newsfirstkannada.com

BUDGET 2024: ಬಜೆಟ್​​ನಲ್ಲಿ ಯಾವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಗೊತ್ತಾ? ರೈತರಿಗೆ ಸಿಹಿ ಸುದ್ದಿ ಪಕ್ಕಾ!

Share :

Published July 23, 2024 at 11:27am

Update July 23, 2024 at 11:33am

    ಈ ಬಾರಿ 4 ವಿಚಾರಗಳ ಬಗ್ಗೆ ಒತ್ತು ನೀಡಿದ ಸರ್ಕಾರ

    ಭಾರತದ ಹಣದುಬ್ಬರ ಕಡಿಮೆಯಿದೆ ಎಂದ ನಿರ್ಮಲಾ ಸೀತಾರಾಮನ್

    ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ 80 ಕೋಟಿ ಮೀಸಲು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ರವರು ಬಜೆಟ್​ ಮಂಡಿಸಲು ಶುರು ಮಾಡಿದ್ದಾರೆ. ಬಜೆಟ್​ ಮಂಡನೆಗೂ ಮುನ್ನ  ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ಆಯ್ಕೆಯಾಗಿರುವುದನ್ನು ಹೊಗಳಿದ್ದಾರೆ.

ಜನರು ಮೋದಿ ಸರ್ಕಾರದಲ್ಲಿ ವಿಶ್ವಾಸವಿಟ್ಟು 3ನೇ ಬಾರಿ ಆಯ್ಕೆ ಮಾಡಿದ್ದಾರೆ. ನಾವು ಜನರ ಈ ಬೆಂಬಲಕ್ಕೆ ಆಭಾರಿಗಳಾಗದ್ದೇವೆ. ನಮ್ಮ ನೀತಿಗಳಿಗೆ ಬೆಂಬಲ ನೀಡಿದ ಜನರಿಗೆ ಧನ್ಯವಾದಗಳು. ಭಾರತದ ಆರ್ಥಿಕತೆಯ ಬೆಳವಣಿಗೆ ಉಜ್ವಲವಾಗಿದೆ. ಭಾರತದ ಹಣದುಬ್ಬರ ಕಡಿಮೆಯಿದೆ ಎಂದು ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

ಇದನ್ನೂ ಓದಿ: ಬಜೆಟ್​ಗೂ ಮುನ್ನ ಬಂಗಾರದ ಬೆಲೆ ಇಳಿಕೆ! ಇಂದು ಎಷ್ಟಿದೆ ಗೊತ್ತಾ?

ಮಧ್ಯಂತರ ಬಜೆಟ್​ನಲ್ಲಿ ಹೇಳಿದಂತೆ 4 ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಬಡವರು, ಮಹಿಳೆಯರು, ಯುವ ಜನ ಹಾಗೂ ರೈತರ ಬಗ್ಗೆ ಆದ್ಯತೆ ನೀಡಲಾಗಿದೆ. ಅನ್ನದಾತರಿಗೆ ಹೆಚ್ಚಿನ ಎಂಎಸ್​ಪಿಯನ್ನ ನೀಡುವ ಗುರಿಯ ಬಗ್ಗೆ ಘೋಷಣೆ ಮಾಡಿದ್ದಾರೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ 80 ಕೋಟಿ ಜನರಿಗೆ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್​-ಆಸ್ಟ್ರೇಲಿಯಾ ಕ್ರಿಕೆಟ್​​​ ಆಟಗಾರ್ತಿಯರ ನಡುವೆ ಲವ್​! ಉಂಗುರ ಬದಲಾಯಿಸಿಕೊಂಡ ಸಲಿಂಗಿ ಜೋಡಿ

2024-2025r ಬಜೆಟ್​ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್​ ಕಳೆದ ವರ್ಷದ ಸಾಧನೆ ಬಗ್ಗೆ ವಿವರಣೆ ನೀಡಿದ್ದಾರೆ. ಭಾರತದ ಆರ್ಥಿಕತೆ ಸ್ಥಿತವಾಗಿದೆ. ದೇಶದ ಹಣದುಬ್ಬರ ಶೇಕಡಾ 3.1 ರಷ್ಟಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್‌.. ಪೆಟ್ರೋಲ್​-ಡೀಸೆಲ್​ ಬೆಲೆ ಕಡಿಮೆಯಾಗುತ್ತಾ? ಎಷ್ಟಿದೆ?

ಎನ್​ಡಿಎ ಸರ್ಕಾರ ಜನರಿಗಾಗಿ ಉದ್ಯೋಗ, ಕೌಶಲ್ಯ, ಎಂಎಸ್​ಎಂಇ, ಮಧ್ಯಮ ವರ್ಗಕ್ಕೆ ಬಜೆಟ್​ನಲ್ಲಿ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಶಿಕ್ಷಣ, ಉದ್ಯೋಗ, ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BUDGET 2024: ಬಜೆಟ್​​ನಲ್ಲಿ ಯಾವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಗೊತ್ತಾ? ರೈತರಿಗೆ ಸಿಹಿ ಸುದ್ದಿ ಪಕ್ಕಾ!

https://newsfirstlive.com/wp-content/uploads/2024/07/Nirmala-Seetharaman-1.jpg

Load More