯೋಗ ಆಹ್ವಾನ ಮಾಡಿರುವ ESIC.. ಆರಂಭದಲ್ಲೇ 56,100 ರೂಪಾಯಿ ಸಂಬಳ 

ನ್ಯೂಸ್​​ಫಸ್ಟ್ ವರದಿ ಬೆನ್ನಲ್ಲೇ FIR
ಮೈಸೂರಿನಲ್ಲಿ ಫೈನಾನ್ಸ್ ಕಿರುಕುಳಕ್ಕೆ ಕೃಷ್ಣಮೂರ್ತಿ ಎಂಬುವವರು ಸಾವನ್ನಪ್ಪಿದ್ದು, ಈ ಬಗ್ಗೆ ನ್ಯೂಸ್​ ​​ಫಸ್ಟ್​ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಫೈನಾನ್ಸ್​ಗಳ ವಿರುದ್ಧ ಪೊಲೀಸರು FIR ಹಾಕಿದ್ದು, ನಾಲ್ವರು ಫೈನಾನ್ಸ್ ಸಿಬ್ಬಂದಿಯನ್ನ ಬಂಧಿಸಿದ್ದಾರೆ.

ಕಳೆದ 3 ದಿನಗಳ ಹಿಂದೆ ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಸಾವನ್ನಪ್ಪಿದ್ದರು. ನ್ಯೂಸ್ ​​​ಫಸ್ಟ್​ ಈ ಬಗ್ಗೆ ವಿಸ್ತೃತ ವರದಿ ಬೆನ್ನಲ್ಲೇ ಎಫ್​ಆರ್​ಐ ದಾಖಲಾಗಿದೆ. 22 ವರ್ಷದ ಆಕಾಶ್, BSS ಫೈನಾನ್ಸ್​​ನ ಕಲೆಕ್ಷನ್ ಆಫೀಸರ್, 23 ವರ್ಷದ ಸಿದ್ದರಾಜು​, ಕೂಟ ಫೈನಾನ್ಸ್​ನ ಕಲೆಕ್ಷನ್ ಆಫೀಸರ್, 28 ವರ್ಷದ ಸಿದ್ದರಾಜು, ಫೈನಾನ್ಸ್ ಗ್ರೂಪ್ ರಿಲೇಶನ್ ಮ್ಯಾನೇಜರ್, ಲೋಕೇಶ್(25), ಉಜ್ಜೀವನ್ ಕಸ್ಟಮರ್ ರಿಲೇಶನ್ ಆಫೀಸರ್ ಎಂಬುವವರ ಮೇಲೆ ಸಾಲಗಾರರಿಂದ ಸಾಲ ವಸೂಲಿ ಮಾಡುವಾಗ ಕಿರುಕುಳದ ಆರೋಪದಲ್ಲಿ ಕೇಸ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment